ಕರ್ನಾಟಕ

ಐಷಾರಾಮಿ ಹೋಟೆಲ್​ನಲ್ಲೂ ಕಬಾಲಿ ಹವಾ…!

Pinterest LinkedIn Tumblr

kabali

ಬೆಂಗಳೂರು: ಬಿಡುಗಡೆಗೂ ಮೊದಲೇ ಅನೇಕ ಮೊದಲುಗಳಿಗೆ ಕಾರಣವಾಗಿರುವ ‘ಕಬಾಲಿ’ ಚಿತ್ರ ಬಿಡುಗಡೆಯ ವಿಚಾರದಲ್ಲೂ ದಾಖಲೆ ಮಾಡುತ್ತಿದೆ. ಅಂತರ್ಜಾಲದಲ್ಲಿ ಬುಕ್ಕಿಂಗ್ ಶುರುವಾದ ಕೆಲವೇ ನಿಮಿಷಗಳಲ್ಲಿ ಎಲ್ಲ ಟಿಕೆಟ್ಗಳೂ ಸೋಲ್ಡ್ಜೌಟ್.

ಹಾಗಾದರೆ ಟಿಕೆಟ್ ಸಿಗದವರು ಏನು ಮಾಡಬೇಕು? ಸ್ವಲ್ಪ ದುಬಾರಿ ಬೆಲೆ ತೆರುವ ಅಭಿಮಾನಿಗಳು ನೀವಾಗಿದ್ದರೆ ಸ್ಟಾರ್ ಹೋಟೆಲ್ಗಳಲ್ಲೇ ‘ಕಬಾಲಿ’ಯನ್ನು ಕಣ್ತುಂಬಿಕೊಳ್ಳಬಹುದು! ಅಚ್ಚರಿ ಎನಿಸಿದರೂ ಇದು ನಿಜ. ಈಗಾಗಲೇ ಬೆಂಗಳೂರಿನ ಕೆಲವು ಪಂಚತಾರಾ ಹೋಟೆಲ್ಗಳಲ್ಲಿ ಚಿತ್ರ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತಿದೆ. ಥಿಯೇಟರ್ ಮತ್ತು ಮಲ್ಟಿಪ್ಲೆಕ್ಸ್ ಗಳಲ್ಲದೆ, ಈ ರೀತಿ ಐಷಾರಾಮಿ ಹೋಟೆಲ್ಗಳಲ್ಲಿ ಸಿನಿಮಾ ಬಿಡುಗಡೆಯಾಗುತ್ತಿರುವುದು ಭಾರತೀಯ ಸಿನಿಮಾ ಇತಿಹಾಸದಲ್ಲೇ ಮೊದಲು ಎನ್ನಲಾಗುತ್ತಿದೆ.

ಕರ್ನಾಟಕದಲ್ಲಿ ‘ಕಬಾಲಿ’ಯ ವಿತರಣೆ ಹೊತ್ತಿರುವ ‘ಲಹರಿ’ ಸಂಸ್ಥೆ ಈ ಪ್ರಯೋಗಕ್ಕೆ ಮುಂದಾಗಿದೆ. ಪ್ರತಿ ದಿನ ಮೂರು ಆಟಗಳಂತೆ ಒಟ್ಟು ನಾಲ್ಕು ದಿನಗಳ ಕಾಲ ಪ್ರದರ್ಶನ ಮಾಡುವ ಯೋಜನೆ ಹಾಕಿಕೊಳ್ಳಲಾಗಿದೆ. ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಬಂದರೆ ಇನ್ನಷ್ಟು ದಿನಗಳಿಗೆ ವಿಸ್ತರಿಸುವ ಸಾಧ್ಯತೆ ಕೂಡ ಇದೆ. ಕ್ಯೂಬ್ ತಂತ್ರಜ್ಞಾನದ ಮೂಲಕವೇ ಸಿನಿಮಾ ಬಿತ್ತರಗೊಳ್ಳಲಿದ್ದು ಮಲ್ಟಿಪ್ಲೆಕ್ಸ್ ಗುಣಮಟ್ಟದಲ್ಲೇ ಪ್ರೇಕ್ಷಕರು ಮಜಾ ಸವಿಯಲಿದ್ದಾರಂತೆ.

‘ಇದಕ್ಕೂ ಕೂಡ ಆನ್ಲೈನ್ ಮೂಲಕವೇ ಬುಕ್ಕಿಂಗ್ ವ್ಯವಸ್ಥೆ ಮಾಡುತ್ತೇವೆ. ಟಿಕೆಟ್ ದರಗಳು 1000 ರೂ.ಗಳಿಗಿಂತಲೂ ಅಧಿಕವಾಗಿರಲಿವೆ. ಬೆಂಗಳೂರಿನ ಐಟಿ ಕ್ಷೇತ್ರದಲ್ಲಿ ಕೆಲಸ ಮಾಡುವ ಅನೇಕರು ಇಲ್ಲಿಂದ ಚೆನ್ನೈಗೆ ವಿಮಾನದಲ್ಲಿ ಪ್ರಯಾಣ ಮಾಡಿ, ‘ಕಬಾಲಿ’ ನೋಡಲು ರೆಡಿಯಾಗಿದ್ದರು. ಅಂಥವರಿಗೆ ಅದಕ್ಕಿಂತಲೂ ಕಡಿಮೆ ದರದಲ್ಲಿ ಇಲ್ಲಿಯೇ ಸೌಲಭ್ಯ ಒದಗಿಸುವುದು ನಮ್ಮ ಉದ್ದೇಶ’ ಎಂದು ಮಾಹಿತಿ ನೀಡುತ್ತಾರೆ ‘ಲಹರಿ’ ಸಂಸ್ಥೆ ಮಾಲೀಕ ವೇಲು.

ಅಮೆರಿಕದಲ್ಲಿ ರಜನಿ ಪ್ರಾರ್ಥನೆ

ಮುಗಿಲು ಮುಟ್ಟಿರುವ ಪ್ರೇಕ್ಷಕರ ನಿರೀಕ್ಷೆಯಿಂದಾಗಿ ‘ಕಬಾಲಿ’ ಚಿತ್ರತಂಡಕ್ಕೂ ಟೆನ್ಶನ್ ಆಗಿರುವುದಂತೂ ಸುಳ್ಳಲ್ಲ. ಈ ವೇಳೆ ರಜನಿಕಾಂತ್ ಏನು ಮಾಡುತ್ತಿರಬಹುದು? ಚಿತ್ರದ ಯಶಸ್ಸಿಗಾಗಿ ದೇವರ ಬಳಿ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ಅದು ಭಾರತದಲ್ಲಲ್ಲ, ವಿದೇಶದಲ್ಲಿ. ಮಗಳು ಐಶ್ವರ್ಯಾ ಜತೆ ಅಮೆರಿಕಕ್ಕೆ ತೆರಳಿರುವ ಅವರು ವರ್ಜೀನಿಯದಲ್ಲಿರುವ ಸ್ವಾಮಿ ಸಚ್ಚಿದಾನಂದ ಆಶ್ರಮಕ್ಕೆ ಭೇಟಿ ನೀಡಿದ್ದಾರೆ. ಟ್ವಿಟರ್ನಲ್ಲಿ ಫೋಟೋ ಶೇರ್ ಮಾಡುವ ಮೂಲಕ ಅಭಿಮಾನಿಗಳಿಗೆ ಈ ವಿಷಯ ಮುಟ್ಟಿಸಿದ್ದಾರೆ ಐಶ್ವರ್ಯಾ. ಜುಲೈ 22ರಂದು ಚಿತ್ರ ಬಿಡುಗಡೆಯಾಗಲಿದ್ದು, ಶೀಘ್ರದಲ್ಲೇ ರಜನಿ ಭಾರತಕ್ಕೆ ಮರಳಲಿದ್ದಾರಂತೆ.

Comments are closed.