ಕರ್ನಾಟಕ

ತುಮಕೂರಿನಲ್ಲಿ ಚರ್ಚ್ ಮೇಲೆ ಪೆಟ್ರೋಲ್ ಬಾಂಬ್ ಎಸೆದು ದಾಳಿ

Pinterest LinkedIn Tumblr

church

ತುಮಕೂರು: ಶಿರಾಗೇಟ್ ಬಳಿ ಇರುವ ಯೂನಿಯನ್ ಕ್ರಿಶ್ಚಿಯನ್ ಚರ್ಚ್ ಮೇಲೆ ದುರ್ಷರ್ಮಿಯೊಬ್ಬ ಪೆಟ್ರೋಲ್ ಬಾಂಬ್ ಎಸೆದು ದಾಳಿ ನಡೆಸಿದ್ದಾನೆ.

ಬೆಳಗಿನ ಜಾವ 4 ಗಂಟೆ ಸುಮಾರಿಗೆ ದುಷ್ಕರ್ಮಿ ಪೆಟ್ರೋಲ್ ಬಾಂಬ್ ಎಸೆದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ತುಮಕೂರು ಶಿರಾ ಮುಖ್ಯ ರಸ್ತೆಯಿಂದ ಸುಮಾರು 100 ಮೀಟರ್ ಅಂತರದಲ್ಲಿ ಚರ್ಚ್ ಇದೆ. ಪೆಟ್ರೋಲ್ ಸೆಲ್ ದಾಳಿಯಿಂದ ಚರ್ಚ್‍ನ ಮುಖ್ಯ ದ್ವಾರದ ಬಾಗಿಲು ಸ್ವಲ್ಪ ಸುಟ್ಟಿದೆ.

ಸ್ಥಳಕ್ಕೆ ಎಸ್ ಪಿ ಕಾರ್ತಿಕ್ ರೆಡ್ಡಿ, ಜಿಲ್ಲಾಧಿಕಾರಿ ಕೆ ಪಿ ಮೋಹನ್ ರಾಜ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪೆಟ್ರೋಲ್ ತುಂಬಿದ ಬಿಯರ್ ಬಾಟಲಿಯನ್ನು ಚರ್ಚ್ ಮೇಲೆ ಎಸೆಯಲಾಗಿದೆ. ಆರೋಪಿಯನ್ನು ಶೀಘ್ರದಲ್ಲಿ ಬಂಧಿಸಲಾಗುವುದು ಎಂದರು.

ತುಮಕೂರು ಶಾಸಕ ರಫೀಕ್ ಅಹ್ಮದ್ ಸ್ಥಳಕ್ಕೆ ಭೇಟಿ ಮಾತನಾಡಿದ್ದು, ಬೆಳಗಿನ ಜಾವ 4 ಗಂಟೆ ಸುಮಾರಿಗೆ ಪೆಟ್ರೋಲ್ ಸೆಲ್ ಎಸೆದಿರುವ ದುಷ್ಕರ್ಮಿ ಉದ್ದೇಶ ತಿಳಿದಿಲ್ಲ. ಸಿಸಿಟಿವಿಯಲ್ಲಿ ದುಷ್ಕೃತ್ಯ ಸೆರೆಯಾಗಿದೆ. ಪೊಲೀಸರು ಅದನ್ನು ವಶಪಡಿಸಿಕೊಂಡು ತನಿಖೆ ನಡೆಸಿದ್ದಾರೆ. ಇದು ರಾಜಕೀಯ ಪ್ರೇರಿತವೋ ಬೇರೆಯೊ ಎಂಬುದು ಆರೋಪಿ ಬಂಧನದ ನಂತರ ತಿಳಿಯಲಿದೆ ಎಂದರು.

Comments are closed.