ಅಂತರಾಷ್ಟ್ರೀಯ

ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಪಾಕಿಸ್ತಾನ ಧ್ವಜಕ್ಕೆ ಬೆಂಕಿ

Pinterest LinkedIn Tumblr

paksitan-flag-burnts

ನೀಲಂ ವ್ಯಾಲಿ: ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ (ಪಿಓಕೆ) ಪಾಕ್ ಸರ್ಕಾರದ ವಿರುದ್ಧ ಆಕ್ರೋಶಗೊಂಡಿರುವ ಸಾರ್ವಜನಿಕರು ಪಾಕಿಸ್ತಾನ ಧ್ವಜಕ್ಕೆ ಬೆಂಕಿ ಇಟ್ಟು, ಬ್ಯಾನರ್ಗಳಲ್ಲಿರುವ ಜನಪ್ರತಿನಿಧಿಗಳ ಮುಖಕ್ಕೆ ಮಸಿ ಬಳಿದರು.

41 ವಿಧಾನಸಭೆ ಸ್ಥಾನಗಳ ಪೈಕಿ 32 ಸ್ಥಾನಗಳಲ್ಲಿ ಪ್ರಧಾನಿ ನವಾಜ್ ಷರೀಪ್ ನೇತೃತ್ವದ ಪಾಕಿಸ್ತಾನದ ಆಡಳಿತಾರೂಢ ಮುಸ್ಲಿಂ ಲೀಗ್ ನವಾಜ್(ಪಿಎಮ್ಲ್ – ಎನ್) ಪಕ್ಷಕ್ಕೆ ದಕ್ಕಿರುವ ಗೆಲುವು ಪಾರದರ್ಶಕವಾಗಿಲ್ಲ, ಪಕ್ಷದ ಗೆಲುವಿಗೆ ಅಕ್ರಮ ಚಟುವಟಿಕೆ ಕಾರಣವಾಗಿವೆ ಎಂದು ಆರೋಪಿಸಿ ಬೀದಿಗಿಳಿದ ಜನತೆ ಪಾಕಿಸ್ತಾನ ಧ್ವಜ ದಹಿಸಿದೆ.

ಜನರ ಸಂಕಷ್ಟಗಳಿಗೆ ಸ್ಪಂದಿಸದೆ ಭಯೋತ್ಪಾದನೆಗೆ ಒತ್ತು ನೀಡುತ್ತಿರುವ ಪಿಓಕೆಯಲ್ಲಿ ಷರೀಫ್ ವಿರುದ್ಧ ಘೊಷಣೆ ಹೆಚ್ಚಿವೆ. ಪಿಓಕೆ ಜನ ಭಾರತ ಸೇರಲು ಉತ್ಸುಕರಾಗಿದ್ದಾರೆ ಎಂದು ಸ್ಥಳೀಯ ಮುಸ್ಲಿಂ ನಾಯಕರೊಬ್ಬರು ಹೇಳಿದ್ದರು. ಪಾಕ್ ವಿರುದ್ಧ ಭುಗಿಲೆದ್ದಿರುವ ಜನಾಕ್ರೋಶ ಯಾವ ಮಟ್ಟಕ್ಕೆ ಮುಟ್ಟುವುದೊ ಕಾದು ನೋಡಬೇಕಾಗಿದೆ.

Comments are closed.