ಧಾರವಾಡ: ಜಮ್ಮು-ಕಾಶ್ಮೀರದ ಸಿಯಾಚಿನ್ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕರ್ನಾಟಕದ ಧಾರವಾಡದ ಯೋಧ ಹಸನ್ ಸಾಬ್ ಬಾಂಬ್ ಸ್ಫೋಟದಲ್ಲಿ ಹುತಾತ್ಮರಾಗಿದ್ದಾರೆ.
ಸಿಯಾಚಿನ್ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಹಸನ್ ಸಾಬ್ ಅವರು ಧಾರವಾಡ ಜಿಲ್ಲೆ ನವಲಗುಂದ ತಾ. ಸೈದಾಪುರ ಗ್ರಾಮದ ಸೈದಾಪುರ ನಿವಾಸಿ. 2013ರಲ್ಲಿ ಭಾರತೀಯ ಸೇನೆಯ ಮದರಾಸ್ ರೆಸಮೆಂಟ್’ಗೆ ನೇಮಕಗೊಂಡಿದ್ದ ಹಸನ್ ಅವರು ಒರಿಸ್ಸಾದಲ್ಲಿ 18 ತಿಂಗಳು ಸೇವೆ ಸಲ್ಲಿಸಿದ್ದರು.
ನಂತರ 2015ಕ್ಕೆ ಕಾಶ್ಮೀರದ ಸೀಯಾಚಿನ್’ಗೆ ವರ್ಗಾವಣೆಗೊಂಡಿದ್ದರು. 2 ತಿಂಗಳ ಹಿಂದೆ ತಂಗಿಯ ಮದುವೆಯ ಸಲುವಾಗಿ ತವರಿಗೆ ಬಂದಿದ್ದ ಅವರು ಬಳಿಕ ಕರ್ತವ್ಯಕ್ಕೆ ತೆರಳಿದ್ದರು. ಅಣ್ಣನ ಅಗಲಿಕೆಯಿಂದ ತಂಗಿ ಪರ್ವಿನ್ ಅಘಾತಗೊಂಡಿದ್ದಾರೆ. ಯೋಧನ ಸಾವಿನಿಂದ ಮನೆಯಲ್ಲಿ ಶೋಕ ಮಡುಗಟ್ಟಿದೆ.
Comments are closed.