ಕನ್ನಡ ವಾರ್ತೆಗಳು

ಉಳ್ಳಾಲ ಉರೂಸ್ ಧಾರ್ಮಿಕ ಉಪನ್ಯಾಸ ಕಾರ್ಯಕ್ರಮದ ಸಮಾರೋಪ ಸಮಾರಂಭ.

Pinterest LinkedIn Tumblr

Ulla_urus_ends_1

ಉಳ್ಳಾಲ,ಎ.25:  ಪ್ರವಾದಿಯವರ ಮೇಲೆ ಸಂಪೂರ್ಣ ವಿಶ್ವಾಸ ಇಟ್ಟವನು ಮುಸ್ಲಿಮನಾಗಿದ್ದಾನೆ.ಆದರೆ ಪ್ರವಾದಿಯವರನ್ನು ಕಡೆಗಣಿಸಿ ಜೀವಿಸಿದಲ್ಲಿ ರಕ್ಷಣೆ ಸಿಗದು. ಓ ಮಾನವ ಸಮುದಾಯವೇ ನೀವು ಪ್ರವಾದಿಯವ ಬಗ್ಗೆ ಅರ್ಥ ಮಾಡಿಕೊಳ್ಳಿ. ಅವರು ನಿಮ್ಮ ಜತೆ ಸದಾ ಇದ್ದಾರೆ ಎಂದು ಕುರಾನ್‌ನಲ್ಲಿ ಅಲ್ಲಾಹನು ಈ ಹಿಂದೆಯೇ ಹೇಳಿದ್ದಾರೆ. ನಮ್ಮ ಆರಾಧನೆ ಅಲ್ಲಾಹನಿಗೆ ಮಾತ್ರ. ಪ್ರವಾದಿಯವರು ಅಲ್ಲಾಹನ ರಸೂಲ್ ಆಗಿದ್ದಾರೆ ಎಂಬ ವಿಶ್ವಾಸ ನಮಲ್ಲಿರಬೇಕು. ಅವರು ಅಲ್ಲಾಹನ ರಸೂಲ್ ಆಗಿರುವುದು ಅವರ ಜೀವನ ಕಾಲದಲ್ಲಿ ಮಾತ್ರ ಅಲ್ಲ, ತದನಂತರವೂ ರಸೂಲ್ ಆಗಿದ್ದಾರೆ. ಪ್ರವಾದಿಯವರು ಈ ಹಿಂದೆ ಅಲ್ಲಾಹನ ರಸೂಲ್ ಆಗಿದ್ದರು ಎಂದು ಹೇಳಿದರೆ ಅದು ಅವಿಶ್ವಾಸ ಆಗುತ್ತದೆ ಎಂದು ಸುಲ್ತಾನುಲ್ ಉಲಮಾ ಎಪಿ ಅಬೂಬಕರ್ ಮುಸ್ಲಿಯಾರ್ ಹೇಳಿದರು. ಅವರು ಉಳ್ಳಾಲ ಉರೂಸ್ ಪ್ರಯುಕ್ತ ನಡೆಯುತ್ತಿರುವ ಧಾರ್ಮಿಕ ಉಪನ್ಯಾಸ ಕಾರ್ಯಕ್ರಮದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ತಾಯಿಯ ಕಾಲಿನಡಿಯಲ್ಲಿ ಸ್ವರ್ಗವಿದೆ. ತಾಯಿಯ ಆಶೀರ್ವಾದ ಪ್ರತಿಯೊಂದು ಕಾರ್ಯಗಳಿಗೂ ಬೇಕು. ತಾಯಿಯ ಮಾತು ಕಡೆಗಣಿಸಿ ಕಾರ್ಯ ಮಾಡಿದರೆ ಪರಲೋಕದಲ್ಲಿ ರಕ್ಷಣೆ ಸಿಗದು. ಅದೇ ರೀತಿ ಪ್ರವಾದಿಯವರ ಮೇಲೆ ವಿಶ್ವಾಸ ಇಡದೇ ರಕ್ಷಣೆ ಸಿಗುವುದಿಲ್ಲ. ಲೋಕಕ್ಕೆ ಬಂದ ಲಕ್ಷಾಂತರ ಪ್ರವಾದಿಗಳಲ್ಲಿ ಅಂತಿಮವಾಗಿ ಬಂದ ಪ್ರವಾದಿ ಮಹಮ್ಮದ್‌ರವರಿಗೆ ಹೆಚ್ಚಿನ ಸ್ಥಾನ ನೀಡಲಾಗಿದೆ. ಅವರಿಗೆ ಸಲ್ಲಬೇಕಾದ ಗೌರವವನ್ನು ನಾವು ನೀಡಬೇಕು ಎಂದರು. ಡಾ, ಹುಸೈನ್ ಸಖಾಫಿ ಚುಳ್ಳಿಕೋಡ್ ಮುಖ್ಯ ಭಾಷಣ ಮಾಡಿದರು.

ಈ ಸಂದರ್ಭದಲ್ಲಿ ಅರೆಬಿಕ್ ಕಾಲೇಜಿನ ಪ್ರಿನ್ಸಿಪಾಲ್ ತಾಯಕೋಡ್ ಅಬ್ದುಲ್ಲ ಮುಸ್ಲಿಯಾರ್, ಇಬ್ರಾಹಿಂ ಬಾವಾ ಹಾಜಿ ಅವರಿಗೆ ಎಪಿ ಅಬೂಬಕರ್ ಮುಸ್ಲಿಯಾರ್ ಅವರು ತಾಜುಲ್ ಉಲಮಾ ಪ್ರಶಸ್ತಿ ನೀಡಿ ಸನ್ಮಾನಿಸಿದರು.

Ulla_urus_ends_2 Ulla_urus_ends_3 Ulla_urus_ends_4 Ulla_urus_ends_5 Ulla_urus_ends_6 Ulla_urus_ends_7 Ulla_urus_ends_8 Ulla_urus_ends_9

ಉಳ್ಳಾಲ ದರ್ಗಾ ಅಧ್ಯಕ್ಷ ಅತಿಥಿಗಳನ್ನು ಸ್ವಾಗತಿಸಿದರು. ಉಳ್ಳಾಲ ಖಾಝಿ ಫಝಲ್ ಕೋಯಮ್ಮ ತಂಙಳ್ ಅಲ್ ಮದನಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಅಸ್ಸಯ್ಯದ್ ಹಾಮಿದ್ ಇಂಬಿಚ್ಚಿಕೋಯ ತಂಙಳ್ ದುವಾ ನೆರವೇರಿಸಿದರು. ಡಾ, ಮುಹಮ್ಮದ್ ಫಾಝಲ್ ರಝ್ವಿ ಕಾವಳಕಟ್ಟೆ ಹಝ್ರತ್, ಚೆರುಕುಂಞಿ ತಂಙಳ್, ಅಲಿ ಬಾಫಕಿ ತಂಙಳ್, ಶಾಫಿ ಸ‌ಅದಿ, ಅಬ್ದುಲ್ ರಶೀದ್ ಝೈನಿ, ಅಹ್ಮದ್ ಬಾವ ಮುಸ್ಲಿಯಾರ್, ತಾಯಕೋಡ್ ಉಸ್ತಾದ್, ಕೇಂದ್ರ ಜುಮಾ ಮಸೀದಿಯ ಖತೀಬ್ ರವೂಫ್ ಮುಸ್ಲಿಯಾರ್, ತೋಕೆ ಮೊಹಿಯುದ್ದೀನ್ ಕಾಮಿಲ್ ಸಖಾಫಿ ದರ್ಗಾ ಕಾರ್ಯದರ್ಶಿ ಯು.ಟಿ. ಇಲ್ಯಾಸ್, ಉಪಾಧ್ಯಕ್ಷ ಅಶ್ರಫ್ ರೈಟ್‌ವೇ, ದರ್ಗಾ ಚಾರಿಟೇಬಲ್ ಟ್ರಸ್ಟ್ ಉಪಾಧ್ಯಕ್ಷ ಹನೀಫ್ ಹಾಜಿ, ನಾಝಿಂ, ತಂಝೀಲ್, ಝಿಯಾದ್ ತಂಙಳ್, ಹಮೀದ್ ಕಲ್ಲಾಪು, ಫಾರೂಕ್ ಮಾರ್ಗತಲೆ, ಅಶ್ರಫ್, ಯು.ಎ. ಇಸ್ಮಾಯಿಲ್, ಸಲೀಂ ಫಾಷಾ, ಇಬ್ರಾಹಿಂ ಬಾವ ಹಾಜಿ, ಎಚ್.ಎಚ್. ಕಂಪೆನಿಯ ಕುಂಞ ಹಾಜಿ, ಶಫೀಕ್ ಎಚ್.ಎಚ್, ಮಜೀದ್ ಹಾಜಿ ಉಚ್ಚಿಲ, ಎಸಿ‌ಎಂ ಕಾಂತಪುರಂ, ಪಲ್ಲಂಗೋಡ್ ಮದನಿ ಮೊದಲಾದವರು ಉಪಸ್ಥಿತರಿದ್ದರು.

Write A Comment