ಅಬುಧಾಬಿ: ಜಗತ್ತಿನ ಮೊದಲ ಸೌರಶಕ್ತಿ ಚಾಲಿತ ವಿಮಾನ ಸೋಲಾರ್‌ಇಂಪಲ್ಸ್‌ಭೂ ಪ್ರದಕ್ಷಿಣೆ ಮುಗಿಸಿ ಯುಎಇಯಲ್ಲಿ ಮಂಗಳವಾರ ಬಂದಿಳಿದಿದೆ. ವಿಮಾನ ಕಳೆದ ವರ್ಷದ ಮಾರ್ಚ್9ರಂದು ತನ್ನ ಪ್ರಯಾಣವನ್ನು ಆರಂಭಿಸಿತ್ತು. ಯಾತ್ರೆಯ ಅಂತಿಮ ಚರಣವಾಗಿ ಈಜಿಪ್ಟ್ ನ ಕಾರಿಯೋದಿಂದ ಹೊರಟು 2,763 ಕಿ.ಮೀ. ದೂರವನ್ನು 48 ಗಂಟೆಗಳಲ್ಲಿ ಕ್ರಮಿಸಿ ಅಬುಧಾಬಿಯ ಅಲ್‌ಬತೀನ್ ಎಕ್ಸಿಕ್ಯೂಟಿವ್ ಏರ್‌ಪೋರ್ಟ್‌ನಲ್ಲಿ ಬಂದಿಳಿದಿದೆ.
ಇದೇ ನಿಲ್ದಾಣದಿಂದ ವಿಮಾನ ತನ್ನ ಪ್ರಯಾಣವನ್ನು ಆರಂಭಿಸಿತ್ತು. ಪ್ರಯಾಣದ ವೇಳೆ ಒಂದೇ ಒಂದು ಹನಿ ಇಂಧನ ಬಳಸದೇ ಕೇವಲ ಸೌರಶಕ್ತಿಯಿಂದಲೇ ಹಾರಾಟ ನಡೆಸಿದ ಹೆಗ್ಗಳಿಕೆಗೆ ಸೋಲಾರ್‌ಇಂಪಲ್ಸ್‌ಪಾತ್ರವಾಗಿದೆ. ಈ ವಿಮಾನ ನಾಲ್ಕು ಖಂಡಗಳು, ಎರಡು ಮಹಾಸಾಗರಗಳು, ಮೂರು ಸಮುದ್ರಗಳನ್ನು ಹಾದು 42,000 ಕಿ.ಮೀ ಪ್ರಯಾಣವನ್ನು ಪೂರ್ಣಗೊಳಿಸಿದೆ. ವಿಮಾನ ಒಟ್ಟಾರೆ ಗಂಟೆಗೆ 80 ಕಿ.ಮೀ. ವೇಗದಲ್ಲಿ ಸಂಚರಿಸಿದೆ.
Comments are closed.