
ಮುಂಬೈ: ದುಬೈನಿಂದ ಮಾಲ್ಡೀವ್ಸ್ನ ರಾಜಧಾನಿ ಮಾಲೆಗೆ ಹೊರಟಿದ್ದತ್ತಿದ್ದ ಎಮಿರೇಟ್ಸ್ ವಿಮಾನದಲ್ಲಿ ಹೊಗೆ ಕಾಣಿಸಿಕೊಂಡ ಪರಿಣಾಮ ವಿಮಾನ ಮಂಗಳವಾರ ಸಂಜೆ ಮುಂಬೈ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಷ ಮಾಡಿದೆ.
309 ಪ್ರಯಾಣಿಕರನ್ನೊಳಗೊಂಡ ಎಮಿರಟ್ಸ್ ಸಂಸ್ಥೆಗೆ ಸೇರಿದ ಬೋಯಿಂಗ್ 777 (ಇಕೆ 652)ವಿಮಾನದಲ್ಲಿ ಹೊಗೆ ಕಾಣಿಸಿಕೊಂಡ ಪರಿಣಾಮ ವಿಮಾನದ ಪೈಲಟ್ ತುರ್ತು ಭೂಸ್ಪರ್ಷ ಮಾಡುವುದಾಗಿ ಮುಂಬೈ ವಿಮಾನ ನಿಲ್ದಾಣಕ್ಕೆ ಸಂದೇಶ ಕಳುಹಿಸಿದ್ದಾರೆ.
ವಿಮಾನದಲ್ಲಿದ್ದ 309 ಪ್ರಯಾಣಿಕರು ಸುರಕ್ಷಿತರಾಗಿರುವುದಾಗಿ ಮುಂಬೈ ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.
ಈ ಬಗ್ಗೆ ಅಧಿಕೃತ ಹೇಳಿಕೆ ನೀಡಿರುವ ಎಮಿರಟ್ಸ್ ಸಂಸ್ಥೆ ದುಬೈನಿಂದ ಮಾಲೆಗೆ ಹೋಗುತ್ತಿದ್ದ ವಿಮಾನ ತಾಂತ್ರಿಕ ದೋಷದಿಂದ ಮುಂಬೈನಲ್ಲಿ ತುರ್ತು ಭೂಸ್ಪರ್ಷ ಮಾಡಿದೆ. ವಿಮಾನದಲ್ಲಿದ್ದ ಪ್ರಯಾಣಿಕರೆಲ್ಲರೂ ಸುರಕ್ಷಿತರಾಗಿದ್ದಾರೆ. ಅನಾನುಕೂಲತೆಗಾಗಿ ಸಂಸ್ಥೆ ಕ್ಷಮೆಯಾಚಿಸುತ್ತದೆ ಎಂದು ತಿಳಿಸಿದೆ.
Comments are closed.