
ಶಿಮ್ಲಾ: ಆರು ತಿಂಗಳ ಒಳಗಾಗಿ ದೇಶದಾದ್ಯಂತ ಗೋವಧೆಯನ್ನು ನಿಷೇಧಿಸುವಂತೆ ಹಿಮಾಚಲ ಪ್ರದೇಶ ಹೈಕೋರ್ಟ್ ಕೇಂದ್ರ ಸರ್ಕಾರಕ್ಕೆ ಆಜ್ಞೆ ಮಾಡಿದೆ.
ನಿನ್ನೆ ಹೊರಡಿಸಿದ ಆಜ್ಞೆಯಲ್ಲಿ ಹಸು ಮತ್ತು ಕರುಗಳ ಆಮದು, ರಫ್ತು ಹಾಗೂ ಹಸುವಿನ ಮಾಂಸದ ಮಾರಾಟವನ್ನೂ 6 ತಿಂಗಳ ಒಳಗಾಗಿ ನಿಷೇಧಿಸುವಂತೆ ಆದೇಶಿಸಲಾಗಿದೆ.
ಕೇಂದ್ರದ ವಾದ ತಿರಸ್ಕಾರ
`ಇದು ರಾಜ್ಯಗಳಿಗೆ ಸಂಬಂಧಿಸಿದ ವಿಷಯ ಅದನ್ನು ರಾಜ್ಯ ಸರ್ಕಾರಗಳೇ ನಿಯಂತ್ರಿಸಬೇಕು` ಎಂಬ ಕೇಂದ್ರದ ವಾದವನ್ನು ನ್ಯಾಯಾಲಯ ತಿರಸ್ಕರಿಸಿದೆ.
ನ್ಯಾಯಮೂರ್ತಿಗಳಾದ ರಾಜೀವ್‌ಶರ್ಮ ಮತ್ತು ಸುರೇಶ್ವರ್ ಠಾಕುರ್ ಅವರನ್ನೊಳಗೊಂಡ ವಿಭಾಗೀಯ ನ್ಯಾಯಪೀಠ ಈ ಆಜ್ಞೆ ಹೊರಡಿಸಿದ್ದು ಆಜ್ಞೆಯ ಪ್ರತಿಯನ್ನು ರಾಷ್ಟ್ರೀಯ ಕಾನೂನು ಆಯೋಗದ ಅವಗಾಹನೆಗಾಗಿ ಕಳಿಸುವಂತೆಯೂ ಹೇಳಿದೆ.
Comments are closed.