ಕರಾವಳಿ

ಮತ್ತೆ ರಣಕಹಳೆ ಮೊಳಗಿಸಿದ ಮಾಜಿ ಡಿವೈಎಸ್​ಪಿ ಅನುಪಮಾ ಶೆಣೈ ! ಆಡಿಯೋ ಕ್ಲಿಪ್ಪಿಂಗ್ ಬಹಿರಂಗ….

Pinterest LinkedIn Tumblr

anupama

ಬೆಂಗಳೂರು: ಮಾಜಿ ಡಿವೈಎಸ್ಪಿ ಅನುಪಮಾ ಶೆಣೈ ರಾಜೀನಾಮೆ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದ್ದು ಡಿಜಿಪಿ ಓಂಪ್ರಕಾಶ್ ಜೊತೆ ನಡೆಸಿದ್ದ ಸಂಭಾಷಣೆ ಬಹಿರಂಗವಾಗಿದೆ.ಮಾಜಿ ಕಾರ್ಮಿಕ ಸಚಿವ ಪರಮೇಶ್ವರ್ ನಾಯ್ಕ್, ಡಿಜಿಪಿ ಓಂಪ್ರಕಾಶ್ ಹಾಗೂ ಬಳ್ಳಾರಿ ಐಜಿಪಿ ಮುರುಗನ್ ಜೊತೆ ಅನುಪಮಾ ಶೆಣೈ ಫೋನ್’ನಲ್ಲಿ ಮಾತನಾಡಿರುವ ಸಂಭಾಷಣೆಯ ಆಡಿಯೋ ಕ್ಲಿಪ್ಪಿಂಗ್ ಈಗ ಬಹಿರಂಗವಾಗಿದ್ದು, ಮಾಜಿ ಡಿವೈಎಸ್ಪಿ ಅನುಪಮಾ ಶೆಣೈ ರಾಜೀನಾಮೆ ಪ್ರಕರಣ ಮತ್ತೆ ಗರಿಗೆದರಿದೆ.

ಈ ಆಡಿಯೋದಲ್ಲಿರುವ ಸಂಭಾಷಣೆಯನ್ನು ಇಲ್ಲಿ ನೀಡಲಾಗಿದೆ.

ಮಾಜಿ ಕಾರ್ಮಿಕ ಸಚಿವ ಪರಮೇಶ್ವರ್ ನಾಯಕ್ ಜೊತೆ ಅನುಪಮಾ ಶೆಣೈ ಸಂಭಾಷಣೆ

ಪರಮೇಶ್ವರ್ ನಾಯಕ್ ಪಿಎ: ನಮಸ್ಕಾರ ಡಿಸ್ಟ್ರಿಕ್ ಮಿನಿಸ್ಟರ್ ಮಾತಾಡ್ತಾರೆ ಮೇಡಂ
ಅನುಪಮಾ : ಕೊಡಿ, ಸರ್ ನಮಸ್ತೆ…
ಪರಮೇಶ್ವರ್ ನಾಯಕ್ : ಹಲೋ.. ಏನ್ರಿ ಫೋನ್ ಹೊಲ್ಡ್ ಮಾಡುವಷ್ಟು ತಾಳ್ಮೆ ಇಲ್ವಾ?
ಅನುಪಮಾ : ಇಲ್ಲ ಎಸ್.ಪಿ ಅವರದ್ದು ಕಾಲ್ ಬಂದಿತ್ತು ಬ್ಯೂಸಿ ಇದ್ದೆ ನಾನು

ಪರಮೇಶ್ವರ್ ನಾಯಕ್ : ಎಸ್.ಪಿ ಅವರ ಕಾಲ್ ಬಂದ್ರೆ ಡಿಸ್ಟ್ರಿಕ್ ಮಿನಿಸ್ಟರ್ ಕಾಲ್ ಮಾಡ್ತಿದ್ದೀರಾ ಅಂತಾ ಹೇಳಕಾಗಲ್ವಾ ನಿಮಗೆ
ಅನುಪಮಾ : ಇಲ್ಲ ಆಗಲ್ಲ ಹೇಳಲಿಕ್ಕೆ
ಪರಮೇಶ್ವರ್ ನಾಯಕ್ : ಯಾಕೆ?
ಅನುಪಮಾ : ಮರ್ಯಾದೆ ಕೊಟ್ಟು ಮಾತಾಡಿ ನೀವು ಗೊತ್ತಾಯ್ತಾ..
ಪರಮೇಶ್ವರ್ ನಾಯಕ್ : ಏನಂದೇ.?

ಐಜಿಪಿ ಮುರುಗನ್ ಜೊತೆ ಅನುಪಮಾ ಮಾತು
ಅನುಪಮಾ: ಸರ್ ನಮಸ್ತೆ ಸಾರ್, ನಾನು ಅನುಪಮಾ, ಕೂಡ್ಲಿಗಿ ಡಿವೈಎಸ್‍ಪಿ ಸರ್
ಐಜಿಪಿ ಮುರುಗನ್: ಹ.. ಅನುಪಮಾ ನಮಸ್ತೆ

ಐಜಿಪಿ ಮುರುಗನ್: ಏನ್ ಅದು, ಡಿಸ್ಟ್ರಿಕ್ಟ್ ಇನ್‍ಚಾರ್ಜ್ ಮಿನಿಸ್ಟರ್ ನಿನ್ ಮೇಲೆ ರೇಗ್ತಿದ್ದಾರೆ?
ಅನುಪಮಾ: ಏನಿಲ್ಲ ಸರ್, ಒಂದು ಫೋನ್ ಬಂತು ಸರ್, ಅವರು ಅದನ್ನ ಹೋಲ್ಡ್ ಮಾಡಿ ಇಟ್ಕೊಂಡು ಬಿಟ್ಟರು. ಯಾರೋ ಅವರ ಹತ್ರ ಇದ್ದವರು, ಮಾತಾಡಿರಲಿಲ್ಲ. ಅಷ್ಟರಲ್ಲಿ ಬಳ್ಳಾರಿ ಎಸ್‍ಪಿ ಕಾಲ್ ಮಾಡಿದ್ರು, ಆ ಕಾಲ್ ಕಟ್ ಮಾಡಿ, ಎಸ್‍ಪಿ ಕಾಲ್ ರಿಸೀವ್ ಮಾಡಿದೆ. ನಿನ್ನೆ ನೈಟ್ ಒಬ್ಬ ಮೆಡಿಕಲ್ ಸ್ಟೋರ್‍ಗೆ ನುಗ್ಗಿ ಟ್ಯಾಬ್ಲೆಟ್ ಬೇಕು ಅಂತಾ ಚಾಕು ಹಾಕಿದ್ದ, ಅದು ಎಫ್‍ಐಆರ್ ಆಗಿತ್ತು. ಅದು ಬಳ್ಳಾರಿ ಗ್ರಾಮಾಂತರ ಅಂತೇಳಿಕೊಂಡು ಬಳ್ಳಾರಿ ಎಸ್‍ಪಿಗೆ ಮಿನಿಸ್ಟರ್ ಕಾಲ್ ಮಾಡಿದ್ರು. 10 ನಿಮಿಷ ಅದ್ಮೇಲೆ ನನಗೂ ಕಾಲ್ ಮಾಡಿದ್ರು. ನಾನು ಎಸ್‍ಪಿಗೆ ಕಾಲ್ ಮಾಡಿ ಮಾತಾಡ್ತಿದೆ. ಬಳಿಕ ಕಾಲ್ ಮಾಡಿದ ಮಿನಿಸ್ಟರ್, ಏನು ಬಳಿಕ ಡಿಸ್ಟ್ರಿಕ್ಟ್ ಇನ್‍ಜಾರ್ಜ್ ಮಿನಿಸ್ಟರ್‍ಗೆ 5 ನಿಮಿಷ ಕಾಲ್ ಹೋಲ್ಡ್ ಮಾಡೋದಕ್ಕೆ ಆಗಲ್ವಾ ಅಂತಾ ಕೇಳಿದ್ರು. ಆಗ ನಾನು ಎಸ್‍ಪಿ ಹತ್ರ ಮಾತಾಡ್ತಿದೆ ಅಂದೆ. ಆಗ ಮಿನಿಸ್ಟರ್ ಎಸ್‍ಪಿ ನಿಮಗೆ ದೊಡ್ಡವರು ಅಂದ್ರು. ಆಗ ನಾನು ಮರ್ಯಾದೆ ಕೊಟ್ಟು ಮಾತನಾಡಿ ಅಂತೇಳಿದೆ ಅಷ್ಟೆ ಸರ್. ಸಾರಿ ಸರ್. ಎರಡು ಮೂರು ಸಾರಿ ಹಿಂಗೆ ಆಗಿದೆ.

ಐಜಿಪಿ ಮುರುಗನ್: ಸಾರಿ ನನಗೆ ಏಕೆ, ನೀವು ಹೇಳಿದ್ರಲ್ಲಾ ತಪ್ಪೇನಿಲ್ಲ. ಆದ್ರೆ ಇವರ ಜತೆ ಜಾಸ್ತಿ ಹತ್ತಿರನೂ ಹೋಗಬಾರದು, ದೂರ ಬಿಡಬಾರದು. ಮ್ಯಾನೇಜ್ ಮಾಡಬೇಕು. ಮುಂದೆ ಕೇರ್‍ಫುಲ್ ಆಗಿರಿ.

ಅನುಪಮಾ: ಉಳಿದವರು ಸರ್, ಉಳಿದವರು ನಾಗೇಂದ್ರ, ತುಕರಾಂ ಎಂಎಲ್‍ಎ ಇದ್ದಾರೆ….
ಐಜಿಪಿ ಮುರುಗನ್: ನೋಡಿ ನಾನು ಹೇಳ್ತೀನಿ ಕೇಳಿ. ನಾನು ಎಲ್ಲ ನೋಡಿದ್ದೀನಿ. ಎಲ್ಲರೂ ಒಳ್ಳೆಯವರಾಗಿದ್ರೆ ಜಗತ್ತು ಜಗತ್ತಾಗಿ ಇರಲ್ಲ, ಹಾಗಾಗಿ ನಾವು ಎಲ್ಲ ಮ್ಯಾನೇಜ್ ಮಾಡಬೇಕು. ಹೇಗೆ ಬ್ಯಾಡ್ ಪೀಪಲ್ ಜತೆ ಇರಬೇಕು ಅನ್ನೋದು ಗೊತ್ತಿರಬೇಕು. ನೆಕ್ಸ್ಟ್ ಟೈಮ್ ತಿರುಗಿ ಮಾತಾಡೋದು ಬೇಡ, ಅವರು ಬೇರೆಯವರ ಹತ್ರ ಕ್ಯಾರಿ ಮಾಡ್ತಾರೆ, ಸಿಎಂ ಹತ್ರ ಕಂಪ್ಲೇಂಟ್ ಮಾಡ್ತಾರೆ. ಒಂದು ಸಮಯದಲ್ಲಿ ನಮ್ಮ ಕೆಲಸಕ್ಕೆ ತೊಂದೆರೆಯಾಗುತ್ತೆ. ಓಕೆ ಹೋಗ್ಲಿ ನಾನು ಅವರಿಗೆ ಹೇಳ್ತೀನಿ. ನಾನು ಡಿವೈಎಸ್‍ಪಿಗೆ ಹೇಳಿದ್ದಿನಿ ಅಂತಾ ಹೇಳ್ತೀನಿ. ಓಕೆ ಮುಂದೆ ಹೀಗೆ ಆಗೋದು ಬೇಡ.

ಅನುಮಪಾ: ಓಕೆ ಸರ್.

ಐಜಿಪಿ ಮುರುಗನ್ ಕರೆಯ ಬಳಿಕ ಬೆಂಗಳೂರಿನ ಡಿಜಿ ಓಂಪ್ರಕಾಶ್ ಕಚೇರಿಯಿಂದ ಅನುಪಮಾ ಶೆಣೈ ಅವರಿಗೆ ಕರೆ ಹೋಗುತ್ತದೆ.

ಡಿಜಿ – ಯಾವ ಬ್ಯಾಚ್ ನಿಮ್ದು?
ಅನುಪಮಾ – 2012
ಡಿಜಿ – ಎಷ್ಟು ವರ್ಷದಿಂದ ಅಲ್ಲಿ ವರ್ಕ್ ಮಾಡ್ತಿರೋದು?
ಅನುಪಮಾ – 1 ಒಂದು ವರ್ಷ ನಾಲ್ಕು ತಿಂಗಳು
ಡಿಜಿ – ನಿಮ್ಮ ಫ್ಯಾಮಿಲಿ ಎಲ್ಲಿದೆ?
ಅನುಪಮಾ – ನಾನು ಮದುವೆ ಆಗಿಲ್ಲ, ನನ್ನ ಕುಟುಂಬ ಉಡುಪಿಯಲ್ಲಿದೆ.

ಡಿಜಿ – ಯಾವುದಾದ್ರು ಸಮಸ್ಯೆ ಇದ್ಯಾ ?
ಅನುಪಮಾ – ಇಲ್ಲ
ಡಿಜಿ – ನಿಮ್ಗೆ ಒಂದು ಆಪ್ಶನ್ ಇದೆ, ಉಡುಪಿ ಖಾಲಿ ಇದೆ, ಆದ್ರೆ, ಉಡುಪಿ ನಿಮ್ಮ ಊರೂ ಆಗಿರೋದಿಂದ ಅಲ್ಲಿಗೆ ಕಳಿಸೋಕೆ ಆಗೋಲ್ಲ, ಅದು ಸಮಸ್ಯೆ, ಆದ್ರೆ, ಮಂಗಳೂರಲ್ಲೂ ಖಾಲಿ ಇದೆ.

ಅನುಪಮಾ -ಪನಿಷ್ಮೆಂಟ್ ಟ್ರಾನ್ಸ್ ಫರ್
ಡಿಜಿ – ಪನಿಷ್ಮೆಂಟ್ ಟ್ರಾನ್ಸ್ ಫರ್ ಅಲ್ಲ, ರಿವಾರ್ಡ್ ಟ್ರಾನ್ಸ್ ಫರ್
ಅನುಪಮಾ – ಅರ್ಥ ಮಾಡಿಕೊಳ್ಳುತ್ತೇನೆ.. ಯಾವುದಾದ್ರು ಪ್ರಶರ್ ಇತ್ತಾ ?

ಡಿಜಿ – ನೀವು ಎಲ್ಲಾ ಮರೆತು ಬಿಡಿ… ಇಂಡಿ ಖಾಲಿ ಇದೆ.. ಸಿಐಡಿ, ಐಜಿ ಆಫೀಸ್ ಮಂಗಳೂರಿಲ್ಲಿದೆ…. 5 ನಿಮಿಷ ಬಿಟ್ಟು ಮಾಡ್ಲಾ..?

ಅನುಪಮಾ ಶೆಣೈ – ಓಕೆ ಸರ್ ಓಕೆ…

ಮತ್ತೊಮ್ಮೆ ಡಿಜಿಪಿ ಓಂಪ್ರಕಾಶ್ ಜೊತೆ ಶೆಣೈ ಮಾತು

ಡಿಜಿ – ಹಲೋ..
ಅನುಪಮಾ – ನಮಸ್ತೆ ಸರ್ ನಾನು ಅನುಪಮಾ ಶೆಣೈ ಮಾತನಾಡುತ್ತಿರೋದು
ಡಿಜಿ – ನಿಮಗೆ ಲೆಟರ್ ಸಿಕ್ತಾ..?
ಅನುಪಮಾ – ಹಾ ಸರ್.. ಸಿಕ್ತು.. ನಿನ್ನೆ ರಾತ್ರಿ ಸಿಕ್ತು..
ಡಿಜಿ – ಇವತ್ತಾ..?
ಅನುಪಮಾ – ಹಾ.. ನನಗೆ ಕಳುಹಿಸಿಲ್ಲ..ಕೇಳಿದ ಬಳಿಕ ಸಿಕ್ತು.. ಕಂಟ್ರೋಲ್ ರೂಂನಿಂದ ತರಿಸಿಕೊಂಡೆ ಸರ್..

ಡಿಜಿ – ನಿಮನ್ನು ಇಂಡಿಗೆ ಕಳುಹಿಸಿದ್ರೆ, ಹೋಗ್ತಿರಾ..?
ಅನುಪಮಾ – ಹಾ ಸರ್ ಹೋಗ್ತಿನಿ..
ಡಿಜಿ – ಓಕೆ ಸ್ವಲ್ಪ ಕಾಯಿರಿ.. ಪರಿಶೀಲಿಸಿ ಕ್ಲೀಯರ್ ಮಾಡುವ ಪ್ರಯತ್ನ ಮಾಡುತ್ತೇನೆ
ಅನುಪಮಾ – ಓಕೆ ಸರ್ ಓಕೆ…

Comments are closed.