ಅಂತರಾಷ್ಟ್ರೀಯ

ಮೊಡವೆಗೆ ಬ್ರೇಕ್ ಹಾಕೋಕೆ ಇಲ್ಲಿದೆ ಕೆಲವು ಮನೆಮದ್ದು…

Pinterest LinkedIn Tumblr

pimple

ಹರೆಯದ ಹುಡುಗ ಹುಡುಗಿಯರಿಗೆ ಮುಖದಲ್ಲಿ ಮೊಡವೆ ಮೂಡೋದು ಕಾಮನ್. ಕೆಲವರಿಗೆ ಅಲ್ಲೋ ಇಲ್ಲೋ ಒಂದೊಂದು ಪಿಂಪಲ್ ಆದ್ರೆ ಇನ್ನೂ ಕೆಲವರಿಗೆ ಇದೇ ಒಂದು ದೊಡ್ಡ ಸಮಸ್ಯೆ. ಹೆಚ್ಚಾಗಿ ಆಯ್ಲಿ ಸ್ಕಿನ್(ಎಣ್ಣೆ ಚರ್ಮ) ಇರೋರಿಗೆ ಮೊಡವೆ ಬೆನ್ನು ಹತ್ತಿದ ಬೇತಾಳ ಇದ್ದಂತೆ. ಅಲ್ಲದೆ ಧೂಳು, ತಲೆಹೊಟ್ಟಿನಿಂದಲೂ ಮೊಡವೆ ಆಗುತ್ತದೆ ಅನ್ನೋದು ತಿಳಿದಿರಲಿ. ಈ ಮೊಡವೆಯ ಗೊಡವೆಗೆ ಬ್ರೇಕ್ ಹಾಕೋಕೆ ಇಲ್ಲಿದೆ ಕೆಲವು ಮನೆಮದ್ದು.

ಎಲ್ಲದಕ್ಕೂ ಮುನ್ನ: ಯಾವುದೇ ಫೇಸ್‍ಪ್ಯಾಕ್ ಹಾಕೋ ಮುನ್ನ ಮುಖದಲ್ಲಿನ ಧೂಳು, ಕೊಳೆಯನ್ನು ತೆಗೆಯಬೇಕು. ಹೀಗಾಗಿ ಮೊದಲಿಗೆ ಮುಖ ತೊಳೆದುಕೊಂಡು ಮೃದುವಾದ ಟವೆಲನ್ನ ಮುಖದ ಮೇಲೆ ಒತ್ತಿ. ಟವೆಲ್‍ನಿಂದ ಜೋರಾಗಿ ಒರೆಸಿದ್ರೆ ಕ್ರಮೇಣ ಮುಖ ಸುಕ್ಕುಗಟ್ಟುತ್ತದೆ. ನೀರು ಇಂಗುವಂತೆ ಮುಖದ ಮೇಲೆ ಟವೆಲ್ ಒತ್ತಿದರೆ ಸಾಕು. ಕಾಟನ್ ಬಟ್ಟೆ ಬಳಸಿದ್ರೂ ಉತ್ತಮ.

> ಟಿಪ್-1: ನಿಮ್ಮ ಅಡುಗೆ ಮನೆಯಲ್ಲೇ ಇದೆ ಔಷಧ
ಏನ್ ಬೇಕು?: 2 ಚಮಚ ಜೇನುತುಪ್ಪ, 1 ಚಮಚ ಚಕ್ಕೆ/ ದಾಲ್ಚಿನಿ ಪುಡಿ
ಏನ್ ಮಾಡ್ಬೇಕು? : ಒಂದು ಬಟ್ಟಲಿನಲ್ಲಿ ಜೇನುತುಪ್ಪ ಮತ್ತು ಚಕ್ಕೆ ಪುಡಿಯನ್ನು ಕಲಸಿಕೊಂಡು ಪೇಸ್ಟ್ ತಯಾರಿಸಿಕೊಳ್ಳಿ. ಇದನ್ನ ಮುಖದ ಮೇಲೆ ಪ್ಯಾಕ್ ಹಾಕಿ. ಮೊಡವೆ ಹೆಚ್ಚಿರುವ ಕಡೆ ಜಾಸ್ತಿ ಪೇಸ್ಟ್ ಹಾಕಿ. ಈ ಪ್ಯಾಕ್ ಹಾಕಿದಾಗ ಮುಖ ಉರಿಯುತ್ತದೆ. ಆದ್ರೆ ಯಾವುದೇ ಸೈಡ್ ಎಫೆಕ್ಟ್ ಆಗೋದಿಲ್ಲ. ಆದ್ದರಿಂದ ಕಣ್ಣಿನ ಮೇಲೆ ಸೌತೇಕಾಯಿಯ ತುಂಡು ಅಥವಾ ಕೋಲ್ಡ್ ನೀರಿನಲ್ಲಿ ಅದ್ದಿದ ಕಾಟನ್ ಬಾಲ್ಸ್ ಇಟ್ಟು ರಿಲ್ಯಾಕ್ಸ್ ಮಾಡಿ 10 ರಿಂದ 15 ನಿಮಿಷದ ನಂತರ ಬೆಚ್ಚಗಿನ ನೀರಿನಲ್ಲಿ ಮುಖ ತೊಳೆಯಿರಿ. ಈ ರೀತಿ 3 ದಿನಗಳಿಗೊಮ್ಮೆ ಮಾಡಬಹುದು, ಮೊಡವೆಯ ಜೊತೆಗೆ ಅದರ ಕಲೆಗಳೂ ಕಡಿಮೆಯಾಗುತ್ತದೆ.

> ಟಿಪ್-2: ಕಿತ್ತಲೆಹಣ್ಣಿನ ಸಿಪ್ಪೆ ಎಸೆಯೋ ಮುನ್ನ ಇಲ್ಲಿ ಕೇಳಿ
ಏನ್ ಬೇಕು?: ಕಿತ್ತಳೆ ಹಣ್ಣಿನ ಸಿಪ್ಪೆ, ನೀರು
ಏನ್ ಮಾಡ್ಬೇಕು?: ಮಿಕ್ಸಿ ಜಾರ್‍ಗೆ ಕಿತ್ತಳೆ ಹಣ್ಣಿನ ಸಿಪ್ಪೆ ಮತ್ತು ನೀರು ಹಾಕಿ ರುಬ್ಬಿಕೊಳ್ಳಿ. ಇದನ್ನ ಮುಖಕ್ಕೆ ಹಚ್ಚಿ 20 ರಿಂದ 25 ನಿಮಿಷಗಳ ನಂತರ ಮುಖ ತೊಳೆಯಿರಿ. ಕಿತ್ತಳೆಹಣ್ಣಿನ ಸಿಪ್ಪೆಯನ್ನ ಬಿಸಿಲಿನಲ್ಲಿ ಒಣಗಿಸಿ ನಂತರ ಪುಡಿ ಮಾಡಿಕೊಂಡು ಇದಕ್ಕೆ ಸ್ವಲ್ಪ ಕಡಲೆಹಿಟ್ಟು ಬೆರೆಸಿ ಪ್ರತಿದಿನ ಮುಖ ತೊಳೆಯಲು ಬಳಸಬಹುದು. ಕಿತ್ತಳೆಹಣ್ಣಿನ ಸಿಪ್ಪೆ ಬದಲು ನಿಂಬೆಹಣ್ಣಿನ ಸಿಪ್ಪೆಯನ್ನೂ ಬಳಸಬಹುದು.

> ಟಿಪ್-3: ಸಿಂಪಲ್ ರೀ…. ಸ್ಟೀಮ್ ತಗೊಳ್ಳಿ
ಏನ್ ಬೇಕು?: ನೀರು, ಒಂದು ಪಾತ್ರೆ, ದೊಡ್ಡ ಟವೆಲ್
ಏನ್ ಮಾಡ್ಬೇಕು?: ಒಂದು ಪಾತ್ರೆಯಲ್ಲಿ ಮುಕ್ಕಾಲು ಭಾಗದಷ್ಟು ನೀರು ಹಾಕಿ ಕುದಿಸಿಕೊಳ್ಳಿ. ನಂತರ ಪಾತ್ರೆಯನ್ನ ಒಲೆಯಿಂದ ಕೆಳಗಿಳಿಸಿ ಪಾತ್ರೆಯ ಮೇಲೆ ಮುಖ ಇಟ್ಟು ತಲೆಯ ಮೇಲೆ ಟವೆಲ್ ಹೊದ್ದುಕೊಂಡು ಸ್ಟೀಮ್ ತಗೊಳ್ಳಿ. ಮುಖದ ಎಲ್ಲಾ ಭಾಗಕ್ಕೆ ಹಬೆ ತಲುಪುವಂತೆ ಮುಖವನ್ನ ತಿರುಗಿಸುತ್ತಿರಬೇಕು. ಒಂದೇ ಕಡೆ ಹಬೆ ಹೊಡೆದರೆ ಅದರ ಶಾಖದಿಂದ ಮುಖ ಸುಟ್ಟಂತೆ ಆಗುತ್ತದೆ. ಸೋ..ಬೀ ಕೇರ್‍ಫುಲ್. ಸ್ಟೀಮ್ ತೆಗೆದುಕೊಳ್ಳೋದ್ರಿಂದ ಮುಖದಲ್ಲಿನ ರಂಧ್ರಗಳು ತೆರೆದುಕೊಂಡು ಕೊಳೆ ಹೊರಬರುತ್ತದೆ. ಸ್ಟೀಮ್ ತೆಗೆದುಕೊಂಡ ನಂತರ ಮುಖಕ್ಕೆ ರೋಸ್ ವಾಟರ್ ಹಚ್ಚಿ. ಹೀಗೆ ಮಾಡೋದ್ರಿಂದ ತೆರೆದುಕೊಂಡಿರೋ ರಂಧ್ರಗಳು ಕ್ಲೋಸ್ ಆಗುತ್ತವೆ. ವಾರಕ್ಕೆ ಒಂದು ಬಾರಿ ಸ್ಟೀಮ್ ತೆಗೆದುಕೊಳ್ಳಬಹುದು.

Comments are closed.