ಪ್ರಮುಖ ವರದಿಗಳು

ಇದು ಅಂತಿಂಥ ಲವ್ ಸ್ಟೋರಿಯಲ್ಲ…ಮಗಳೇ ಮುಂದೆ ನಿಂತು ತಾಯಿಯನ್ನು ಮೊದಲ ಪ್ರಿಯಕರನ ಒಟ್ಟುಗೂಡಿಸಿದಳು

Pinterest LinkedIn Tumblr

love1

ಕೊಲ್ಲಂ: ಮೂರು ದಶಕಗಳ ಬಳಿಕ ತಾಯಿ ಮತ್ತು ಪ್ರಿಯಕರನನ್ನು ಒಟ್ಟುಗೂಡಿಸಿ ಅವರಿಬ್ಬರು ಮದುವೆಯಾಗಲು ನೆರವಾಗುವ ಮೂಲಕ ಮಗಳು ಅತಿರಾ ದಥನ್ ಸುದ್ದಿಯಾಗಿದ್ದಾಳೆ.

68 ವರ್ಷದ ವಿಕ್ರಮನ್ ಮತ್ತು 52 ವರ್ಷದ ತಾಯಿ ಅನಿತಾ ಜುಲೈ 21ರಂದು ಮದುವೆಯಾಗಿದ್ದಾರೆ. ಅವರ ಮದುವೆ, ಪ್ರೇಮಕಥೆ,ನಿಜವಾದ ಪ್ರೀತಿಯ ಮೇಲಿನ ನಂಬಿಕೆ ಕುರಿತು ಮಗಳು ಅತಿರಾ ಮತ್ತು ಅನಿತಾ ಪೋಸ್ಟ್‌ಮಾಡಿದ್ದಾರೆ.

love

ತಾಯಿ ಅನಿತಾ ಅವರಿಗೆ ಹತ್ತನೇ ತರಗತಿಯಲ್ಲಿರುವಾಗ (1984) 32 ವರ್ಷದ ಹಿಂದೆ ಸಿಪಿಎಂ ಮುಖಂಡ ಜಿ. ವಿಕ್ರಮನ್ ಎಂಬವರ ಜತೆ ಪ್ರೇಮಾಂಕುರವಾಗಿತ್ತು. ಆದರೆ ಸೇನೆಯಲ್ಲಿ ಅಸಿಸ್ಟಂಟ್‌ಎಂಜಿನಿಯರ್‌ಆಗಿದ್ದ ತಂದೆ ಅನಿತಾ ಮತ್ತು ವಿಕ್ರಮನ್ ಅವರ ಸಂಬಂಧವನ್ನು ಒಪ್ಪಿರಲಿಲ್ಲ. ಕೆಲವು ವರ್ಷದ ಬಳಿಕ ತಂದೆ ಬೇರೆ ವ್ಯಕ್ತಿಯೊಂದಿಗೆ ಅನಿತಾ ಅವರ ಮದುವೆ ಮಾಡಿಸಿದರು. ಮದ್ಯವ್ಯಸನಿಯಾಗಿದ್ದ ಆತ ಅಶಿಲಿ ಮತ್ತು ಅತಿರಾ ಎಂಬ ಇಬ್ಬರು ಹೆಣ್ಣುಮಕ್ಕಳನ್ನು ಕೈಗಿತ್ತು ಆತ್ಮಹತ್ಯೆ ಮಾಡಿಕೊಂಡಿದ್ದ.

ಇತ್ತ ಅನಿತಾ ಅವರ ಮದುವೆಯಿಂದ ಮನನೊಂದಿದ್ದ ವಿಕ್ರಮನ್ ಕೊಲ್ಲಂನಿಂದ ಛವರಾಗೆ ಬಂದು ಮದುವೆ, ಕುಟುಂಬ ಇಲ್ಲದೆ ಮೂರು ದಶಕಗಳಿಂದ ಸಿಪಿಎಂ ಕಾರ್ಯಕರ್ತನಾಗಿ ಕೆಲಸ ಮಾಡುತ್ತಿದ್ದರು. ಅನಿತಾ ಮಕ್ಕಳಿಗೆ ಶಿಕ್ಷಣ ನೀಡಿ ಉತ್ತಮ ಬದುಕು ಕಟ್ಟಿಕೊಳ್ಳಲು ನೆರವಾದರು.

ಮಕ್ಕಳಿಬ್ಬರೂ ತಾಯಿಯ ಮೊದಲ ಪ್ರೇಮದ ವಿಚಾರ ತಿಳಿದಂದಿನಿಂದ ಅವರಿಬ್ಬರನ್ನೂ ಮತ್ತೆ ಒಟ್ಟು ಸೇರಿಸಬೇಕು ಎಂದು ಬಯಸಿದ್ದರು. ಆದರೆ ಮಕ್ಕಳಿಬ್ಬರ ಮದುವೆಯ ಬಳಿಕವೇ ನಮ್ಮ ಜೀವನದ ಬಗ್ಗೆ ಯೋಚಿಸುವುದಾಗಿ ಅನಿತಾ ಮತ್ತು ವಿಕ್ರಮನ್ ಹೇಳಿದ್ದರು. ಎರಡು ತಿಂಗಳ ಹಿಂದೆ ಅತಿರಾಳ ಮದುವೆಯಾಗಿದೆ. ಬಳಿಕ ಅನಿತಾ ಅವರ ತಂದೆ ಬಹಳ ಕಾಲದಿಂದ ಕಾಯುತ್ತಿದ್ದ ಈ ಮದುವೆಯ ಕಾರ್ಯಕ್ರಮವನ್ನು ಆಯೋಜಿಸಿದ್ದರು.

Comments are closed.