ಅಂತರಾಷ್ಟ್ರೀಯ

ಸ್ಮಾರ್ಟ್​ಫೋನ್​ನಿಂದ ಆರೋಗ್ಯ ವೃದ್ಧಿಸುತ್ತಂತೆ ! ಅಧ್ಯಯನ ಹೇಳಿರುದೇನು ?

Pinterest LinkedIn Tumblr

Par7751605

ಲಂಡನ್: ಕೈಯಲ್ಲಿ ಸದಾ ಸ್ಮಾರ್ಟ್ಫೋನ್ ಹಿಡಿದುಕೊಂಡಿರುವುದು ಅನಾರೋಗ್ಯಕರ ಚಟುವಟಿಕೆ ಎನ್ನುವುದು ಬಹುತೇಕರ ಅಭಿಪ್ರಾಯ. ಆದರೆ ಸ್ಮಾರ್ಟ್ಫೋನ್ ಮೂಲಕ ಮಾಡಲಾಗುವ ವ್ಯಾಯಾಮದಿಂದ ಮೂಡ್ ಸರಿಮಾಡಿಕೊಳ್ಳಬಹುದು ಮತ್ತು ಆರೋಗ್ಯ ವೃದ್ಧಿಸಿಕೊಳ್ಳ ಬಹುದು ಎಂದು ನೂತನ ಅಧ್ಯಯನ ವೊಂದು ತಿಳಿಸಿದೆ.

ವಿವಿಧ ವ್ಯಾಯಾಮ ಮತ್ತು ದೇಹದಂಡನೆಯನ್ನು ಮಾಡಿಸು ವಂತಹ ಸ್ಮಾರ್ಟ್ಫೋನ್ ಮತ್ತು ಆಪ್ಗಳು ದೇಹವನ್ನು ಸದಾ ಉಲ್ಲಸಿತವಾಗಿ ಮತ್ತು ಹೆಚ್ಚಿನ ಕ್ಷಮತೆ ಹೊಂದಿರುವಂತೆ ರೂಪಿಸುತ್ತವೆ ಎಂದು ಅಧ್ಯಯನ ವರದಿ ತಿಳಿಸಿದೆ.

ಸ್ಮಾರ್ಟ್ಫೋನ್ ಆಧರಿತ ವ್ಯಾಯಾಮಗಳು ಇತ್ತೀಚಿನ ಮತ್ತು ಆಧುನಿಕ ಕ್ರಮದ ಚಟುವಟಿಕೆಗಳೆಂದು ಗುರುತಿಸಲ್ಪಟ್ಟಿದ್ದು, ಮೈಕ್ರೋ ಇಂಟರ್ವೆನ್ಶನ್ಸ್ ಎಂದು ಕರೆಯಲ್ಪಡುತ್ತವೆ. ಈ ವ್ಯಾಯಾಮದಲ್ಲಿ ಪಾಲ್ಗೊಂಡ ಸ್ಪರ್ಧಿ ಕೂಡಾ ಅತ್ಯಂತ ಹೆಚ್ಚಿನ ಸಮರ್ಥನಾಗಿರುವುದು ಅಧ್ಯಯನದಲ್ಲಿ ಕಂಡುಬಂದಿದೆ.

ಬಳಿಕ ಈ ರೀತಿಯ ವ್ಯಾಯಾಮದಿಂದ ಹೆಚ್ಚಿನ ಪ್ರಯೋಜನ ಪಡೆದುಕೊಂಡಿದ್ದಾಗಿ ಅವರು ಹೇಳಿಕೊಂಡಿದ್ದಾರೆ. ಆದರೆ ಇದು ವೈದ್ಯರು ಸೂಚಿಸುವ ಪರಿಹಾರಗಳಿಗೆ ಪರ್ಯಾಯವಲ್ಲ, ಕೆಲವೇ ಸಮಸ್ಯೆಗಳಿಗೆ ಇದರಿಂದ ಪ್ರಯೋಜನವಾಗಬಹುದು.

Comments are closed.