ಮುಂಬೈ: ಜನಾನುರಾಗಿಯಾಗಿದ್ದ ಪಾರ್ಲೆ ಜಿ ಬಿಸ್ಕೆಟ್ ಇತಿಹಾಸ ಪುಟ ಸೇರಲಿದೆ. ಹೌದು ಮುಂಬೈನಲ್ಲಿ ಸುಮಾರು 87 ವರ್ಷಗಳ ಕಾಲ ಪಾರ್ಲೆ ಜಿ ಬಿಸ್ಕಟ್ ಉತ್ಪಾದಕ ಫ್ಯಾಕ್ಟರಿ ಖಾಯಂ ಆಗಿ ಬಂದ್ ಆಗಲಿದೆ.
1929ರಿಂದ ಪಾರ್ಲೆ ಗ್ಲೂಕೊ ಹೆಸರಿನಲ್ಲಿ ಬಿಸ್ಕಟ್ ಉತ್ಪಾದಿಸುತ್ತಿದ್ದು, 1980ರಲ್ಲಿ ಪಾರ್ಲೆ ಜಿ ಎಂಬ ಹೆಸರಿನಲ್ಲಿ ಉತ್ಪಾದನೆ ಆರಂಭಿಸಿತ್ತು. ಬಹುಬೇಗ ಬೇಡಿಕೆ ಗಿಟ್ಟಿಸಿಕೊಂಡ ಕಂಪನಿ ಪ್ರತಿನಿತ್ಯ 40 ಕೋಟಿ ಬಿಸ್ಕಟ್ ಉತ್ಪಾದನೆ ಮಾಡುತ್ತಿತ್ತು.
ಇತ್ತೀಚಿನ ವರ್ಷದಲ್ಲಿ ಪ್ರಬಲ ಪೈಪೋಟಿ ಎದುರಿಸಲು ವಿಫಲವಾದ ಕಂಪನಿ ನಷ್ಟಕ್ಕೆ ಸಿಲುಕಿ ನಲುಗಿದ್ದು 87 ವರ್ಷ ಇತಿಹಾಸ ಹೊಂದಿರುವ ಪಾರ್ಲೆ ಕಂಪನಿಯನ್ನು ಮುಚ್ಚುವ ನಿರ್ಧಾರವನ್ನು ಚೌಹಾನ್ ಕುಟುಂಬ ತೆಗೆದುಕೊಂಡಿದೆ.
Comments are closed.