ಉಡುಪಿ: ಕೃಷಿ ಪ್ರಧಾನವಾದ ನಮ್ಮ ರಾಷ್ಟ್ರದಲ್ಲಿ ದಿನೇ ದಿನೇ ಕೃಷಿ ಚಟುವಟಿಕೆಗಳು ಕಣ್ಮರೆಯಾಗುತ್ತಿವೆ. ಕೃಷಿಕಾರ್ಯಗಳಿಗೆ ದೂರದ ಬಾಂಗ್ಲದಿಂದ ಕಾರ್ಮಿಕರನ್ನು ಬಳಸುತ್ತಿರುವ ದಿನ ಇಂದು ಬಂದಿದೆ. ಇಂತಹ ದಿನಗಳಲ್ಲಿ ನಮ್ಮ ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸಿಬೇಳೆಸುವ ಪ್ರಯತ್ನವೊಂದು ಅಲೆವೂರಿನಲ್ಲಿ, ದೇವಾಡಿಗ ಯುವ ವೇದಿಕೆ (ರಿ) ಉಡುಪಿ ಇದರ ಯುವಕ ಯುವತಿಯರಿಂದ ನಡೆಯಿತು.
ನೂರಕ್ಕೂ ಮಿಕ್ಕಿದ ಯುವಕ ಯುವತಿಯರು ಹಿರಿಯರ ಜೊತೆಗೂಡಿ ಸುಮಾರು 1.75 ಎಕರೆ ವಿಸ್ತೀರ್ಣದ ಗದ್ದೆಯಲ್ಲಿ ನೇಜಿ ನೆಡುವ ಮೂಲಕ ಒಂದು ಅರ್ಥಪೂರ್ಣ ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಂಡರು.
ಎರಡನೇ ವರುಷ ನಡೆಯುತ್ತಿರುವ ಈ ಕಾರ್ಯಕ್ರಮದಲ್ಲಿ ದೇವಾಡಿಗ ಸಂಘದ ಮಾಜಿ ಅಧ್ಯಕ್ಷರಾದ ಶ್ರೀಧರ್ ದೇವಾಡಿಗ, ನಾದಶ್ರೀ ಕೋ-ಆಪರೇಟಿವ್ ಬ್ಯಾಂಕ್ ನಾ ಅಧ್ಯಕ್ಷ ಶ್ರೀ ಚಂದ್ರಕಾಂತ್ ದೇವಾಡಿಗ, ಹಿರಿಯರಾದ ಶ್ರೀನಿವಾಸ್ ದೇವಾಡಿಗ, ಮಾಧವ ದೇವಾಡಿಗ, ಯುವ ವೇದಿಕೆಯ ಕಾರ್ಯದರ್ಶಿ ಅಶೋಕ್ ದೇವಾಡಿಗ, ಪ್ರವೀಣ್ ಕುಮಾರ್, ಪ್ರದೀಪ್ ಮೊಯಿಲಿ, ಅಶೋಕ್ ಅಲೆವೂರು, ವಾಕೇಶ್ ಮೊದಲಾದವರು ಉಪಸ್ತಿಥರಿದ್ದರು.
Comments are closed.