ಅಂತರಾಷ್ಟ್ರೀಯ

ಮಂಗಳ ಗ್ರಹಕ್ಕೆ ಹೋಗಲಿರುವ ಯಾನಿಗಳ ಹೊಸ ಸೂಟ್ ಇಲ್ಲಿದೆ ನೋಡಿ..

Pinterest LinkedIn Tumblr

Mars-space-suite

ವಾಶಿಂಗ್‍ಟನ್: ಮಂಗಳನಲ್ಲಿ ಉಪಗ್ರಹ ಇಳಿಸಿದ ಬಳಿಕ ಇದೀಗ ಮನುಷ್ಯನನ್ನು ಮಂಗಳ ಗ್ರಹಕ್ಕೆ ಕಳುಹಿಸಲು ಅಮೇರಿಕದ ನಾಸಾ ಸಿದ್ದತೆಯಲ್ಲಿ ತೊಡಗಿದೆ.

ಈ ಹಿನ್ನಲೆಯಲ್ಲಿ ನಾಸಾ ಹೊಸ ಸ್ಪೇಸ್‍ಸ್ಯೂಟ್‍ನ್ನು ಅನಾವರಣ ಮಾಡಿದೆ. ಬೂದು ಬಣ್ಣದ ಈ ಸ್ಪೇಸ್ ಸೂಟ್ ಹಿಂದಿನ ಜೆಡ್-2 ವಿನ್ಯಾಸಕ್ಕಿಂತ ಹೆಚ್ಚು ಸಮರ್ಥವಗಿದೆ. ಇದು ಮೊದಲಿಗಿಂತ ಕಡಿಮೆ ತೂಕದ್ದಾಗಿದ್ದು ಗಗನಯಾತ್ರಿಕರು ಮಂಗಳನ ನೆಲದ ಮೇಲೆ ಸುಲಭವಾಗಿ ನಡೆದಾಡಲು ಸಹಾಯಕವಾಗುವಂತೆ ವಿನ್ಯಾಸ ಮಾಡಲಾಗಿದೆ. ಇದರಲ್ಲಿ ಅಳವಡಿಸಲಾಗಿರುವ ಕೆಂಪು ಬಣ್ಣದ ಎಲೆಕ್ಟ್ರೋಲುಮಿನಿಸೆಂಟ್ ಗುಂಡಿ ಕತ್ತಲಿರುವ ಪ್ರದೇಶಗಳಲ್ಲೂ ಸ್ಪಷ್ಟವಾಗಿ ನೋಡಲು ಸಹಾಯ ಮಾಡುತ್ತದೆ.

ಈ ಸ್ಪೇಸ್‍ಸ್ಯೂಟ್‍ನ್ನು ಬಾಹ್ಯಾಕಾಶ ಮತ್ತು ಮಂಗಳ ಗ್ರಹದ ಮೇಲ್ಮೈ ಎರಡಕ್ಕೂ ಹೊಂದಾಣಿಕಾಯಾಗುವಂತೆ ವಿನ್ಯಾಸಗೊಳಿಸಲಾಗಿದೆ. ನಾಸಾ ಸಂಸ್ಥೆ 2030ರ ಒಳಗಡೆ ಮಾನವ ಸಹಿತ ಉಪಗ್ರಹವನ್ನು ಮಂಗಳ ಗ್ರಹಕ್ಕೆ ಕಳುಹಿಸಲು ಸಕಲ ತಯಾರಿಯನ್ನು ನಡೆಸುತ್ತಿದೆ.

https://youtu.be/_LGGP5GsU1A

Write A Comment