ಕರಾವಳಿ

ಕೋಟ: ಕಾರು ಡಿಕ್ಕಿ ಹೊಡೆದು ಪಾದಾಚಾರಿ ಸಾವು: ಪರಾರಿಯಾದ ಕಾರು ಕೋಟೇಶ್ವರದಲ್ಲಿ ವಶಕ್ಕೆ

Pinterest LinkedIn Tumblr

ಕುಂದಾಪುರ: ರಸ್ತೆ ದಾಟುತ್ತಿದ್ದ ವ್ಯಕ್ತಿಯೋರ್ವರಿಗೆ ಕಾರು ಢಿಕ್ಕಿ ಹೊಡೆದು ಮೃತಪಟ್ಟ ಘಟನೆ ಕೋಟದ ಅಮೃತೇಶ್ವರಿ  ಎದುರಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳವಾರ ರಾತ್ರಿ ಸಂಭವಿಸಿದೆ.

ಕೋಟೇಶ್ವರ ಸಮೀಪದ ಹಳವಳ್ಳಿ ನಿವಾಸಿ ಗೋಪಾಲ್ (38) ಮೃತಪಟ್ಟ ವ್ಯಕ್ತಿ.

Kota_Accident_Death (2) Kota_Accident_Death (1)

ಅವರು ಕೋಟೇಶ್ವರದಲ್ಲಿ ತನ್ನ ನಿತ್ಯದ ಕ್ಯಾಂಟಿನ್ ಕೆಲಸ ಮುಗಿಸಿ ಕೋಟದಲ್ಲಿರುವ ಪತ್ನಿ ಮನೆಗೆ ತೆರಳುತ್ತಿದ್ದರು. ಕೋಟ ಬಳಿ ರಸ್ತೆ ದಾಟುತ್ತಿದ್ದಾಗ ಉಡುಪಿಯಿಂದ ಕುಂದಾಪುರದತ್ತ ಹೋಗುತ್ತಿದ್ದ ಸ್ವಿಪ್ಟ್ ಕಾರು ಢಿಕ್ಕಿ ಹೊಡೆದಿದೆ. ಗಂಭೀರವಾಗಿ ಗಾಯಗೊಂಡ ಗೋಪಾಲ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ನಿಲ್ಲಿಸದೇ ಪರಾರಿಯಾದ ಕಾರು..
ಅಪಘಾತದ ತರುವಾಯ ಕಾರಿನ ಮುಂಭಾಗ ಜಖಂಗೊಂಡಿದ್ದು ಪಾದಾಚಾರಿ ವ್ಯಕ್ತಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದರೂ ಕೂಡ ಕಾರು ಚಾಲಕ ಕಾರನ್ನು ಅಲ್ಲಿ ನಿಲ್ಲಿಸದೇ ಪರರಿಯಾಗಲು ಯತ್ನಿಸಿದ್ದಾನೆ. ಕೂಡಲೇ ಸ್ಥಳೀಯರು ಕಾರನ್ನು ಬೆನ್ನಟ್ಟಿ ಕೋಟೇಶ್ವರ ಬಳಿ ಅಡ್ಡಗಟ್ಟಿದ್ದು ಕರನ್ನು ಚಾಲಕ ಹಾಗೂ ಇತರರ ಸಮೇತ ವಶಕ್ಕೆ ಪಡೆದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.