ಪ್ರಮುಖ ವರದಿಗಳು

ದಿ ಗ್ರೇಟ್ ಕಲಿ ಬೆಂಬಲ, ಎಎಪಿಗೆ ‘ದೈತ್ಯ’ ಬಲ

Pinterest LinkedIn Tumblr

kali

ನವದೆಹಲಿ: ಅರವಿಂದ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷದತ್ತ ಕ್ರೀಡಾಪಟುಗಳು ಒಲವು ತೋರುತ್ತಿ ದ್ದಾರೆ. ಪೊರಕೆ ಚಿಹ್ನೆಯ ಪಕ್ಷಕ್ಕೆ ಮಾಜಿ ಕ್ರಿಕೆಟಿಗ ನವಜೋತ್ ಸಿಂಗ್ ಸಿದ್ದು ಬೆಂಬಲ ನೀಡಿದ ಬೆನ್ನಲ್ಲೇ ಡಬ್ಲ್ಯಡಬ್ಲ್ಯುಎಫ್ ಪಟು ಗ್ರೇಟ್ ಕಾಲಿ ಸಹ ನಿಷ್ಠೆ ಪ್ರದರ್ಶಿಸಿದ್ದಾರೆ.

ಜಗದ್ವಿಖ್ಯಾತ ಕುಸ್ತಿಪಟು, ಡಬ್ಲ್ಯುಡಬ್ಲ್ಯುಎಫ್ ಖ್ಯಾತಿಯ ದಿಲೀಪ್‍ಸಿಂಗ್ ರಾಣಾ ಅಲಿಯಾಸ್ ಗ್ರೇಟ್ ಕಾಲಿ ಪಂಜಾಬ್‍ನಲ್ಲಿ ಎಎಪಿಗೆ ನಿನ್ನೆ ಬೆಂಬಲ ಸೂಚಿಸಿದ್ದಾರೆ. 2017ರ ವಿಧಾನಸಭಾ ಚುನಾವಣೆಯಲ್ಲಿ ಎಎಪಿ ಅಭ್ಯರ್ಥಿ ಪರ ಪ್ರಚಾರದಲ್ಲಿ ಪಾಲ್ಗೊಳ್ಳುವುದಾಗಿ ಗ್ರೇಟ್ ಕಾಲಿ ತಿಳಿಸಿದ್ದಾರೆ.

Comments are closed.