ಅಂತರಾಷ್ಟ್ರೀಯ

ತೂಕ ಇಳಿಸಿಕೊಳ್ಳಲ್ಲು ಇಲ್ಲಿದೆ ಆಹಾರದ ಟಿಪ್ಸ್…

Pinterest LinkedIn Tumblr
Diet?
Diet?

ಆರೋಗ್ಯಕರ ದೇಹ ಎಷ್ಟು ಅಗತ್ಯ ಎನ್ನುವುದು ನಮಗೆಲ್ಲ ಗೊತ್ತು. ಆದರೆ ವ್ಯಾಯಾಮದಿಂದಷ್ಟೇ ತೂಕ ಇಳಿಸಲು ಸಾಧ್ಯವಿಲ್ಲ. ಸೇವಿಸುವ ಆಹಾರವೂ ಮುಖ್ಯವಾಗುತ್ತದೆ. ತೂಕ ಇಳಿಸಲು ಸಾಧ್ಯವಾಗುವ ಅಂತಹ ಆರೋಗ್ಯಕರ ಆಹಾರಗಳ ವಿವರ ಇಲ್ಲಿದೆ.

► ಹೆಸರು ಬೇಳೆ ಕಡಿಮೆ ಕೊಬ್ಬು ಮತ್ತು ಶ್ರೀಮಂತ ಫೈಬರ್ ಅಂಶವಿರುವ ಕಾರಣ ಹೊಟ್ಟೆಯನ್ನು ತುಂಬಿಸಿಡುತ್ತದೆ. ವಿಟಮಿನ್ ಎ, ಬಿ, ಸಿ ಮತ್ತು ಇ ಇರುವ ಹೆಸರು ಬೇಳೆ ಸಕ್ಕರೆ ಕಾಯಿಲೆಯಿಂದ ದೂರವಿಡುತ್ತದೆ.

► ಪಾಲಾಕ್ ಸೊಪ್ಪು ಕ್ಯಾಲರಿ ಇಳಿಸಲು ಹೆಸರುವಾಸಿ. ತೂಕ ಇಳಿಸುವಲ್ಲಿ ಕ್ಯಾಲರಿಗಳ ಮಹತ್ವ ನಮಗೆಲ್ಲ ತಿಳಿದೇ ಇದೆ. ಪಾಲಾಕ್ ಸೊಪ್ಪಲ್ಲಿ ಕಬ್ಬಿಣಂಶ, ಕ್ಯಾಲ್ಸಿಯಂ, ಮೆಗ್ನೇಶಿಯಂ ಮತ್ತು ಆಂಟಿ ಆಕ್ಸಿಡೆಂಟ್ ಗಳೂ ಇವೆ. ಇವು ನಿಮ್ಮ ಆರೋಗ್ಯ ರಕ್ಷಿಸುತ್ತವೆ.

► ಬೀಟ್‌ರೂಟ್ ಗಳು ರಕ್ತಕ್ಕೆ ಸಂಬಂಧಿಸಿದ ರೋಗಗಳ ನಿವಾರಣಾ ಶಕ್ತಿಗೆ ಪ್ರಸಿದ್ಧ. ಇವುಗಳು ತೂಕ ಇಳಿಸಲೂ ಸಹಕಾರಿ. ಕಡಿಮೆ ಕ್ಯಾಲರಿ ಮತ್ತು ಅಧಿಕ ಫೈಬರ್ ಇರುವ ಕಾರಣ ತೂಕ ಇಳಿಸಲು ಉತ್ತಮ ಆಹಾರ. ಸಲಾಡ್ ಅಥವಾ ಜ್ಯೂಸ್ ಮಾಡಿ ಕುಡಿಯುವುದು ಉತ್ತಮ.

► ಬಾದಾಮಿಗಳಲ್ಲಿ ಕ್ಯಾಲರಿ ಕಡಿಮೆ ಇಲ್ಲದಿದ್ದರೂ ತೂಕ ಇಳಿಸಲು ನೆರವಾಗುತ್ತವೆ. ಅಧಿಕ ಫೈಬರ್ ಇರುವ ಕಾರಣ ನಿಮ್ಮ ಹೊಟ್ಟೆಯನ್ನು ಧೀರ್ಘ ಕಾಲ ತುಂಬಿಸಿಡುತ್ತದೆ. ಅವು ನಿಮ್ಮ ರಕ್ತದಲ್ಲಿ ಸಕ್ಕರೆ ಪ್ರಮಾಣವನ್ನು ನಿಯಂತ್ರಿಸಿ ಕೊಲೆಸ್ಟರಾಲ್ ನಿಭಾಯಿಸುತ್ತದೆ. ದಿನಕ್ಕೆ 5-6 ಬಾದಾಮಿಗಳನ್ನು ಹಾಲು ಅಥವಾ ಉಪಹಾರದಲ್ಲಿ ಸೇವಿಸಬೇಕು.

► ಸೇಬುಗಳು ನಿಧಾನಗತಿಯ ಜೀರ್ಣಕ್ರಿಯೆಗೆ ಸಹಕಾರಿ ಮತ್ತು ನಿಧಾನವಾಗಿ ಗ್ಲುಕೋಸ್ ಒದಗಿಸುತ್ತವೆ. ಉತ್ತಮ ಬ್ಯಾಕ್ಟೀರಿಯ ಇರುವ ಫೈಬರಂಶದ ಹಣ್ಣು ಕೊಬ್ಬು ಇರುವವರಿಗೆ ಉತ್ತಮ. ದಿನಕ್ಕೊಂದು ಸೇಬು ಸೇವಿಸಿದರೆ ಡಯಟ್ ತಜ್ಞರ ಅಗತ್ಯವಿಲ್ಲ.

► ಬೀನ್ಸ್ ಬೀಜಗಳು ಫೈಬರ್ ಮತ್ತು ಪ್ರೊಟೀನ್ ಎರಡನ್ನೂ ಹೊಂದಿರುತ್ತವೆ. ಶಕ್ತಿಯನ್ನೂ ದೇಹಕ್ಕೆ ಒದಗಿಸುತ್ತವೆ. ಇವುಗಳ ತತ್ವಗಳಿಂದ ಹಸಿವೆ ಕಡಿಮೆಯಾಗುತ್ತದೆ. ಮೆಗ್ನೇಶಿಯಂ, ಫೊಲೇಟ್, ಮ್ಯಾಂಗನೀಸ್, ಪಾಸ್ಫರಸ್, ಕಬ್ಬಿಣ, ತಾಮ್ರ ಮತ್ತು ಪೊಟಾಶಿಯಂ ಹೊಂದಿರುತ್ತವೆ. ಆದರೆ ಸರಿಯಾಗಿ ಬೇಯಿಸಿರುವ ಬಗ್ಗೆ ಗಮನಹರಿಸಿ.

► ದಾಲ್ಚಿನ್ನಿ ಇನ್ಸುಲಿನ್ ಮಟ್ಟವನ್ನು ನಿಯಂತ್ರಿಸಲು ನೆರವಾಗಿ ಸಕ್ಕರೆ ಕಾಯಿಲೆಯಿಂದ ದೂರವಿಡುತ್ತದೆ. ಚಯಾಪಚಯ ಕ್ರಿಯೆ ಏರಿಸುತ್ತದೆ. ಅಂತಿಮವಾಗಿ ತೂಕ ಇಳಿಸಲು ಮತ್ತು ಹೊಟ್ಟೆಯ ಕೊಬ್ಬು ಇಳಿಸಲು ನೆರವಾಗುತ್ತದೆ. ಜೇನಿನ ಜೊತೆಗೆ ಸೇವಿಸಿದರೆ ಉತ್ತಮ.

► ಬೆಳ್ಳುಳ್ಳಿ ಉತ್ತಮ ಆಂಟಿ ಆಕ್ಸಿಡೆಂಟ್ ಆಗಿದ್ದು, ನಿರೋಧಕ ಶಕ್ತಿ ಕಟ್ಟುತ್ತದೆ. ಕೊಬ್ಬು ನಿವಾರಿಸಿ ಎಲ್‌ಡಿಎಲ್ ಕೊಲೆಸ್ಟರಾಲ್ ನಿವಾರಿಸುತ್ತದೆ. ಉತ್ತಮ ಕೊಲೆಸ್ಟರಾಲ್ ಕೊಡುತ್ತದೆ. ಇವು ರಕ್ತದೊತ್ತಡ ಮತ್ತು ರಕ್ತದಲ್ಲಿ ಸಕ್ಕರೆ ಪ್ರಮಾಣ ನಿಭಾಯಿಸಲು ಇವು ಉತ್ತಮ.

► ದ್ವಿದಳ ಧಾನ್ಯಗಳು ಕ್ಯಾಲರಿ ಕಡಿಮೆ ಮಾಡುತ್ತವೆ. ಮಾಂಸಾಹಾರಕ್ಕೆ ಅತ್ಯುತ್ತಮ ಪರ್ಯಾಯ ಇವು. ಬಹಳ ಆರೋಗ್ಯಕರ ಆಹಾರ.

► ಬಾಳೆಹಣ್ಣುಗಳು ಕೊಬ್ಬಿನ ಆಹಾರವಲ್ಲ. ಕಡಿಮೆ ಗ್ಲಿಸೆಮಿಕ್ ಇಂಡೆಕ್ಸ್ ಇರುವ ಇವು ತೂಕ ಇಳಿಸಲು ಉತ್ತಮ. ಇಡೀ ದಿನ ಇವು ಹಸಿವೆ ದೂರ ಇಡಬಲ್ಲವು. ಕ್ಯಾಲರಿಗಳು ಸ್ವಲ್ಪ ಇದ್ದರೂ ಶಕ್ತಿಗೆ ಉತ್ತಮ. ಪೊಟಾಶಿಯಂ, ವಿಟಮಿನ್ ಸಿ ಮತ್ತು ಬಿ6 ಇರುತ್ತವೆ.

►ಟೊಮ್ಯಾಟೋಗಳು ವಿಟಮಿನ್ ಸಿ ಮತ್ತು ಇ ಮೂಲ. ಅಧಿಕ ಫೈಬರ್ ಅಂಶ ಹಸಿವೆ ನೀಗಿಸಿ ತೂಕ ಇಳಿಸಿಕೊಳ್ಳಲು ನೆರವಾಗುತ್ತವೆ.ಇನ್ಸುಲಿನ್ ಪ್ರಮಾಣ ನಿಭಾಯಿಸಿ ಕೊಲೆಸ್ಟರಾಲ್ ಕಡಿಮೆಗೊಳಿಸುತ್ತವೆ.

► ಕ್ಯಾಬೇಜ್ ತೂಕ ಇಳಿಸಲು ಉತ್ತಮ ತರಕಾರಿ. ಕ್ಯಾಲರಿ ಕಡಿಮೆ ಇದ್ದು ದೇಹಕ್ಕೆ ಅಗತ್ಯ ಫ್ಲೂಯಿಡ್ ಕೊಡುತ್ತದೆ. ಕ್ಯಾಬೇಜ್ ಸೂಪ್ ರಾತ್ರಿ ಸೇವಿಸುವುದು ಉತ್ತಮ.

► ಕಾಫಿ ಚಯಾಪಚಯಕ್ಕೆ ನೆರವಾಗುತ್ತದೆ. ಕೊಬ್ಬು ಇಳಿಸಲು ಉತ್ತಮ. ಹೊಟ್ಟೆ ಹಸಿವು ಕಡಿಮೆ ಮಾಡುತ್ತದೆ. ಸಕ್ಕರೆ ಹಾಕದ ಕಾಫಿ ಕುಡಿಯುವುದು ಉತ್ತಮ.

► ಗ್ರೀನ್ ಟೀ ಮಿತವಾದ ಕೆಫೈನ್ ಹೊಂದಿರುತ್ತದೆ. ದಿನಕ್ಕೆ 2-3 ಸಲ ಸೇವಿಸಬಹುದು. ಬೆಳಗಿನ ಜಾವ ಗ್ರೀನ್ ಟೀ ಕುಡಿಯುವುದರಿಂದ ಚಯಾಪಚಯ ನಿಯಂತ್ರಣಕ್ಕೆ ಬರುತ್ತದೆ. ಸ್ವಲ್ಪ ವ್ಯಾಯಾಮ ಮತ್ತು ಗ್ರೀನ್ ಟೀ ಉತ್ತಮ ಫಲಿತಾಂಶ ಕೊಡುತ್ತದೆ.

► ಜೇನು ತುಪ್ಪ ನೀರು, ಪ್ರೊಟೀನ್, ಫೈಬರ್, ಸಕ್ಕರೆ ಮತ್ತು ವಿಟಮಿನ್ ಹಾಗೂ ಲವಣಗಳ ಖನಿಜ. ಹೃದಯ ರೋಗಕ್ಕೂ ಇದು ಉತ್ತಮ. ಇದನ್ನು ಲಿಂಬೆ ಮತ್ತು ನೀರಿನ ಜೊತೆಗೆ ಸೇವಿಸಬೇಕು.

Comments are closed.