ಮುಂಬೈ: ಒಂದು ಕಾಲದಲ್ಲಿ ಸಲ್ಮಾನ್ ಖಾನ್ ಹಾಗೂ ಸಂಜಯ್ ದತ್ ಗೆಳೆತನ ಬಗ್ಗೆ ಬಾಲಿವುಡ್‍ನ ತುಂಬೆಲ್ಲಾ ಮಾತೇ ಮಾತು. ಆದ್ರೆ ಇಬ್ಬರ ಮಧ್ಯೆ ಮೂಡಿದ ಬಿರುಕು ಇನ್ನೂ ಶಮನವಾಗಿಲ್ಲ. ಆದ್ರೆ ಈ ಬಿರುಕನ್ನ ದೂರ ಮಾಡಲು ಸಂಜಯ್ ಪತ್ನಿ ಮಾನ್ಯತಾ ಪ್ರಯತ್ನಿಸುತ್ತಿದ್ದಾರಂತೆ ಎಂಬ ಸುದ್ದಿ ಈಗ ಬಿ ಟೌನ್‍ನಲ್ಲಿ ಹರಡಿದೆ.
1991ರಲ್ಲಿ ಸಲ್ಮಾನ್ ಹಾಗೂ ದತ್ ಸಾಜನ್ ಚಿತ್ರದಲ್ಲಿ ಕಾಣಿಸಿಕೊಂಡಿದ್ರು. ಆದ್ರೆ ಯಾವಾಗ ದತ್ ಚಿತ್ರದಲ್ಲಿ ಕತ್ರಿನಾ ಐಟಂ ಡಾನ್ಸರ್ ಆಗಿ ನಟಿಸಿದ್ಲು ಅಲ್ಲಿಂದ ಇಬ್ಬರ ಮಧ್ಯೆ ಸಣ್ಣದೊಂದು ಕೋಲ್ಡ್‍ವಾರ್ ಶುರುವಾಗಿತ್ತು. ಆದ್ರೆ ಸಲ್ಮಾನ್ ದತ್ ಜೈಲಿಂದ ಬಂದ ಮೇಲೆ ಚಿತ್ರಗಳನ್ನ ಮಾಡಲು ಸಹಾಯ ಮಾಡಿದ್ದಾರಂತೆ. ಅಲ್ಲದೇ ಬಿರುಕನ್ನ ಸರಿಪಡಿಸಲು ದತ್ ಪತ್ನಿ ಮಾನ್ಯತಾ ಪ್ರಯತ್ನಿಸುತ್ತಿದ್ದು, ಇವರಿಬ್ಬರು ಮುಖಾಮುಖಿಯಾಗಲು ಕಾಯುತ್ತಿದ್ದಾರಂತೆ.
ಸದ್ಯ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿಗಳೂ ಸಿಕ್ಕಿಲ್ಲವಾದ್ರೂ ಇಬ್ಬರೂ ಅಭಿಮಾನಿಗಳ ಕೋರಿಕೆ ಕೂಡ ನಟರಿಬ್ಬರು ಒಂದಾಗಬೇಕೆಂದು ಕೋರುತ್ತಿದ್ದಾರಂತೆ. ಸದ್ಯ ಸಲ್ಮಾನ್ ಹಾಗೂ ಶಾರೂಖ್ ಒಡೆದ ಗೆಳೆತನ ಸಿದ್ದಿಕಿ ಅವರ ಇಫ್ತಾರ್ ಪಾರ್ಟಿಯಲ್ಲಿ ಒಂದಾಗಿತ್ತು. ಇದೂ ಹಾಗೇ ಒಂದಾಗುತ್ತಾ ಎನ್ನುವುದನ್ನ ಕಾದು ನೋಡಬೇಕಿದೆ.
Comments are closed.