ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಈಗಾಗಲೇ ವಿಶ್ವದ ಹಲವು ಮುಸ್ಲಿಂ ರಾಷ್ಟ್ರಗಳಿಗೆ ಭೇಟಿ ನೀಡುವ ಮೂಲಕ ಉಭಯ ದೇಶಗಳ ಭಾಂದವ್ಯವೃದ್ಧಿ ಮಾಡಿದ್ದಾರೆ. ಇದರ ಜತೆಗೆ ದೇಶದಲ್ಲಿನ ಹಿಂದು – ಮುಸ್ಲಿಮರ ನಡುವಣ ಅಂತರವನ್ನು ಕಡಿಮೆ ಮಾಡಿ ಪ್ರೀತಿಯ ಬೀಜ ಬಿತ್ತುತ್ತಿದ್ದಾರೆ ಎಂದು ಇಸ್ಲಾಂ ಧಾರ್ವಿುಕ ಮುಖಂಡ ಹಾಗೂ ವಿವಾದಿತ ಪೀಸ್ ಟಿ.ವಿ ಮುಖ್ಯಸ್ಥ ಜಾಕಿರ್ ನಾಯಕ್ ಹೇಳಿದ್ದಾರೆ.
ಹೌದು, ಢಾಕಾ ಭಯೋತ್ಪಾದನಾ ಕೃತ್ಯಕ್ಕೆ ಪ್ರಚೋದನೆ ನೀಡಿದ ಆರೋಪ ಎದುರಿಸುತ್ತಿರುವ ಜಾಕಿರ್ ನಾಯಕ್ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಮುಕ್ತಕಂಠದಿಂದ ಹೊಗಳಿದ್ದಾರೆ. ಕಳೆದ ಎರಡು ವರ್ಷದ ಅಧಿಕಾರವಧಿಯಲ್ಲಿ ಮೋದಿ ಅವರು ಹಲವು ಇಸ್ಲಾಂ ದೇಶಗಳಿಗೆ ಭೇಟಿ ನೀಡಿ ಅವರ ವಿಶ್ವಾಸಗಳಿಸಿದ್ದಾರೆ. ಇದರಿಂದಾಗಿ ವ್ಯಾಪಾರ – ವ್ಯವಹಾರ ಅಧಿಕವಾಗಲಿದ್ದು, ಮುಂದಿನ ದಿನಗಳಲ್ಲಿ ಭಾರತ ಸೂಪರ್ ಪವರ್ ಆಗಿ ಹೊರಹೊಮ್ಮುವುದರಲ್ಲಿ ಅನುಮಾನವಿಲ್ಲ ಎಂದು ತಿಳಿಸಿದ್ದಾರೆ.
ಇನ್ನು ಜಿಹಾದ್ ಕುರಿತು ಮಾನತಾಡಿದ ಜಾಕಿರ್ ನಾಯಕ್, ಜಿಹಾದ್ನ ಮುಖ್ಯ ಉದ್ದೇಶ ಸಮಾಜಕ್ಕಾಗಿ ಹೋರಾಟ ನಡೆಸುವುದಾಗಿದೆ. ಇನ್ನೊಂದು ಅರ್ಥದಲ್ಲಿ ಆತ್ಮರಕ್ಷಣೆ ಕೂಡ ಹೌದು. ಆದರೆ ಭಾರತೀಯ ಮಾಧ್ಯಮಗಳು ಇದನ್ನು ಬೇರೆಯೇ ಅರ್ಥದಲ್ಲಿ ಪ್ರಚಾರಮಾಡುತ್ತಿವೆ. ಜಿಹಾದ್ ವಿಚಾರವಾಗಿ ಮುಸ್ಲಿಂ ಸಮುದಾಯದ ಹಲವರಿಗೆ ಸ್ಪಷ್ಟತೆ ಇಲ್ಲ. ಅಮಾಯಕರನ್ನು ಕೊಲ್ಲುವುದು ಅಮಾನವೀಯ ಎಂದು ಸ್ವತಃ ಖುರಾನ್ನಲ್ಲೇ ಸ್ಪಷ್ಟಪಡಿಸಲಾಗಿದೆ. ಯಾರೋ ಗುಜರಾತ್ನಲ್ಲಿ ದಾಳಿ ನಡೆಸಿ ಮುಸ್ಲಿಮರನ್ನು ಕೊಲೆಗೈದರೆಂದು, ಮುಂಬೈ ಮೇಲೆ ದಾಳಿ ಮಾಡಿ ಹಿಂದುಗಳನ್ನು ಹತ್ಯೆ ಮಾಡುವುದು ತಪ್ಪು ಎಂದು ಹೇಳಿದರು.
Comments are closed.