
ಬೆಂಗಳೂರು: ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಕಬಾಲಿ ಜ್ವರ ಶುರುವಾಗಿದೆ. ತಮಿಳುನಾಡು ಮಾತ್ರವಲ್ಲ ದೇಶದೆಲ್ಲೆಡೆ ಕಬಾಲಿ ಬಿಡುಗಡೆಗೆ ಅಭಿಮಾನಿಗಳು ಕಾತರದಿಂದ ಕಾಯ್ತಿದ್ದಾರೆ.
ಜುಲೈ 22ರಂದು ಕಬಾಲಿ ರಿಲೀಸ್ ಆಗ್ತಿದೆ. ಇತ್ತ ಚೆನ್ನೈನ ಕಾರ್ಪೊರೇಟ್ ಕಂಪನಿಯೊಂದು ಸೂಪರ್ಸ್ಟಾರ್ ರಜನಿ ಅಭಿನಯದ ಕಬಾಲಿ ಚಿತ್ರ ಬಿಡುಗಡೆ ಹಿನ್ನೆಲೆಯಲ್ಲಿ ಜುಲೈ 22ರಂದು ರಜೆ ಘೋಷಿಸಿದೆ. ಸಾಕಷ್ಟು ರಜೆ ಅರ್ಜಿಗಳು ಬರ್ತಿವೆ. ಹೀಗಾಗಿ ರಜೆ ಘೋಷಣೆ ಮಾಡುವಂತೆ ಆ ಕಂಪನಿಯ ಮಾನವ ಸಂಪನ್ಮೂಲ ಅಧಿಕಾರಿ ಮನವಿ ಮಾಡಿದ್ದಾರೆ.
ಚೆನ್ನೈನ ಕೊಟ್ಟಿವಕ್ಕಂನಲ್ಲಿರುವ ಡಾಟಾ ಪ್ರೊಸೆಸಿಂಗ್ ಕಂಪನಿ ರಜೆ ಜತೆಗೆ ಕಂಪನಿ ಉದ್ಯೋಗಿಗಳಿಗೆ ಟಿಕೆಟ್ ಕೂಡ ಕೊಡಿಸಲು ಮುಂದಾಗಿದೆ.
Comments are closed.