ಕರ್ನಾಟಕ

ಭಾರತದಲ್ಲಿ ಭಿಕ್ಷುಕರ ಸಂಖ್ಯೆ 3.72 ಲಕ್ಷ

Pinterest LinkedIn Tumblr

Begging

ನವದೆಹಲಿ: ಭಾರತದಲ್ಲಿನ ಭಿಕ್ಷುಕರ ಅಂಕಿ ಅಂಶವನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ್ದು, ಒಟ್ಟು 3.7 ಲಕ್ಷ ಜನರು ಭಿಕ್ಷಾಟನೆಗೆ ಮೊರೆ ಹೋಗಿದ್ದು, ಇದರಲ್ಲಿ ಮುಸ್ಲಿಮ್ ಜನಾಂಗದವರು ಶೇಕಡಾ 25ರಷ್ಟಿದ್ದರೆ, ಹಿಂದುಗಳು ಶೇ.72ರಷ್ಟು ಇದ್ದಾರೆ. ಅಂಕಿ ಅಂಶಗಳ ಪ್ರಕಾರ ಪ್ರತಿ ನಾಲ್ಕನೇ ಭಿಕ್ಷುಕ ಮುಸ್ಲಿಮನಾಗಿದ್ದಾನೆ.

ಹೌದು, ಭಾರತದಲ್ಲಿ ಭಿಕ್ಷಾಟನೆ ನಿಮೂಲನ ಮಾಡಲು ಹಲವು ಪ್ರಯತ್ನ ಮಾಡಿದರು ಯಾಕೋ ಸಫಲವಾಗುತ್ತಿಲ್ಲ. ಜನಗಣತಿಯಲ್ಲಿನ ದತ್ತಾಂಶದ ಪ್ರಕಾರ 72.89 ಕೋಟಿ ಜನರಿಗೆ ಅಧಿಕೃತ ಆದಾಯದ ಮೂಲವಿಲ್ಲ. ಇದರಲ್ಲಿ 3.7 ಲಕ್ಷ ಜನರು ಭಿಕ್ಷೆ ಬೇಡಿ ಜೀವನ ಸಾಗಿಸುತ್ತಿದ್ದಾರೆ. 2001ರಲ್ಲಿ ಈ ಪ್ರಮಾಣ ಅಧಿಕವಾಗಿದ್ದು, 6.3 ಲಕ್ಷ ಜನರು ಭಿಕ್ಷಾಟನೆ ನಡೆಸಿ ಜೀವನ ಸಾಗಿಸುತ್ತಿದ್ದರು. ಈ ಸಂಖ್ಯೆಯೊಂದಿಗೆ ಹೋಲಿಕೆ ಮಾಡಿ ನೋಡಿದರೆ ಶೇ 40 ರಷ್ಟು ಇಳಿಕೆ ಕಂಡಿದೆ.

ಅಲ್ಪಸಂಖ್ಯಾತರಾಗಿರುವ ಮುಸ್ಲಿಂ ಜನಾಂಗದಲ್ಲಿ ಕೂಡ ನಿರುದ್ಯೋಗಿಗಳ ಪ್ರಮಾಣದಲ್ಲಿ ಏರಿಕೆಯಾಗಿದೆ. ಇದರಿಂದಾಗಿ ಭಿಕ್ಷುಕರ ಪ್ರಮಾಣದಲ್ಲಿ ಏರಿಕೆಯಾಗಿದೆ ಎಂದು ಭಾರತ ಸರ್ಕಾರ ತಿಳಿಸಿದೆ. ಭಾರತದಲ್ಲಿ ಒಟ್ಟು ಜನಸಂಖ್ಯೆಯಲ್ಲಿ ಶೇ 14.25ರಷ್ಟು ಮುಸ್ಲಿಮರಿದ್ದಾರೆ. ಇದರಲ್ಲಿ 92 ಸಾವಿರ ಜನ, ಅಂದರೇ ಶೇಕಡಾ 25ರಷ್ಟು ಜನತೆ ಭಿಕ್ಷೆಯನ್ನೇ ತಮ್ಮ ವೃತ್ತಿಯನ್ನಾಗಿಸಿಕೊಂಡಿದ್ದಾರೆ. ಇನ್ನು ಹಿಂದುಗಳಲ್ಲಿ 2,68, 837 ಜನರು ಭಿಕ್ಷೆ ಬೇಡುತ್ತಿದ್ದಾರೆ.

ಲಿಂಗವಾರು ಹಿಂದು ಪುರುಷರಲ್ಲಿ 1,51,343 ಪುರುಷರು ಹಾಗೂ 1,17,494 ಮಹಿಳೆಯರು ಭಿಕ್ಷೆ ಬೇಡುತ್ತಿದ್ದು, ಮುಸ್ಲಿಮ್ ಜನಾಂಗದಲ್ಲಿ 40, 454 ಪುರುಷರು ಮತ್ತು 52, 306 ಮಹಿಳೆಯರು ಸಾರ್ವಜನಿಕರ ಮುಂದೆ ಅಂಗಲಾಚುತ್ತಿದ್ದಾರೆ.

ಸಿಖ್ ಶೇ 0.45, ಬೌಧ್ಧರು ಶೇ 0.25, ಜೈನರು ಶೇ 0.06 ಹಾಗೂ ಇತರೆ ಶೇ 0.3ರಷ್ಟು ಭಾರತದಲ್ಲಿ ಭಿಕ್ಷೆ ಬೇಡುತ್ತಿದ್ದಾರೆ.

Comments are closed.