ಅಂತರಾಷ್ಟ್ರೀಯ

ತಾನೇ ಹೆತ್ತ 8 ಮಕ್ಕಳನ್ನ ಕೊಂದು ಹಾಕಿದ ಪಾಪಿ ತಾಯಿ!

Pinterest LinkedIn Tumblr

32

ಕೋಬರ್ಗ್: ಜಗತ್ತಿನಲ್ಲಿ 10, 12 ಮಕ್ಕಳನ್ನ ಹೆತ್ತು ಸಲಹುತ್ತಿರುವ ಮಹಾತಾಯಿರಿದ್ದಾರೆ. ಮಕ್ಕಳೆಂದರೆ ತಾಯಂದಿರು ಜೀವ ಬಿಡ್ತಾರೆ. ಆದ್ರೆ ಇಲ್ಲೊಬ್ಬ ತಾಯಿ ಇದ್ದು, 8 ಮಕ್ಕಳನ್ನ ಸಾಯಿಸಿದ್ದೂ, ಹೆತ್ತ ಮಕ್ಕಳನ್ನ ತನ್ನ ಕೈಯಾರೇ ಮೃತ್ಯುಕೂಪಕ್ಕೆ ಕಳುಹಿಸಿದ್ದಾಳೆ.

ಹೆತ್ತ ತಾಯಿಯೇ ಮಕ್ಕಳ ಪಾಲಿಗೆ ಯಮನಾದ ಘೋರ ಘಟನೆಯೊಂದು ಜರ್ಮನಿಯ ಕೋಬರ್ಗ್ ನಗರದಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಆಶ್ಚರ್ಯವೆನಿಸಿದ್ರೂ ಇದು ಸತ್ಯ ಘಟನೆ ಎಂಡ್ರಿಯಾ ಎಂಬ ತಾಯಿಯೊಬ್ಬಳು ಎಂಟು ಮಕ್ಕಳನ್ನ ಕೊಲೆಗೈದು ಇದೀಗ ಜೈಲು ಪಾಲಾಗಿದ್ದಾಳೆ. ಆದ್ರೆ ಮೂಲಗಳ ಪ್ರಕಾರ ಇದಕ್ಕಿಂತಲೂ ಹೆಚ್ಚು ಮಕ್ಕಳನ್ನ ಈಕೆ ಕೊಲೆಗೈದಿದ್ದಾಳಂತೆ. ಈ ಹೇಳಿಕೆಯನ್ನ ಸ್ವತಃ ತಾಯಿಯೇ ಕೋರ್ಟ್‍ನಲ್ಲಿ ಪ್ರಸ್ತಾಪಿಸಿದ್ದಾಳಂತೆ.

ಕೊಲೆ ಮಾಡಿದ್ದೇಕೆ?: 2003ರಿಂದಲೂ ಈಕೆ ಮಕ್ಕಳನ್ನ ಕೊಲೆಗೈಯುತ್ತ ಬಂದಿದ್ದು, ಇದುವರೆಗೂ ಎಷ್ಟೂ ಮಕ್ಕಳು ಸಾವನ್ನಪ್ಪಿದ್ದಾರೆ ಎನ್ನುವುದೇ ಈಕೆಯ ಲೆಕ್ಕಕ್ಕೆ ಸಿಕ್ಕಿಲ್ಲವಂತೆ. ಕೇವಲ ಮಕ್ಕಳು ಹೇಳುವುದನ್ನ ಕೇಳುತ್ತಿಲ್ಲವೆಂದು, ಅಳುತ್ತವೆ ಎಂದು ಈಕೆ ಕೊಲೆ ಮಾಡಿದ್ದು, ಇದೀಗ ಜೈಲು ಪಾಲಾಗಿದ್ದಾಳೆ. ಇನ್ನೂ ಮಕ್ಕಳ ಕೊಲೆಯನ್ನ ತಡೆಯುವಲ್ಲಿ ವಿಫಲವಾದ ತಂದೆಯನ್ನ ಪೊಲೀಸರು ಜೈಲಿಗಟ್ಟಿದ್ದಾರೆ.

ಮೃತ್ಯುಕೂಪದಲ್ಲಿ ಮಕ್ಕಳು: ಮಕ್ಕಳನ್ನ ಕೊಲೆ ಮಾಡುತ್ತಿದ್ದ ಆರೋಪಿ ತಾಯಿ ಶವಗಳನ್ನ ಪ್ಲಾಸ್ಟಿಕ್ ಕವರ್‍ನಲ್ಲಿ ಹಾಕಿ ಅಪಾರ್ಟ್‍ಮೆಂಟ್‍ನಲ್ಲಿ ಬಚ್ಚಿಡುತ್ತಿದ್ದಳಂತೆ. ತನಿಖೆ ಆರಂಭಿಸಲು ಶುರುಮಾಡಿದ ಪೊಲೀಸರಿಗೆ ವಿಚಿತ್ರ ರೀತಿಯಲ್ಲಿ ಮಕ್ಕಳ ಮೃತದೇಹಗಳು ಪತ್ತೆಯಾಗಿವೆ.

ಮಕ್ಕಳ ಮೃತದೇಹ: ಅಪಾರ್ಟ್‍ಮೆಂಟ್‍ನಲ್ಲಿ ಜೀವನ ನಡೆಸುತ್ತಿದ್ದ, ಇದರಲ್ಲಿ ಒಂದು ಮಗುವಿನ ಶವ ಯಾವುದೇ ರೀತಿಯಲ್ಲಿ ಕೊಳೆಯದೇ ಹಾಗೇ ದೊರೆತಿದೆ. ಇನ್ನು ಮೂರು ಶವಗಳು ಕೊಳೆತ ರೀತಿಯಲ್ಲಿ ಪತ್ತೆಯಾಗಿವೆ. ಇನ್ನುಳಿದ ನಾಲ್ಕು ಮಕ್ಕಳನ್ನ ಈಕೆ ಟವೆಲ್‍ನಲ್ಲಿ ಸುತ್ತಿ ಹಾಕಿ ಬಚ್ಚಿಟ್ಟಿದ್ದ ಪತ್ತೆಯಾಗಿದೆ. ಮೂಲಗಳ ಪ್ರಕಾರ ಎಲ್ಲಾ ಶವಗಳನ್ನ ಪೊಲೀಸರು ವಶಕ್ಕೆ ಪಡೆದಿದ್ದು, ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

Comments are closed.