ಕರಾವಳಿ

ಪೆಟ್ರೋಲ್ -ಡೀಸೆಲ್ ಬೆಲೆ ಇಳಿಕೆ

Pinterest LinkedIn Tumblr

petrol-aaa

ನವದೆಹಲಿ: ಕಳೆದ ಒಂದು ತಿಂಗಳಿಂದ ತೈಲ ಬೆಲೆ ಕಡಿಮೆಯಾಗಿರುವುದರಿಂದ ಅದರ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸಿರುವ ತೈಲ ಕಂಪನಿಗಳು ಭಾನುವಾರ ಪೆಟ್ರೋಲ್ ಬೆಲೆಯನ್ನು ಮತ್ತೆ ಪ್ರತಿ ಲೀಟರ್ ಗೆ 1.42 ರುಪಾಯಿ ಹಾಗೂ ಡೀಸೆಲ್ ಬೆಲೆಯನ್ನು ಪ್ರತಿ ಲೀಟರ್ ಗೆ 2.01 ರುಪಾಯಿ ಇಳಿಕೆ ಮಾಡಿದೆ.

ಇಂದು ಮಧ್ಯರಾತ್ರಿಯಿಂದ ಪರಿಷ್ಕೃತ ದರ ಜಾರಿಗೆ ಬರಲಿದ್ದು. ಜುಲೈ ತಿಂಗಳಲ್ಲಿ ಒಟ್ಟು ಮೂರು ಬಾರಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇಳಿಕೆಯಾದಂತಾಗಿದೆ.

ಈ ಮುನ್ನ ಜುಲೈ 1 ರಂದು ಪೆಟ್ರೋಲ್ 89 ಪೈಸೆ ಮತ್ತು ಡೀಸೆಲ್ 49 ಪೈಸೆ ಕಡಿಮೆಯಾಗಿತ್ತು. ಜುಲೈ 16 ರಂದು ಪೆಟ್ರೋಲ್ 2.25 ರೂ ಮತ್ತು ಡೀಸೆಲ್ 42 ಪೈಸೆ ಕಡಿಮೆಯಾಗಿತ್ತು. ಇದಕ್ಕೂ ಮುನ್ನ ಮೇ 1 ರಿಂದ ಸತತ ನಾಲ್ಕು ಬಾರಿ ಬೆಲೆ ಏರಿಕೆಯಾಗಿತ್ತು. ಈ ಅವಧಿಯಲ್ಲಿ ಪೆಟ್ರೋಲ್ 4.52 ರೂ. ಮತ್ತು ಡೀಸೆಲ್ 7.72 ರೂ. ಏರಿಕೆಯಾಗಿತ್ತು.

ದೆಹಲಿಯಲ್ಲಿ 62.51 ರೂ. ಇದ್ದ ಪೆಟ್ರೋಲ್ ಬೆಲೆ 61.09 ರೂ.ಗೆ ಇಳಿಕೆಯಾಗಲಿದೆ. ಅದೇ ರೀತಿ ಡೀಸೆಲ್ ಬೆಲೆ 54.28 ರೂ. ನಿಂದ 52.27 ರೂ.ಗೆ ಇಳಿಕೆಯಾಗಲಿದೆ.

Comments are closed.