ಕರ್ನಾಟಕ

ಇವರು ಅಂತಿಂಥ ಕಳ್ಳರಲ್ಲ….ಓಎಲ್‌ಎಕ್ಸ್ ನಲ್ಲಿ ಬೈಕ್ ಖರೀದಿಸುವ ನೆಪದಲ್ಲಿ ದೋಚಿ ಪರಾರಿಯಾಗುತ್ತಿದ್ದರು…

Pinterest LinkedIn Tumblr

OLX-9Rsi5

ಬೆಂಗಳೂರು: ಓಎಲ್‌ಎಕ್ಸ್ ಮೂಲಕ ದುಬಾರಿ ಬೈಕ್‌ಗಳ ಮಾರಾಟದ ಬಗ್ಗೆ ಮಾಹಿತಿ ಪಡೆದು ಅವುಗಳ ಖರೀದಿ ನೆಪದಲ್ಲಿ ದೋಚಿ ಪರಾರಿಯಾಗುತ್ತಿದ್ದ ಇಬ್ಬರು ಐನಾತಿ ಕಳ್ಳರನ್ನು ಕೋರಮಂಗಲ ಪೊಲೀಸರು ಬಂಧಿಸಿ 5 ಲಕ್ಷ ಮೌಲ್ಯದ ಬೈಕ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ಹೆಚ್‌ಬಿಆರ್ ಲೇಔಟ್‌ನ ಮಹಮದ್ ಸಲೀಂ(೨೮)ಮಲ್ಲೇಶ್ವರಂನ ಅಯ್ಯಪ್ಪ(೨೭)ಬಂಧಿತ ಆರೋಪಿಗಳಾಗಿದ್ದಾರೆ.ಬಂಧಿತರಿಂದ 5 ಲಕ್ಷ ಮೌಲ್ಯದ ೫ ದುಬಾರಿ ಬೈಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಡಿಸಿಪಿ ಡಾ.ಬೋರಲಿಂಗಯ್ಯ ಅವರು ತಿಳಿಸಿದ್ದಾರೆ.

ಓಎಲ್‌ಎಕ್ಸ್‌ನಲ್ಲಿ ಬೈಕ್‌ಗಳ ಮಾರಾಟದ ಮಾಹಿತಿ ಪಡೆದು ಅವುಗಳ ಮಾಲೀಕರನ್ನು ಮೊಬೈಲ್‌ನಲ್ಲಿ ಸಂಪರ್ಕಿಸಿ ಖರೀದಿಸುವುದಾಗಿ ದಾಖಲಾತಿಗಳ ಸಮೇತ ಕರೆಸಿಕೊಂಡು ಭೇಟಿ ಮಾಡಿ ಬೈಕ್‌ಗಳ ಮೂಲ ದಾಖಲಾತಿಗಳನ್ನು ಪರಿಶೀಲಿಸುವುದಾಗಿ ಪಡೆದು ಅವುಗಳನ್ನು ಒಬ್ಬ ಆರೋಪಿ ಜೆರಾಕ್ಸ್ ಮಾಡಿಸಿಕೊಂಡು ಬರುವಂತೆ ನಟಿಸಿ ಹೋದರೆ ಮತ್ತೊಬ್ಬ ಆರೋಪಿ ಬೈಕ್‌ನ ಟ್ರಯಲ್ ನೋಡುವುದಾಗಿ ಹೇಳಿ ಪರಾರಿಯಾಗುತ್ತಿದ್ದರು.

ನಂತರ ಮೂಲ ದಾಖಲಾತಿಗಳೊಂದಿಗೆ ಬೈಕ್‌ಗಳನ್ನು ಬೇರೆಯವರಿಗೆ ಮಾರಾಟ ಮಾಡಿ ಐಷಾರಾಮಿ ಜೀವನ ನಡೆಸುತ್ತಿದ್ದರು ಈ ಬಗ್ಗೆ ಕೋರಮಂಗಲ ಇನ್ನಿತರೆ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿದ್ದುಪ್ರಕರಣಗಳ ಪತ್ತೆಗಾಗಿ ವಿಶೇಷ ತಂಡವನ್ನು ರಚಿಸಲಾಗಿತ್ತು.

ಕೋರಮಂಗಲ ಇನ್ಸ್‌ಪೆಕ್ಟರ್ ಅಜಯ್ ಅವರನ್ನೊಳಗೊಂಡ ವಿಶೇಷ ತಂಡ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ .

Comments are closed.