
ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರು ಪುತ್ರ ರಾಕೇಶ್ ಸಿದ್ದರಾಮಯ್ಯ ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ನಾನೂ ಟಿ.ಕಾಟೂರಿಗೆ ತೆರಳಿದ್ದೆ. ಪಾರ್ಥೀವ ಶರೀರಕ್ಕೆ ಪುಷ್ಪಗುಚ್ಛ ಅರ್ಪಿಸಿ ಪಕ್ಕದಲ್ಲಿ ನಿಂತಿದ್ದೆ. ನನ್ನನ್ನು ಕಂಡ ಮುಖ್ಯಮಂತ್ರಿ ಅವರು ಹತ್ತಿರ ಬರುವಂತೆ ಸನ್ನೆ ಮಾಡಿದರು. ಅವರ ಬಳಿ ಹೋದಾಗ ಬೆಂಗಳೂರಿನ ಪ್ರವಾಹದ ಪರಿಸ್ಥಿತಿ ಹಾಗೂ ಪರಿಹಾರ ಕಾರ್ಯಾಚರಣೆ ಕುರಿತು ವಿಚಾರಿಸಿದರು ಎಂದು ಬೆಂಗಳೂರು ನಗರ ಆಯುಕ್ತ ಮಂಜುನಾಥ್ ಪ್ರಸಾದ್ ತಿಳಿಸಿದ್ದಾರೆ.
ಮಗನ ಅಂತ್ಯಕ್ರಿಯೆ ನಡೆದ ಸಂದರ್ಭದಲ್ಲೂ ಮುಖ್ಯಮಂತ್ರಿ ಅವರು ತೋರಿದ ನಗರದ ಕಾಳಜಿ ಕಂಡು ನಾನು ಅವಾಕ್ಕಾದೆ. ಪರಿಹಾರ ಕಾರ್ಯಾಚರಣೆ ಕುರಿತು ಸಂಕ್ಷಿಪ್ತವಾಗಿ ವಿವರಣೆಯನ್ನೂ ನೀಡಿದೆ ಎಂದು ಮಂಜುನಾಥ್ ಪ್ರಸಾದ್ ಹೇಳಿದ್ದಾರೆ.
ಏನಪ್ಪ, ಪ್ರವಾಹಪೀಡಿತ ಪ್ರದೇಶದಲ್ಲಿ ಏನೇನು ಕೆಲಸ ಮಾಡುತ್ತಿದ್ದೀರಿ? ಜನರ ಬವಣೆ ತಪ್ಪಿಸಿದ್ದೀರಿ ತಾನೆ ಎಂದು ವಿಚಾರಿಸಿದರು. ಜನರಿಗೆ ತೊಂದರೆ ಆಗದಂತೆ ನೋಡಿಕೊಳ್ಳಿ ಎಂದು ಅವರು ಮತ್ತೆ ಮತ್ತೆ ನೆನಪಿಸಿದರು ಎಂದು ಹೇಳಿದರು.ಸಿದ್ದರಾಮಯ್ಯ ಅವರು ಬೆಲ್ಜಿಯಂನಲ್ಲಿ ಇದ್ದಾಗಲೂ ಪ್ರವಾಹದ ಮಾಹಿತಿ ಸಿಗುತ್ತಿದ್ದಂತೆ ಆಯುಕ್ತರನ್ನು ಸಂಪರ್ಕಿಸಿ ಮಾತನಾಡಿದ್ದರಂತೆ.
Comments are closed.