ಕರ್ನಾಟಕ

‘ಸಂಜೀವ್ ಗೌಡ ಟಾರ್ಚರ್‍ನಿಂದಲೆ ನನ್ನ ಪತ್ನಿ ರೂಪಾ ಆತ್ಮಹತ್ಯೆಗೆ ಯತ್ನಿಸಿದ್ದು’

Pinterest LinkedIn Tumblr

Roopa

ಬೆಂಗಳೂರು: ಇನ್‍ಸ್ಪೆಕ್ಟರ್ ಸಂಜೀವ್ ಗೌಡ ಅವರ ಟಾರ್ಚರ್‍ನಿಂದಲೆ ನನ್ನ ಪತ್ನಿ ರೂಪಾ ಆತ್ಮಹತ್ಯೆಗೆ ಯತ್ನಿಸಿರುವುದು ಎಂದು ಅವರ ಪತಿ ವಕೀಲರಾದ ನಟರಾಜ್ ಆರೋಪಿಸಿದ್ದಾರೆ. 20ಕ್ಕೂ ಹೆಚ್ಚು ಪ್ಯಾರಸಿಟಮಲ್ ಮಾತ್ರೆಗಳನ್ನು ಸೇವಿಸಿ ಅಸ್ವಸ್ಥರಾಗಿ ಸುಗುಣ ಆಸ್ಪತ್ರೆಯಲ್ಲಿ ಸಬ್‍ಇನ್‍ಸ್ಪೆಕ್ಟರ್ ರೂಪಾ ಚಿಕಿತ್ಸೆ ಪಡೆಯುತ್ತಿದ್ದು , ಆಸ್ಪತ್ರೆ ಬಳಿ ಅವರ ಪತಿ ನಟರಾಜ್ ಸುದ್ದಿಗಾರರೊಂದಿಗೆ ಮಾತನಾಡಿ, ಇನ್‍ಸ್ಪೆಕ್ಟರ್ ಜೊತೆ ನಡೆದ ಮಾತಿನ ಚಕಮಕಿಯೇ ನನ್ನ ಪತ್ನಿಯ ಆತ್ಮಹತ್ಯೆಗೆ ಕಾರಣವಾಗಿದೆ. ನಿನ್ನೆ ಸ್ಟೇಷನ್‍ನಲ್ಲಿ ನಡೆದ ಗಲಾಟೆ ಬಗ್ಗೆ 12 ಗಂಟೆಗೆ ರೂಪಾ ನನಗೆ ಭಯದಿಂದಲೇ ಫೋನ್ ಮಾಡಿದರು. ಫೋನ್ ಕಟಾಯಿತು. ನಂತರ ನಾನು ಮೆಸೆಜ್ ಮಾಡಿದೆ. ನೀವು ಪೊಲೀಸ್ ಕಮೀಷನರ್ ಕಚೇರಿಗೆ ಬನ್ನಿ ನಾನು ಬರುತ್ತೇನೆ. ಅಲ್ಲೇ ಮಾತನಾಡೋಣ ಎಂದು ಹೇಳಿದರು.

ನಾನು ಪೊಲೀಸ್ ಕಮೀಷನರ್ ಕಚೇರಿ ಬಳಿ ಹೋಗಿ ಸುಮಾರು ಒಂದೂವರೆ ಗಂಟೆ ಕಾದೆ. ಆದರೆ ಬರಲಿಲ್ಲ. ಅಣ್ಣನ ಮಗನಿಗೆ ಫೋನ್ ಮಾಡಿ ರೂಪಾ ಸ್ಟೇಷನ್‍ನಲ್ಲಿದ್ದಾಳೆ. ಅವರನ್ನ ಗಾಡಿಯಲ್ಲಿ ಮನೆಗೆ ಕರೆದುಕೊಂಡು ಹೋಗು ಎಂದು ಹೇಳಿದ್ದೆ.

ಅಷ್ಟರಲ್ಲಾಗಲೇ ರೂಪಾ ಗಾಡಿ ತೆಗೆದುಕೊಂಡು ಮನೆಗೆ ಹೋಗಿದ್ದಾರೆ. ದಾರಿ ಮಧ್ಯೆ ಮೆಡಿಕಲ್ ಸ್ಟೋರ್‍ನಲ್ಲಿ ಮಾತ್ರೆಗಳನ್ನು ಪಡೆದುಕೊಂಡಿದ್ದಾರೆ. ಮನೆಗೆ ಹೋಗಿ ಮಾತ್ರೆ ನುಂಗಿದ್ದಾರೆ. ನಾನು ಮನೆಗೆ ಬಂದು ನೋಡಿದಾಗ ಅವರು ಅಸ್ವಸ್ಥರಾಗಿದ್ದವರಂತೆ ಕಂಡುಬಂತು. ಗಾಡಿಯಲ್ಲಿ ಮಾತ್ರೆಯ ಕವರ್ ಇತ್ತು. ಕೂಡಲೇ ನಾನು ಅವರನ್ನು ಸುಗುಣ ಆಸ್ಪತ್ರೆಗೆ ದಾಖಲಿಸಿದೆ. ಈ ಹಿಂದೆಯೂ ಕೂಡ ಸ್ಟೇಷನ್‍ನಲ್ಲಿ ಇನ್‍ಸ್ಪೆಕ್ಟರ್ ಅವರ ಮೇಲೆ ಕಿರುಕುಳ ಹೇಳಿದ್ದರು. ಎಸಿಪಿಯಾಗಿದ್ದ ಉಮೇಶ್ ಅವರ ಗಮನಕ್ಕೂ ತಂದಿದ್ದೇವು. ಹಿರಿಯ ಅಧಿಕಾರಿಗಳಿಗೆ ದೂರು ನೀಡಬೇಕಿತ್ತು. ಆದರೆ ಇನ್‍ಸ್ಪೆಕ್ಟರ್ ಅವರು ಬಹಳ ಪ್ರಭಾವಿ ಸಸ್ಪೆಂಡ್ ಆದವರು ಮತ್ತೆ ಸಸ್ಪೆಂಡ್ ತೆರವಾದ ಮೇಲೆ ಮತ್ತೆ ಇದೇ ಠಾಣೆಗೆ ಬಂದಿದ್ದಾರೆ. ನಮಗೆ ಏನಾಗುತ್ತದೆಯೋ ಎಂಬ ಭಯದಲ್ಲಿ ಈ ರೀತಿ ಮಾಡಿಕೊಂಡಿರಬಹುದು ಎಂದು ತಿಳಿಸಿದರು. ಮುಂದೆ ಕಾನೂನು ಹೋರಾಟ ನಡೆಸುತ್ತೇವೆ ಎಂದು ಅವರು ಅವರು ಹೇಳಿದರು.

Comments are closed.