ಅಂತರಾಷ್ಟ್ರೀಯ

ನೇಪಾಳದಲ್ಲಿ ಪ್ರಬಲ ಭೂಕಂಪ: ನಡುಗಿದ ದೆಹಲಿ; 7.5 ರಷ್ಟು ಕಂಪನದ ತೀವ್ರತೆ; ಉತ್ತರ, ಪೂರ್ವ ಭಾರತದಲ್ಲಿ ಭಾರಿ ಭೂಕಂಪ

Pinterest LinkedIn Tumblr

CDa3KYAUUAAjz6x

ಕಠ್ಮಂಡು: ನೆರೆಯ ರಾಷ್ಟ್ರ ನೇಪಾಳ ರಾಜಧಾನಿ ಕಠ್ಮಂಡುವಿನಲ್ಲಿ ಶನಿವಾರ ಬೆಳಿಗ್ಗೆ ಪ್ರಬಲ ಭೂಕಂಪನ ಸಂಭವಿಸಿದ್ದು, ಹಲವು ಮನೆಗಳು ಕುಸಿದಿವೆ.

ರಿಕ್ಟರ್ ಮಾಪನದಲ್ಲಿ 7.5ರಷ್ಟು ಕಂಪನದ ತೀವ್ರತೆ ದಾಖಲಾಗಿದ್ದು,  ಸದ್ಯಕ್ಕೆ ಯಾವುದೇ ಸಾವಿನ ವರದಿಗಳಿಲ್ಲ. ಭಾರತ ಹಾಗೂ ಪಾಕಿಸ್ತಾನದಲ್ಲೂ ಕಂಪನದ ಅನುಭವವಾಗಿದೆ.

ಪಾಕಿಸ್ತಾನದ ಲಾಹೋರ್‌ನಲ್ಲಿ ಭೂಮಿ ನಡುಗಿದೆ. ಕಂಪನ ಸಂಭವಿಸಿದಾಗ ತಾನು ಕಚೇರಿಯಲ್ಲಿದ್ದೆ ಎಂದು ಲಾಹೋರ್‌ ನಿವಾಸಿ ಮೊಹಮ್ಮದ್ ಸಾಹಾಬ್‌ ಅವರು ತಿಳಿಸಿದ್ದಾರೆ.

ಕೆಲವು ಕ್ಷಣಗಳ ಕಾಲ ಕಂಪನ ಮುಂದುವರಿದಿತ್ತು. ನಗರದಲ್ಲಿ ಇದೀಗ ಪರಿಸ್ಥಿತಿ ಸಹಜವಾಗಿದೆ ಎಂದೂ ಅವರು ತಿಳಿಸಿದ್ದಾರೆ.

ನೇಪಾಳದಲ್ಲಿ ಅಪಾರ ಹಾನಿ ಸಂಭವಿಸಿರುವ ಸಾಧ್ಯತೆಗಳಿವೆ ಎಂದು ಅಮೆರಿಕದ ಭೂಗರ್ಭ ಸಮೀಕ್ಷೆ ಕೇಂದ್ರ ತಿಳಿಸಿದೆ.

ನಡುಗಿದ ದೆಹಲಿ: 7.5 ರಷ್ಟು ಕಂಪನದ ತೀವ್ರತೆ; ಉತ್ತರ, ಪೂರ್ವ ಭಾರತದಲ್ಲಿ ಭಾರಿ ಭೂಕಂಪ
ನವದೆಹಲಿ: ರಾಷ್ಟ್ರೀಯ ರಾಜಧಾನಿ ಪ್ರದೇಶ ಹಾಗೂ ದೆಹಲಿ ಸೇರಿದಂತೆ ಉತ್ತರ ಹಾಗೂ ಪೂರ್ವ ಭಾರತದ ಹಲವೆಡೆ ಭಾರೀ ಭೂಕಂಪ ಸಂಭವಿಸಿದೆ. ಕಂಪನದ ತೀವ್ರತೆ ರಿಕ್ಟರ್ ಮಾಪಕದಲ್ಲಿ 7.5ರಷ್ಟು ತೀವ್ರತೆ ದಾಖಲಾಗಿದೆ. ಬೆಳಿಗ್ಗೆ 11.44 ನಿಮಿಷಕ್ಕೆ ಈ ದುರ್ಘಟನೆ ನಡೆದಿದ್ದು,  ಭೂಕಂಪನದ ಕೇಂದ್ರ ಬಿಂದು ನೇಪಾಳದಲ್ಲಿತ್ತು.

ಪೂರ್ವ ಹಾಗೂ ಉತ್ತರ ಭಾರತದಾದ್ಯಂತ ಕಂಪನದ ಅನುಭವವಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ಭೂಗರ್ಭ ಕಾರ್ಯಾಚರಣೆ ವಿಭಾಗದ ಮುಖ್ಯಸ್ಥರಾದ ಜೆ.ಎಲ್.ಗೌತಮ್ ತಿಳಿಸಿದ್ದಾರೆ.
‘ಉತ್ತರ ಅಕ್ಷಾಂಶ 28.1 ಹಾಗೂ ಪೂರ್ವ ರೇಖಾಂಶದ 84.6ರ ಮಧ್ಯ ಭಾಗದಲ್ಲಿ ಬೆಳಿಗ್ಗೆ 11.41 ನಿಮಿಷಕ್ಕೆ ಭೂಕಂಪನ ಸಂಭವಿಸಿದೆ. ನೇಪಾಳದಲ್ಲಿ ಕಂಪನದ ಕೇಂದ್ರ ಪತ್ತೆಯಾಗಿದೆ’ ಎಂದು ಪ್ರಕಟಣೆಯಲ್ಲಿ ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ಬಿಹಾರ್, ಉತ್ತರ ಪ್ರದೇಶ, ರಾಜಸ್ತಾನ, ಹರಿಯಾಣ ಹಾಗೂ ಪಂಜಾಬ್‌ನ ಹಲವೆಡೆ ಸುಮಾರು ಒಂದು ನಿಮಿಷದ ಅವಧಿವರೆಗೂ ಕಂಪನದ ಅನುಭವವಾಗಿದ್ದು, ಜನರಲ್ಲಿ ಆತಂಕ ಸೃಷ್ಟಿಸಿತ್ತು. ಗಾಬರಿಗೊಂಡ ಜನರು ಮನೆ ಹಾಗು ಕಚೇರಿಗಳಿಂದ ಹೊರ ಓಡಿ ಬಂದ ದೃಶ್ಯ ಸಾಮಾನ್ಯವಾಗಿತ್ತು.

ಸದ್ಯದ ವರದಿ ಪ್ರಕಾರ ಯಾವುದೇ ಸಾವು–ನೋವು ಸಂಭವಿಸಿಲ್ಲ. ಆದರೆ, ದೆಹಲಿ ಮೆಟ್ರೋ ರೈಲು ಸೇವೆಯ ಮೇಲೆ ಪರಿಣಾಮ ಬೀರಿದೆ.

Write A Comment