
ಪ್ರಕೃತಿ ಎಂಬುದೊಂದು ಬಲುದೊಡ್ಡ ವಿಸ್ಮಯ. ಅದರಲ್ಲೂ ಜೀವಜಗತ್ತು ಸಾಕಷ್ಟು ವೈವಿಧ್ಯದಿಂದ ಕೂಡಿದ್ದು. ಪ್ರಾಣಿಲೋಕದಲ್ಲಿ ಅನೇಕ ವಿಸ್ಮಯಗಳು ಆಗಾಗ ಕಂಡುಬರುವುದು ಸಾಮಾನ್ಯ. ಉತ್ತರಪ್ರದೇಶದ ಹಾಪುಡಾ ಎಂಬ ಹಳ್ಳಿ ಈಗ ಇದಕ್ಕೆ ಉದಾಹರಣೆಯಾಗಿ ಪರಿಣಮಿಸಿದೆ.
ಹೌದು, ಹಾಪುಡಾ ಹಳ್ಳಿಯ ಮೀನಾಕ್ಷಿ ರಸ್ತೆಯಲ್ಲಿರುವ ಮಾಂಸದಂಗಡಿ ಯೊಂದರಲ್ಲಿರುವ ಕೋಳಿಯೊಂದು ಈಗ ಜನಾಕರ್ಷಣೆಯ ಕೇಂದ್ರಬಿಂದುವಾಗಿದೆ. ಅದು ನಾಲ್ಕು ಕಾಲುಗಳನ್ನು ಹೊಂದಿರುವುದೇ ಇದಕ್ಕೆ ಕಾರಣ. ಮಾಂಸದ ಉದ್ದೇಶಕ್ಕಾಗಿ ಬೇರೆಡೆಯಿಂದ ತರಲಾಗಿದ್ದ ಕೋಳಿಮರಿಗಳ ತಂಡದಲ್ಲಿದ್ದ ಈ ಕೋಳಿಗೆ ನಾಲ್ಕು ಕಾಲಿರುವುದು ತಡವಾಗಿ ಅಂಗಡಿಯಲ್ಲಿರುವವರ ಗಮನಕ್ಕೆ ಬಂದಿದೆ. ಈ ವಿಚಾರ ಬೆಳಕಿಗೆ ಬರುತ್ತಿದ್ದಂತೆಯೇ ಕೋಳಿಯನ್ನು ವೀಕ್ಷಿಸಲೆಂದೇ ಹಳ್ಳಿಯ ಜನ ಅಂಗಡಿಗೆ ಆಗಮಿಸ ತೊಡಗಿದ್ದಾರೆ. ಕೆಲವರಂತೂ ದೇವರೇ ಕೋಳಿಯ ರೂಪದಲ್ಲಿ ಅವತರಿಸಿಬಂದಿರ ಬಹುದು ಎಂದು ಅದಕ್ಕೆ ನಮಸ್ಕರಿಸುತ್ತಿರುವ ದೃಶ್ಯ ಕಂಡುಬರುತ್ತಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಇದೀಗ ನಾಲ್ಕು ಕಾಲಿನ ಕೋಳಿಯನ್ನು ಖರೀದಿಸಬೇಕೆಂದು ಜನ ಮುಗಿಬೀಳುತ್ತಿದ್ದಾರಂತೆ. ಕೋಳಿಗಾಗಿ ಬಿಡ್ ಸಲ್ಲಿಸಲು ಹಲವರು ಮುಂದೆ ಬಂದಿದ್ದು, ಈವರೆಗೆ 4,000 ರೂ. ತನಕ ಬಿಡ್ ಸಲ್ಲಿಸಿದವರಿದ್ದಾರೆ ಎಂದು ಮೂಲಗಳು ತಿಳಿಸಿವೆ.
Comments are closed.