ಕರ್ನಾಟಕ

ಈತನ ಸಾಧನೆ ಅಂತಿಂಥದ್ದಲ್ಲ…ದೇಶ ಗಡಿ ಕಾಯುತ್ತಲೇ ಐಎಎಸ್ ಪಾಸ್ ಮಾಡಿದ ಬೆಳಗಾವಿಯ ಯೋಧ

Pinterest LinkedIn Tumblr

sainika

ಜೀವನದಲ್ಲಿ ಉನ್ನತವಾದ ಸಾಧನೆ ಅದರ ಜೊತೆಗೆ ಒಬ್ಬ ದೊಡ್ಡ ಅಧಿಕಾರಿಯಾಗಿ ಜನರ ಸೇವೆ ಮಾಡಬೇಕೆಂಬ ಮಹದಾಸೆ ಹೊತ್ತ ಹಾಲಿ ಸೈನಿಕರೊಬ್ಬರು ನಿರಂತರ ಅಧ್ಯಯನದಿಂದ ಮೊದಲ ಯತ್ನದಲ್ಲಿಯೇ ಐಎಎಸ್ ಪರೀಕ್ಷೆಯನ್ನು ಪಾಸ್ ಮಾಡಿ ಇಡೀ ದೇಶದ ಗಮನ ಸೆಳೆದಿದ್ದಾರೆ.

ಅವರೇ ಚಿಕ್ಕೋಡಿ ತಾಲೂಕು ರುಪಿನಾಳ ಗ್ರಾಮದ ವಿನೋದ ಸುಭಾಷ್ ಖೋತ. ಐಎಎಸ್ ಪರೀಕ್ಷೆಯಲ್ಲಿ 364 ನೇ ರ್‍ಯಾಂಕ್ ಪಡೆದು ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ ಖೋತಾ. ಸಾಕಷ್ಟು ಜನರು ನೌಕರಿಗೆ ಸೇರಿಕೊಂಡ ನಂತರ ಓದುವುದನ್ನೇ ನಿಲ್ಲಿಸುತ್ತಾರೆ.

ಆದರೇ, ಸಾಧಿಸುವ ಛಲ ಹೊತ್ತ ಸುಭಾಷ್ “ದೇಶದ ಗಡಿ ಕಾಯ್ದು ಈ ದೇಶದ ಋಣ ತೀರಿಸುತ್ತಿದ್ದೇನೆ. ಇನ್ನು ಬಡವರ ಹಿತ ಕಾಯ್ದು ಈ ಮಣ್ಣಿನ ತೀರಿಸಬೇಕು” ಎಂದು ನಿರಂತರ ಅಭ್ಯಾಸ ಮಾಡಿ ಐಎಎಸ್ ಪರೀಕ್ಷೆ ಪಾಸ್ ಮಾಡಿದ್ದಾರೆ.

ಕಳೆದ ೨೦೧೫ ರಲ್ಲಿ ಪೂರ್ವಭಾವಿ ಪರೀಕ್ಷೆಯನ್ನು ಹಾಗೂ ೨೦೧೬ ರ ಸೆಪ್ಟಂಬರ್‌ನಲ್ಲಿ ನಡೆದ ಮುಖ್ಯ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದ ಸುಭಾಷ್ ಖೋತಾ ಕಳೆದ ಎಪ್ರಿಲ್‌ನಲ್ಲಿ ನಡೆದ ಸಂದರ್ಶನದಲ್ಲಿ ಹೆಚ್ಚು ಅಂಕ ಗಳಿಸಿದ್ದಾರೆ.

ಐಎಎಸ್ ಪರೀಕ್ಷೆ ಪಾಸಾಗಬೇಕಾದರೆ ಸಾಕಷ್ಟು ಪರೀಕ್ಷಾರ್ಥಿಗಳು ಹಗಲು ರಾತ್ರಿ ಓದಿ ಪಟ್ಟಣದಲ್ಲಿ ಕೋಚಿಂಗ್ ತೆಗೆದುಕೊಂಡು ಭಾರಿ ತಯಾರಿ ನಡೆಸಬೇಕಾಗುತ್ತೆ. ಪರೀಕ್ಷೆಗಾಗಿಯೇ ಎರಡ್ಮೂರು ವರ್ಷ ನಿರಂತರ ಅಭ್ಯಾಸ ಮಾಡಬೇಕಾಗುತ್ತದೆ. ಆದರೆ, ಯಾವುದೇ ಕೋಚಿಂಗ್ ಸಹ ಪಡೆಯದೇ ಅತ್ಯುನ್ನತ ಪರೀಕ್ಷೆಯನ್ನು ಸೈನಿಕನಾಗಿ ಕಾರ್ಯ ನಿರ್ವಹಿಸುತ್ತಲೇ ಪಾಸ್ ಮಾಡಿರುವ ವಿನೋದ ಸುಭಾಷ್ ಖೋತ ಲಕ್ಷಾಂತರ ಯುವಕರಿಗೆ ಮಾದರಿಯಾಗಿ ನಿಲ್ಲುತ್ತಾರೆ.

ಎಎಎಸ್ ಪಾಸಾದರೂ ಸಹ ಇವರು ಭಾರತೀಯ ಸೈನಿಕ ಸೇವೆಯಲ್ಲಿ ಇರುವುದರಿಂದ ಐಎಎಸ್ ದರ್ಜೆ ಹುದ್ದೆಯಾದ ಭಾರತೀಯ ರಕ್ಷಣಾ ಸಂಸ್ಥೆಯಲ್ಲಿ ಅಧಿಕಾರಿಯಾಗಿ ಸೇವೆ ಮುಂದುವರಿಸಲಿದ್ಧಾರೆ. ೩ ವರ್ಷಗಳ ಕಾಲ ತರಬೇತಿಯಾಗಿ ನಂತರ ಒಂದು ವರ್ಷ ನ್ಯಾಗಲ್ಯಾಂಡ್‌ನಲ್ಲಿ ಪ್ರೊಬೆಷನರಿಯಾಗಿ ಸೇವೆ ಸಲ್ಲಿಸುವಂತೆ ಮೇಲಧಿಕಾರಿಗಳಿಂದ ಕಳೆದ ಆ.೨೪ರಂದು ಆದೇಶ ಬಂದಿದೆ ಎನ್ನುತ್ತಾರೆ ಖೋತಾ.

ಮನೆಯಲ್ಲಿ ಕಿತ್ತು ತಿನ್ನುವ ಬಡತನ ಇತ್ತು. ಓದಲೂ ಹಣಕಾಸಿನ ನೆರವು ಇರಲಿಲ್ಲ. ಹಾಗಾಗಿ ಪದವಿ ಶಿಕ್ಷಣ ಮುಗಿದ ನಂತರ ೨೦೧೫ರಲ್ಲಿ ಭಾರತೀಯ ಸೇನೆಯಲ್ಲಿ ನರ್ಸಿಂಗ್ ಅಸಿಸ್ಟಂಟ್ ಆಗಿ ಸೇರಿಕೊಂಡೆ. ಅದು ಕೂಡ ದೊಡ್ಡ ಹುದ್ದೆಯಲ್ಲವೇ ಎಂದು ಪ್ರಶ್ನಿಸುತ್ತಾರೆ.

ನಾವು ಕೇವಲ ೨ ಎಕರೆ ಜಮೀನು ಹೊಂದಿದ್ದು ಅದು ಕೂಡ ಉಳುಮೆಗೆ ಯೋಗ್ಯವಾಗಿರಲ್ಲ. ಆ ಭೂಮಿಯನ್ನೇ ನಂಬಿ ನಮ್ಮ ತಂದೆ-ತಾಯಿ ಕೃಷಿ ಮಾಡುತ್ತಿದ್ದಾರೆ. ಮಳೆ ಇಲ್ಲದೇ ಬೆಳೆ ಬರದಿದ್ದರೆ ಉಪವಾಸವೇ ಗತಿಯಾಗಿತ್ತು. ಇಂತವರು ನಮ್ಮ ಸಮಾಜದಲ್ಲಿ ಸಾವಿರಾರು ಜನರಿದ್ದಾರೆ.

ಅವರಿಗೆಲ್ಲಾ ನಾನು ಏನಾದರು ಉಪಕಾರ ಮಾಡಬೇಕಿತ್ತು. ಅದಕ್ಕಾಗಿಯಾದರು ನಾನು ಐಎಎಸ್ ಪಾಸು ಮಾಡಲೇಬೇಕಿತ್ತು ಎಂದು ತಮ್ಮ ಸಾಧನೆ ಹಿಂದಿನ ಪ್ರಯತ್ನದ ಬಗ್ಗೆ ತಿಳಿಸಿದರು.

ಸಿನಿಮಾ ಪ್ರೇರಣೆ:

ಮಲಿಯಾಳಂ ಭಾಷೆಯ ವಿಕ್ರಮ ಆದಿತ್ಯ ಎಂಬ ಸಿನಿಮಾದಲ್ಲಿ ನಾಯಕನಿಗೆ ಬರುವ ಬಡತನ. ಜೊತೆಗೆ ಸಮಾಜದಲ್ಲಿನ ಕೆಲ ತೊಂದರೆಗಳು. ಅದನ್ನೇ ಸವಾಲಾಗಿ ಸ್ವೀಕರಿಸಿ ಸಿನಿಮಾ ನಾಯಕ ಐಪಿಎಸ್ ಪಾಸು ಮಾಡುತ್ತಾನೆ. ಇಲ್ಲಿ ಐಪಿಎಸ್ ಪಾಸು ಮಾಡುವುದೇ ಸಿನಿಮಾದ ಕ್ಲೈಮ್ಯಾಕ್ಸ್ ಆಗಿದೆ.

ಅದೇ ರೀತಿ ಸುಭಾಷ ಅವರು ಏನಾದರು ಸಾಧಿಸಬೇಕೆಂದು ಸೈನಿಕನಾಗಿದ್ದುಕೊಂಡೇ ನಿರಂತರವಾಗಿ ಅಧ್ಯಯನ ಮಾಡುವ ಮೂಲಕ ಉನ್ನತ ಪರೀಕ್ಷೆಯನ್ನು ಪಾಸ್ ಮಾಡಿದೆ. ಆ ಸಿನಿಮಾ ನನ್ನ ಮೇಲೆ ಅಷ್ಟು ಪ್ರಭಾವ ಬೀರಿತ್ತು ಎನ್ನುತ್ತಾರೆ ಸುಭಾಷ್.

ಕೋಚಿಂಗ್ ಇಲ್ಲ:

ಗ್ರಾಮೀಣ ಪ್ರದೇಶದ ಯುವಕನೋರ್ವ ಯಾವುದೇ ಕೋಚಿಂಗ್ ಇಲ್ಲದೆ ಹಗಲು ರಾತ್ರಿ ಕಷ್ಟಪಟ್ಟು ಓದಿ ಮೊದಲ ಪ್ರಯತ್ನದಲ್ಲೇ ಐಎಎಸ್ ಪರೀಕ್ಷೆ ಪಾಸಾಗುವ ಮೂಲಕ ಇಂದಿನ ಯುವಕರಿಗೆ ಸುಭಾಷ ಮಾದರಿಯಾಗಿದ್ದಾರೆ.ಸಾಕಷ್ಟು ಕೋಚಿಂಗ್ ಪಡೆದುಕೊಂಡರು ಸಹ ಐಎಎಸ್ ಪರೀಕ್ಷೆ ಪಾಸಾಗುವುದು ವಿರಳ ಆದರೆ ಈತ ಉನ್ನತ ಹುದ್ದೆ ಪರೀಕ್ಷೆ ಪಾಸಾಗಿರುವುದು ನಿಜಕ್ಕೂ ಹೆಮ್ಮೆ ವಿಷಯ.

ಪರೀಕ್ಷೆಗೆ ತಯಾರಿ

ಸಾಧಿಸಬೇಕೆಂಬ ಛಲ ಹೊಂದಿರುವ ವ್ಯಕ್ತಿ ಸಾಧನೆ ಮಾಡೇ ಮಾಡುತ್ತಾರೆ ಎಂಬುದಕ್ಕೆ ವಿನೋದ ಅವರೇ ನಿದರ್ಶನವಾಗಿದ್ದಾರೆ. ಕಡು ಬಡತನದಲ್ಲಿ ಹುಟ್ಟಿದರೂ ಉನ್ನತ ಮಟ್ಟದ ಸಾಧನೆ ಮಾಡಬೇಕೆಂದು ಪಿಯುಸಿ ಓದುತ್ತಿರುವಾಗಲೇ ಸ್ಪರ್ದಾತ್ಮಕ ಪರೀಕ್ಷೆಗಳಿಗೆ ತಯಾರಿ ಕಾರ್ಯ ಶುರು ಮಾಡಿದ್ದರಂತೆ.

ಇತ್ತಿಚಿನ ದಿನಗಳಲ್ಲಿ ಅಧ್ಯಯನ ಮಾಡುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಆದರೆ ನಿರಂತರ ಅಧ್ಯಯನ ಮಾಡಿದರೆ ಜೀವನದಲ್ಲಿ ಯಶಸ್ಸು ಗ್ಯಾರಂಟಿ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಲ್ಲಿ ಸಾಕಷ್ಟು ಪ್ರತಿಭೆಯಿದೆ.ಅದರ ತಕ್ಕ ಹಾಗೆ ಸಾಧನೆ ಮಾಡಿದರೆ ಯಶಸ್ಸು ಪಡೆಯಲು ಸಾಧ್ಯವಾಗುತ್ತದೆ ಎಂದು ಸುಭಾಷ್ ಅವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದ್ದಾರೆ.

Comments are closed.