ಪ್ರಮುಖ ವರದಿಗಳು

ಗುಜರಾತಿನಲ್ಲಿ ಪ್ರತಿಭಟನೆ ನಡೆಸುತ್ತಿರುವ ಹಾರ್ದಿಕ್ ಪಟೇಲ್ ಸರಸವಾಡುತ್ತಿರುವ ವೀಡಿಯೋ ! ಸಾಮಾಜಿಕ ತಾಣಗಳಲ್ಲಿ ಬಿಸಿಬಿಸಿ ಚರ್ಚೆ

Pinterest LinkedIn Tumblr

patel

ದೆಹಲಿ, ಸೆ.1: ಗುಜರಾತಿನಲ್ಲಿ ಪಟೇಲ್ ಸಮುದಾಯಕ್ಕೆ ಒಬಿಸಿ ಮೀಸಲಾತಿ ಕಲ್ಪಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸುವ ಮೂಲಕ ದೇಶಾದ್ಯಂತ ಜನರ ಗಮನ ಸೆಳೆದ 22 ವರ್ಷದ ಹಾರ್ದಿಕ್ ಪಟೇಲ್ ಹುಡುಗಿಯೊಂದಿಗೆ ಸರಸವಾಡುತ್ತಿರುವ ವೀಡಿಯೋ ವೈರಲ್ ಆಗಿದೆ.

ವಾಟ್ಸಪ್, ಫೇಸ್‌ಬುಕ್ ಸೇರಿದಂತೆ ಸಾಮಾಜಿಕ ತಾಣಗಳಲ್ಲಿ ಈ ವೀಡಿಯೋ ವೈರಲ್ ಆಗಿದ್ದು, ಇದೀಗ ಈ ವೀಡಿಯೋ ಕುರಿತು ಬಿಸಿಬಿಸಿ ಚರ್ಚೆ ನಡೆಯುತ್ತಿದೆ.

ಬ್ಯಾಂಕಾಕ್‌ನಲ್ಲಿ ಸ್ನೇಹಿತರೊಂದಿಗೆ ತಿರುಗಾಡಲು ಹೋದ ಸಂದರ್ಭದಲ್ಲಿ ಈ ವೀಡಿಯೋ ಚಿತ್ರೀಕರಿಸಲಾಗಿದ್ದು ಎಂದು ಹೇಳಲಾಗುತ್ತಿದೆ. ಹಾರ್ದಿಕ್ ಪಟೇಲ್ ಹಾಗೂ ಆತನ ಸ್ನೇಹಿತರು ಓರ್ವಳು ಹುಡುಗಿಯೊಂದಿಗೆ ಅಶ್ಲೀಲವಾಗಿ ಸರಸವಾಡುತ್ತಿರುವ ದೃಶ್ಯ ಚಿತ್ರೀಕರಿಸಿದ್ದು, ಗುಜರಾತಿನಲ್ಲಿ ಆತನ ನಾಯಕತ್ವದಲ್ಲಿ ನಡೆಯುತ್ತಿರುವ ಪ್ರತಿಭಟನೆಯ ಮಧ್ಯೆ ವೀಡಿಯೋ ವೈರಲ್ ಆಗಿರುವುದು ಆತನನ್ನು ಮುಜುಗುರಕ್ಕೀಡು ಮಾಡಿದೆ.

ಇಂಥ ಅಶ್ಲೀಲ ವೀಡಿಯೋದಲ್ಲಿರುವ ಹಾರ್ದಿಕ್ ಪಟೇಲ್‌ನ ವಿರುದ್ಧ ಸಾಮಾಜಿಕ ತಾಣಗಳಲ್ಲಿ ವಿವಿಧ ರೀತಿಯ ಟೀಕೆಗಳು ವ್ಯಕ್ತವಾಗಿದೆ. ಆದರೆ ಈ ವೀಡಿಯೋದಲ್ಲಿರುವುದು ತಾಣಲ್ಲ. ಇದು ತನ್ನ ತೇಜೋವಧೆ ಮಾಡಲು ಮಾಡಿರುವ ಹುನ್ನಾರು ಎಂದು ಹಾರ್ದಿಕ್ ಪಟೇಲ್ ಸ್ಪಷ್ಟನೆ ನೀಡಿದ್ದಾನೆನ್ನಲಾಗಿದೆ.

https://youtu.be/cTEwlCcS1dA

Write A Comment