ಕರ್ನಾಟಕ

ನೆಲಮಂಗಲ: ಅತ್ಯಾಚಾರವೆಸಗಿ ಯುವತಿಯನ್ನು ಭೀಕರವಾಗಿ ಹತ್ಯೆಮಾಡಿದ ದುಷ್ಕರ್ಮಿಗಳು

Pinterest LinkedIn Tumblr

rape12

ನೆಲಮಂಗಲ: ದುಷ್ಕರ್ಮಿಗಳು ಯುವತಿಯನ್ನು ವಾಹನದಲ್ಲಿ ಕರೆತಂದು ಆಕೆ ಮೇಲೆ ಅತ್ಯಾಚಾರ ನಡೆಸಿ ವಿವಿಧ ಆಯುಧಗಳಿಂದ ಇರಿದು ಭೀಕರವಾಗಿ ಕೊಲೆ ಮಾಡಿರುವ ಘಟನೆ ದಾಬಸ್‍ಪೇಟೆ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಸುಮಾರು 20 ರಿಂದ 22 ವರ್ಷದಂತೆ ಕಾಣುವ ಈ ಯುವತಿಯ ಹೆಸರು, ವಿಳಾಸ ತಿಳಿದುಬಂದಿಲ್ಲ. ತುಮಕೂರು-ಬೆಂಗಳೂರು ಮಾರ್ಗದ ರಾಷ್ಟ್ರೀಯ ಹೆದ್ದಾರಿ 4ರ ಹನುಮಂತಪುರ ಗೇಟ್ ಬಳಿಯ ರಸ್ತೆ ಬದಿ ಇಂದು ಮುಂಜಾನೆ ಯುವತಿ ಶವಪತ್ತೆಯಾಗಿದೆ. ಯುವತಿ ಟೀಶರ್ಟ್ ಮತ್ತು ಪ್ಯಾಂಟ್ ಧರಿಸಿದ್ದು, ಕಾಲುಂಗುರವಿರುವುದು ಗಮನಿಸಿದರೆ ಈಕೆ ವಿವಾಹಿತೆ ಎಂಬುದು ತಿಳಿದು ಬರುತ್ತದೆ.

ಇಂದು ಮುಂಜಾನೆ 6 ಗಂಟೆಯಲ್ಲಿ ಈ ಮಾರ್ಗದಲ್ಲಿ ಹೋಗುತ್ತಿದ್ದ ವ್ಯಕ್ತಿಯೊಬ್ಬರು ಶವವನ್ನು ಗಮನಿಸಿ ತಕ್ಷಣ ದಾಬಸ್‍ಪೇಟೆ ಪೊಲೀಸರು ರಿಗೆ ತಿಳಿಸಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದಾಗ ಶವದಿಂದ ರಕ್ತ ಇನ್ನೂ ಸೋರುತ್ತಿದ್ದುದು ಗಮನಿಸಿದ್ದು ಇದರಿಂದ ಮುಂಜಾನೆ ನಡೆದಿರುವ ಕೊಲೆ ಎಂದು ಪೊಲೀಸರು ಶಂಕಿಸಿದ್ದಾರೆ.

ದುಷ್ಕರ್ಮಿಗಳು ಈ ಯುವತಿಯನ್ನು ವಾಹನದಲ್ಲಿ ರಾತ್ರಿ ಸುತ್ತಾಡಿಸಿ ಅತ್ಯಾಚಾರವೆಸಗಿ ಮುಂಜಾನೆ 2.30ರಿಂದ 3ರ ಮಧ್ಯೆ ವಾಹನದಲ್ಲೇ ಸ್ಕ್ರೂಡ್ರೈವರ್, ಕಟಿಂಗ್ ಪ್ಲೇಯರ್‍ನಿಂದ ಚುಚ್ಚಿ ಇರಿದು, ರಾಡ್‍ನಿಂದ ಹಲ್ಲೆ ನಡೆಸಿ ಭೀಕರವಾಗಿ ಕೊಲೆ ಮಾಡಿ ನಂತರ ಹನುಮಂತಪುರ ಗೇಟ್‍ನ ರಸ್ತೆ ಬದಿ ಬಿಸಾಡಿ ಪರಾರಿಯಾಗಿರಬಹುದೆಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಪರಿಚಿತರೇ ಸ್ಕೆಚ್ ಹಾಕಿ ಈ ಯುವತಿಯನ್ನು ಕರೆತಂದು ಈ ಕೃತ್ಯವೆಸಗಿರಬಹುದೇ, ಪ್ರೇಮ ವೈಫಲ್ಯವೇ ಅಥವಾ ಈಕೆಯನ್ನು ಅಪಹರಿಸಿ ಈ ದುಷ್ಕøತ್ಯ ನಡೆಸಿರಬಹುದು ಎಂಬ ಬಗ್ಗೆ ಶಂಕೆ ವ್ಯಕ್ತವಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ದಾಬಸ್‍ಪೇಟೆ ಪೆÇಲೀಸರು ಆರೋಪಿಗಳ ಪತ್ತೆಗೆ ತನಿಖೆ ಚುರುಕುಗೊಳಿಸಿದ್ದಾರೆ.ಶವವನ್ನು ದಾಬಸ್‍ಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೊಳಪಡಿಸಲಾಗಿದೆ.

Comments are closed.