ಪ್ರಮುಖ ವರದಿಗಳು

ಮೈದುನನಿಂದ ಆತ್ಯಾಚರಕ್ಕೊಳಗಾಗಿದ್ದ ಪತ್ನಿಯನ್ನ ಪತಿಯೇ ಮತ್ತೊಮ್ಮೆ ಆತನಿಂದ ಅತ್ಯಾಚಾರ ಮಾಡಿಸಿದ

Pinterest LinkedIn Tumblr

rape

ಪಲ್ಘಾರ್: ಮೈದುನನಿಂದ ಆತ್ಯಾಚರಕ್ಕೊಳಗಾಗಿದ್ದ ಪತ್ನಿಯನ್ನ ಪತಿಯೇ ಮತ್ತೊಮ್ಮೆ ಆತನಿಂದ ಅತ್ಯಾಚಾರ ಮಾಡಿಸಿದ ಅಮಾನವೀಯ ಘಟನೆ ಮಹಾರಾಷ್ಟ್ರದ ಪಲ್ಘಾರ್ ಜಿಲ್ಲೆಯಲ್ಲಿ ನಡೆದಿದೆ.

ಪಲ್ಘಾರ್ ಜಿಲ್ಲೆಯ ಬೊಯ್‍ಸರ್ ಗ್ರಾಮದಲ್ಲಿ ಇಂತಹದೊಂದು ಘಟನೆ ನಡೆದಿದ್ದು, ಜುಲೈ 7ರಂದು ಮದುವೆಯಾಗಿದ್ದ 22 ವರ್ಷದ ನವವಿವಾಹತೇ ಗಂಡನ ಮನೆಯಲ್ಲಿ 2 ಬಾರಿ ತ್ಯಾಚಾರಕ್ಕೆ ಒಳಗಾಗಿದ್ದಾಳೆ. ದುರಂತವೆಂದರೆ ಇದಕ್ಕೆ ಪತಿಯ ಕುಟುಂಬದವರೇ ಕುಮ್ಮಕ್ಕು ನೀಡಿದ್ದಾರೆ.

ಏನಿದು ಘಟನೆ?: ಮದುವೆಯಾಗಿ ಗಂಡನ ಮನೆಗೆ ಹೋಗಿದ್ದ ನವವಿವಾಹಿತೇ ಒಬ್ಬಳೇ ಮನೆಯಲ್ಲಿದ್ದ ವೇಳೆ ಪತಿ ಮೈದುನಾ ಆಕೆಯ ಮೇಲೆ ಅತ್ಯಾಚಾರ ನೆಡೆಸಿದ್ದಾನೆ. ಇದನ್ನ ಪತಿಗೆ ತಿಳಿಸಿದ ಆಕೆಗೆ ಮತ್ತೊಂದು ಶಾಕ್ ಕಾದಿತ್ತು. ಯಾಕಂದ್ರೆ ಪತಿ ಪತ್ನಿಯ ಬೆನ್ನೆಲುಬಿಗೆ ನಿಲ್ಲದೇ ಮೈದುನನಿಗೆ ಹೇಗೆ ರೇಪ್ ಮಾಡಿದೇ ಎಂದು ತೋರಿಸು ಎಂದು ಕುಟುಂಬದವರ ಮುಂದೆಯೇ ಮತ್ತೊಮ್ಮೆ ಅತ್ಯಾಚಾರ ನಡೆಸಿದ್ದಾನೆ.

ಇದರಿಂದ ಬೇಸತ್ತ ಮಹಿಳೆ ಸೀದಾ ತನಗೆ ಪಾದ್ರಿಗೆ ವಿಷಯ ಮುಟ್ಟಿಸಿದ್ದಾಳೆ. ನಂತರ ಆತನ ಸಹಕಾರದಿಂದ ಪೊಲೀಸರಿಗೂ ದೂರು ನೀಡಿದ್ದಾಳೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಆರೋಪಿ ಮೈದುನ, ಆಕೆಯ ಪತಿ ಹಾಗೂ ಆತನ ಕುಟುಂಬದವರನ್ನ ಬಂಧಿಸಿದ್ದಾರೆ.

Comments are closed.