ಮುಂಬೈ: ಬಾಲಿವುಡ್ನ ಬ್ಯಾಡ್ಬಾಯ್ ಎನಿಸಿಕೊಳ್ಳುತ್ತಲೇ ಹುಡುಗಿಯರ ಹೃದಯ ಗೆಲ್ಲುವ ನಟ ಸಲ್ಮಾನ್ ಖಾನ್ ಶಾದಿಗೆ ತಯಾರಿ ನಡೆದಿದೆ!
ಹೌದು ‘ಸಲ್ಲು’ ಮದುವೆ ಆಗ್ತಾರಂತೆ. ದಿನಾಂಕವೂ ಫಿಕ್ಸ್ ಆಗಿದೆಯಂತೆ. ನವೆಂಬರ್ 18ರಂದು ಸಲ್ಮಾನ್ ಮದುವೆ ಎನ್ನುವುದು ಈಗ ಬಾಲಿವುಡ್ ಮಂದಿ ಆಡಿಕೊಳ್ಳುತ್ತಿದ್ದಾರೆ. ಖ್ಯಾತ ಟೆನಿಸ್ ತಾರೆ ಸಾನಿಯಾ ಮಿರ್ಜಾ ಅವರ ಜೀವನ ಚರಿತ್ರೆ ಪುಸ್ತಕ ಬಿಡುಗಡೆ ಬಂದಿದ್ದ ಸಲ್ಮಾನ್ಗೆ ನೂರಾರು ಮಂದಿ ಕೇಳಿದ್ದು ಇದೇ ಪ್ರಶ್ನೆಯಾಗಿತ್ತಂತೆ.
‘ಹಾಯ್ ಸಲ್ಮಾನ್ ಮದುವೆ ಆಗ್ತಾ ಇದ್ದೀರಂತೆ…?, ನಿಮ್ಮ ಮದುವೆಯಂತೆ? ಮದುವೆ ಡೇಟ್ ಫಿಕ್ಸ್ ಮಾಡಿದ್ರಾ?’ ಹೀಗೆ ನೂರಾರು ಮಂದಿ ಕೇಳಿದ ಪ್ರಶ್ನೆಗೆ ಸಲ್ಮಾನ ಉತ್ತರ ‘ಹೌದು’ ಎಂದಾಗಿತ್ತು. ಕಡೆಗೂ ಒಬ್ಬಿಬ್ಬರ ಕಾಟಕ್ಕೆ ಮಣಿದ ಸಲ್ಮಾನ್, ನವೆಂಬರ್ 18 ಅಂಥ ಅಂದ್ಕೊಂಡಿದ್ದೀನಿ, ನೋಡೋಣ… ಎಂದೂ ಹೇಳಿಕೊಂಡಿದ್ದಾರಂತೆ.
ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಕೆಲವು ಆಪ್ತರಲ್ಲಿ ಹೇಳಿಕೊಂಡಿರುವಂತೆ ‘ಬಹಳ ಮಂದಿ ನನ್ನ ಮದುವೆ ವಿಚಾರದಲ್ಲಿ ತಾಯಿ, ಸೋದರಿ ಮೇಲೆ ಒತ್ತಡ ಹಾಕುತ್ತಿದ್ದಾರೆ. ಆಗಲಿ ಬಿಡಿ ಮದುವೆ ಆದರಾಯಿತು. ನವೆಂಬರ್ 18ರಂದು ಅಂದುಕೊಂಡಿದ್ದೇನೆ ಎನ್ನುವುದರ ಜತೆಗೆ ‘ಯಾವ ವರ್ಷ ಅನ್ನೋದನ್ನು’ ಸದ್ಯಕ್ಕೆ ಹೇಳಲ್ಲ’ ಎಂದು ಹಾಸ್ಯ ಚಟಾಕಿಯನ್ನೂ ಹಾರಿಸಿದ್ದಾರೆ ಎಂದೆಲ್ಲಾ ವರದಿಯಾಗಿದೆ.
ಒಟ್ಟಾರೆ, ಕಳೆದವಾರವಷ್ಟೇ ಭರ್ಜರಿ ಆರಂಭ ಕಂಡಿರುವ ‘ಸುಲ್ತಾನ್’ ಯಶಸ್ಸಿನ ಬೆನ್ನಲ್ಲೇ ಸಲ್ಮಾನ್ ಈಗ ಮತ್ತೊಂದು ಸಿಹಿ ಹಂಚಲು ಯೋಚಿಸಿದಂತೆ ಕಾಣಿಸುತ್ತಿದೆ. ಒಂದಾದ ಮೇಲೊಂದು ಹಿಟ್ ಚಿತ್ರಗಳನ್ನು ನೀಡಿ, ಈಗ ಅಷ್ಟೇ ಅಚ್ಚರಿ ಎನ್ನುವಂತೆ ಮದುವೆ ದಿನಾಂಕವನ್ನೇನೋ ಪ್ರಕಟಿಸಿದ್ದೂ ಆಗಿದೆ. ಆದರೆ ಈ ವರ್ಷವೇ ಆಗುತ್ತಾ? ಮುಂದಿನ ವರ್ಷಕ್ಕೆ ಮುಂದೂಡುತ್ತಾರಾ? ಅನ್ನೋದಕ್ಕೆ ಸಲ್ಮಾನ್ ಖಾನ್ ಅವರೇ ಉತ್ತರಿಸಬೇಕಷ್ಟೆ.
Comments are closed.