ಕರಾವಳಿ

ರಾತ್ರಿ ಮನೆಯಲ್ಲಿ ಮಲಗಿದ್ದ ಯುವತಿ ಬೆಳಿಗ್ಗೆ ಮಿಸ್ಸಿಂಗ್

Pinterest LinkedIn Tumblr

ಉಡುಪಿ: ರಾತ್ರಿ ಮಲಗಿದ್ದ ಯುವತಿಯೋರ್ವಳು ಬೆಳಿಗ್ಗೆ ನಿಗೂಢವಾಗಿ ನಾಪತ್ತೆಯಾಗಿರುವ ಘಟನೆ ಕೋಟದಲ್ಲಿ ನಡೆದಿದ್ದು ಸತತ ಹುಡುಕಾಟದ ಬಳಿಕ ಫೋಷಕರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

kota_kavya_missing

ಕೋಟದ ವಡ್ಡರ್ಸೆ ಗ್ರಾಮದ ಕಾವ್ಯ ಎಂಬಾಕೆಯೇ ಕಾಣೆಯಾದ ಯುವತಿ. ವಡ್ಡರ್ಸೆ ಗ್ರಾಮದ ಮಂಜುನಾಥ ನಿಲಯ ಎಂಬಲ್ಲಿನ ತನ್ನ ಮನೆಯಲ್ಲಿ ರಾತ್ರಿ ಮಲಗಿ ಕೊಂಡ ಕಾವ್ಯಾ ಭಾನುವಾರ ಬೆಳಿಗ್ಗೆ 4:30 ಕ್ಕೆ ನೋಡುವಾಗ ಮನೆಯಿಂದ ಕಾಣೆಯಾಗಿದ್ದಾಳೆ. ಮನೆಯವರು ಸತತ ಹುಡುಕಾಟ ನಡೆಸಿದರೂ ಯಾವುದೇ ಪ್ರಯೋಜನವಾಗದ ಹಿನ್ನೆಲೆ ಸೋಮವಾರದಂದು ಪೋಷಕರು ಕೋಟ ಪೊಲೀಸರಿಗೆ ದೂರು ನೀಡಿದ್ದಾರೆ.

ಕೋಟ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ

Comments are closed.