ಕರ್ನಾಟಕ

ಫೇಸ್ ಬುಕ್ ನಲ್ಲಿ ರಾಕೇಶ್ ಸಿದ್ದರಾಮಯ್ಯಗೆ ಅವಾಚ್ಯ ಪದಗಳಿಂದ ನಿಂದನೆ: , ಇಬ್ಬರ ವಿರುದ್ಧ ಎಫ್ ಐಆರ್

Pinterest LinkedIn Tumblr

rakesh-31

ರಾಯಚೂರು: ಇತ್ತೀಚೆಗಷ್ಟೇ ಬೆಲ್ಜಿಯಂನಲ್ಲಿ ಅನಾರೋಗ್ಯಕ್ಕೀಡಾಗಿ ಅಕಾಲಿಕ ಮರಣವನ್ನಪ್ಪಿದ ಸಿಎಂ ಸಿದ್ದರಾಮಯ್ಯ ಅವರ ಪುತ್ರ ರಾಕೇಶ್ ಸಿದ್ದರಾಮಯ್ಯ ಅವರಿಗೆ ನಿಂದಿಸಿದ ಆರೋಪದ ಮೇರೆಗೆ ಇಬ್ಬರ ವಿರುದ್ಧ ಪೊಲೀಸರು ಎಫ್ ಐಆರ್ ದಾಖಲಿಸಿಕೊಂಡಿದ್ದಾರೆ.

ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಲಿಂಗಸಗೂರು ಮೂಲದ ನವೀನ್ ಹಾಗೂ ಶರಣ ಬಸವ ಎಂಬ ವ್ಯಕ್ತಿಗಳು ರಾಕೇಶ್ ಸಿದ್ದರಾಮಯ್ಯ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಪೋಸ್ಟ್ ಅನ್ನು ಶೇರ್ ಮಾಡಿದ್ದರು. ರಾಕೇಶ್ ನಿಧನದ ಹಿನ್ನಲೆಯಲ್ಲಿ ಈ ಪೋಸ್ಟ್ ವ್ಯಾಪಕ ಚರ್ಚೆಗೆ ಕಾರಣವಾಗಿತ್ತು. ಅಲ್ಲದೆ ಯುವಕರ ಈ ಕೃತ್ಯ ವ್ಯಾಪಕ ಖಂಡನೆಗೆ ಗುರಿಯಾಗಿತ್ತು. ಇದೀಗ ಈ ಫೇಸ್ ಬುಕ್ ಪೋಸ್ಟ್ ವಿರುದ್ಧ ಗದ್ದೆಪ್ಪಗೌಡ ಎಂಬುವವರು ದೂರು ದಾಖಲಿಸಿದ್ದರು.

ಐಪಿಸಿ ಸೆಕ್ಷನ್ 504 ಹಾಗೂ 506ರ ಅಡಿಯಲ್ಲಿ ದೂರು ದಾಖಲಿಸಿಕೊಂಡಿದ್ದ ಲಿಂಗಸಗೂರು ಪೊಲೀಸರು ತನಿಖೆ ನಡೆಸಿ ಪ್ರಸ್ತುತ ನವೀನ್ ಹಾಗೂ ಶರಣಬಸವ ಎಂಬುವವರ ವಿರುದ್ಧ ಎಫ್ ಐಆರ್ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Comments are closed.