
ಮುಂಬೈ: ಅಪ್ರಾಪ್ತ ವಯಸ್ಸಿನ ಅನಾಥ ಬಾಲಕಿಯನ್ನು ಬಲವಂತವಾಗಿ ಮದುವೆ ಮಾಡಿಕೊಂಡು, ನಂತರ ಆ ಬಾಲಕಿಯನ್ನು 50 ಸಾವಿರ ರೂ.ಗಳಿಗೆ ಮನೆಗೆಲಸಕ್ಕಾಗಿ ಮಹಿಳೆಯೊಬ್ಬಳಿಗೆ ಮಾರಾಟ ಮಾಡಿರುವ ಪಾಶವೀ ಘಟನೆ ಇಲ್ಲಿ ನಡೆದಿದೆ.
ಉತ್ತರ ಪ್ರದೇಶದ ಬನಾರಸ್ ವ್ಯಕ್ತಿಯೊಬ್ಬ ದೆಹಲಿಯಲ್ಲಿ ಅನಾಥಾ ಶ್ರಮದಲ್ಲಿದ್ದ. 14 ವರ್ಷದ ಪರದೇಶಿ ಹುಡುಗಿಯನ್ನು ಕರೆತಂದು ಬಲವಂತವಾಗಿ ಮದುವೆ ಮಾಡಿಕೊಂಡಿದ್ದಾನೆ. ಕೆಲವು ದಿನಗಳ ನಂತರ ಕೆಲಸ ಕೊಡಿಸುವುದಾಗಿ ನಂಬಿಸಿ ಮುಂಬೈಗೆ ಕರೆದುಕೊಂಡು ಬಂದು ಇಲ್ಲಿನ ಲಿಂಕ್ ರೋಡ್‍ನಲ್ಲಿರುವ ಮಲಾಡ್‍ನ ಮಹಿಳೆಯೊಬ್ಬಳಿಗೆ ಮನೆಗೆಲಸಕ್ಕಾಗಿ 50 ಸಾವಿರ ರೂ.ಗಳಿಗೆ ಮಾರಾಟ ಮಾಡಿದ್ದಾರೆ.
ತನ್ನನ್ನು ಮದುವೆಯಾಗಿದ್ದ ವ್ಯಕ್ತಿ ಪ್ರತಿದಿನ ನನ್ನನ್ನು ಹೊಡೆದು ಹಿಂಸಿಸುತ್ತಿದ್ದ ಎಂದು ಬಾಲಕಿ ಪೊಲೀಸರಿಗೆ ತಿಳಿಸಿದ್ದಾಳೆ. ಬಾಲಕಿಯ ತಲೆಯಲ್ಲಿ ದೊಡ್ಡ ಗಾಯಗಳಾಗಿವೆ. ಇದಕ್ಕೂ ಮೊದಲು ಮಲಾಡ್‍ನ ಮಹಿಳೆ ಮನೆ ಬಳಿಯಿದ್ದ ಸೆಕ್ಯುರಿಟಿಗಾರ್ಡ್‍ಗಳಿಗೆ ಬಾಲಕಿ ತನ್ನ ದುಸ್ಥಿತಿಯ ಬಗ್ಗೆ ತಿಳಿಸಿದ್ದಾಳೆ. ಆಗ ಅವರು ಸಮೀಪದ ಪೊಲೀಸ್ ಠಾಣೆಗೆ ಹೋಗಿ ಪೊಲೀಸರೆದುರು ವಿಷಯ ತಿಳಿಸುವಂತೆ ಸಲಹೆ ನೀಡಿದ್ದಾರೆ. ಪೊಲೀಸ್ ಠಾಣೆಗೆ ಬಂದ ಬಾಲಕಿ ದೂರು ನೀಡಿದ್ದಾಳೆ.
ಪ್ರಕರಣ ದಾಖಲಿಸಿಕೊಂಡಿದ್ದು ಮುಂದಿನ ಕ್ರಮ ಕೈಗೊಳ್ಳಲಾಗುವುದು. ಸದ್ಯ ಬಾಲಕಿಯನ್ನು ಆಸ್ಪತ್ರೆಗೆ ಕಳುಹಿಸಿದೆ. ಮಾರಾಟ ಮಾಡಿದ ವ್ಯಕ್ತಿ, ಖರೀದಿಸಿದ ಮಹಿಳೆ ವಿರುದ್ದ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿ ಸುಧೀರ್ ಮದದಿಕ್ ಹೇಳಿದ್ದಾರೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳವುದಾಗಿ ಪೊಲೀಸ್ ಜಂಟಿ ಆಯುಕ್ತರಾದ ದೇವೇನ್ ಭಾರರ್ತಿ ತಿಳಿಸಿದ್ದಾರೆ.
Comments are closed.