
ಧನಬಾದ್: ಜಾರ್ಖಂಡ್ನ ಧನಬಾದ್ನಲ್ಲಿ ಬೀದಿನಾಯಿ ಹಾಲು ಕುಡಿಯುತ್ತ ಪೋರನೊಬ್ಬ 10 ವರ್ಷ ಪ್ರಾಯದವನಾಗಿದ್ದಾನೆ. ಮೋಹಿತ್ ಕುಮಾರ್ (10) ಎಂಬ ಬಾಲಕ ಹುಟ್ಟು ಮೂಕನಾಗಿದ್ದು, ಜಂಗಲ್ ಬುಕ್ ಚಿತ್ರದ ಮೋಗ್ಲಿ ಪಾತ್ರಧಾರಿಯಂತೆ ಪ್ರಾಣಿಗಳ ಸಂಗ ಮಾಡಿ ಬೆಳೆದಿದ್ದಾನೆ.
ತನ್ನ ಎರಡನೇ ವಯಸ್ಸಿನಿಂದ ಬೀದಿನಾಯಿಗಳ ಸಹವಾಸ ಆರಂಭಿಸಿರುವ ಮೋಹಿತ್ನ ಪಾಲಕರು ಕಡು ಬಡವರಾಗಿದ್ದು, ಈತನಿಗೆ ಶಾಲೆಗೆ ಕಳುಹಿಸಲು ಅವರ ಬಳಿ ಧನವಿಲ್ಲದೆ ಕೈಚೆಲ್ಲಿದ್ದಾರೆ. ಚಿಕ್ಕಂದಿನಿಂದ ಬೀದಿನಾಯಿಗಳ ಜತೆ ಆಟವಾಡುತ್ತ ಒಂದು ದಿನ ಇದ್ದಕ್ಕಿದ್ದಂತೆ ನಾಯಿ ಮೊಲೆಗೆ ಬಾಯಿ ಹಾಕಿ ಹಾಲು ಹೀರಿದ್ದಾನೆ. ಶ್ವಾನವೂ ಸುಮ್ಮನೆ ಹಾಲುಣಿಸಿದೆ.
ಕೆಲ ದಿನಗಳ ನಂತರ ನೆರೆಹೊರೆಯವರಿಂದ ಸುದ್ದಿ ತಿಳಿದ ಈತನ ಪಾಲಕರು ಮನೆಯಿಂದ ಹೊರಬಿಡದೆ ಹವ್ಯಾಸ ತಪ್ಪಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ಅವಕಾಶ ಸಿಕ್ಕಾಗಲೆಲ್ಲ ಸೀದಾ ನಾಯಿಗಳೆಡೆಗೆ ತೆರಳುತ್ತಿದ್ದ ಮೋಹಿತ್ ಬೀದಿನಾಯಿಗಳಿಗೆ ಚಿರಪರಿಚಿತನಾಗಿದ್ದ. 10 ವರ್ಷದವನಾದರೂ ಈವರೆಗೂ ನಾಯಿ ಹಾಲು ಕುಡಿಯುವುದನ್ನು ಬಿಟ್ಟಿಲ್ಲ ಈ ಮೋಹಿತ್. ಕಳೆದ ವಾರ ಬೇರೆ ರಸ್ತೆಯ ನಾಯಿ ಹಾಲು ಕುಡಿಯಲು ಹೋಗಿ ನಾಯಿಯಿಂದ ಕಚ್ಚಿಸಿಕೊಂಡಿದ್ದಾನೆ.
ಪಾಲಕರು ಈತನ ಈ ವಿಚಿತ್ರ ಹವ್ಯಾಸ ಬಿಡಿಸಲು ಚಿಕಿತ್ಸೆಗೆ ಹಣವಿಲ್ಲದೆ ಸುಮ್ಮನಿದ್ದಾರೆ. ತಜ್ಞ ವೈದ್ಯರ ಪ್ರಕಾರ ಹೆಣ್ಣು ನಾಯಿ ಹಾಲು ಮಾನವನಿಗೆ ಹಾನಿಕಾರಕವಲ್ಲ, ಆದರೆ ರೇಬಿಸ್ ಹರಡುವ ಎಲ್ಲ ಸಾಧ್ಯತೆಗಳೂ ಇವೆ ಎಂದು ಹೇಳಿದ್ದಾರೆ.
Comments are closed.