ಪ್ರಮುಖ ವರದಿಗಳು

ಮೊದಲಿಗೆ ಟೈ ಆಗಿದ್ದ ಪಂದ್ಯ:‘ಸೂಪರ್‌ ಓವರ್‌’ನಲ್ಲಿ ಗೆದ್ದ ಕಿಂಗ್ಸ್ ಇಲೆವೆನ್

Pinterest LinkedIn Tumblr

pvec22xrahane

ಅಹಮದಾಬಾದ್: ಯಾವ ತಂಡ ಗೆಲ್ಲಲಿದೆ ಎನ್ನುವ ಅಭಿಮಾನಿಗಳ ಕುತೂಹಲವೆಲ್ಲಾ ತಣಿದು ಹೋದ ಕ್ಷಣವದು. ಕಿಂಗ್ಸ್ ಇಲೆವೆನ್ ಪಂಜಾಬ್‌ ಗೆಲುವು ಪಡೆಯಬೇಕಾದರೆ ಕೊನೆಯ ಎಸೆತದಲ್ಲಿ ಐದು ರನ್‌ ಗಳಿಸಬೇಕಿತ್ತು. ಆದರೆ, ನಾಲ್ಕು ರನ್‌ಗಳನ್ನಷ್ಟೇ ಗಳಿಸಿದ್ದರಿಂದ ಪಂದ್ಯ ‘ಸೂಪರ್‌ ಓವರ್‌’ ಘಟ್ಟ ತಲುಪಿತು.

ಈ ಹಂತದಲ್ಲಿ ಅಪೂರ್ವ ಆಟವಾಡಿದ ಪಂಜಾಬ್‌ ತಂಡ ಗೆಲುವು ಪಡೆಯಿತು. ಜೊತೆಗೆ ಸತತ ಐದು ಪಂದ್ಯಗಳಲ್ಲಿ ಜಯ ಪಡೆದಿದ್ದ ರಾಜಸ್ತಾನ ರಾಯಲ್ಸ್‌  ಓಟಕ್ಕೂ ಲಗಾಮು ಹಾಕಿತು.

ಮೋಟೆರಾದ ಸರ್ದಾರ್‌ ಪಟೇಲ್‌ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಟಾಸ್‌ ಗೆದ್ದ ಪಂಜಾಬ್‌ ತಂಡ ಮೊದಲು ಫೀಲ್ಡಿಂಗ್‌ ಮಾಡಿತು. ರಾಯಲ್ಸ್ ನಿಗದಿತ ಓವರ್‌ಗಳಲ್ಲಿ ಆರು ವಿಕೆಟ್‌ ಕಳೆದುಕೊಂಡು 191 ರನ್‌ ಗಳಿಸಿತು. ಆರಂಭಿಕ ಬ್ಯಾಟ್ಸ್‌ಮನ್‌ ಅಜಿಂಕ್ಯ ರಹಾನೆ ಅಬ್ಬರ ಇದಕ್ಕೆ ಕಾರಣವಾಯಿತು.

ಸವಾಲಿನ ಗುರಿ ಬೆನ್ನು ಹತ್ತಿದ ಪಂಜಾಬ್‌ ಕೂಡಾ ಇಷ್ಟೇ ರನ್ ಗಳಿಸಿತು. ಆದ್ದರಿಂದ ಫಲಿತಾಂಶ ನಿರ್ಧರಿಸಲು ‘ಸೂಪರ್‌ ಓವರ್‌’ ಮೊರೆ ಹೋಗಲಾಯಿತು. ಈ ಪಂದ್ಯದಲ್ಲಿ ಪಂಜಾಬ್‌ ತಂಡವನ್ನು ವೀರೇಂದ್ರ ಸೆಹ್ವಾಗ್‌ ತಂಡವನ್ನು ಮುನ್ನಡೆಸಿದ್ದರು.

ಮಾರ್ಷ್‌–ಮಿಲ್ಲರ್‌ ಅಬ್ಬರ: ಪಂಜಾಬ್‌ ತಂಡಕ್ಕೆ ಉತ್ತಮ ಆರಂಭ ಲಭಿಸಲಿಲ್ಲ. ಆದರೆ, ಶಾನ್‌ ಮಾರ್ಷ್‌ (65, 40 ಎಸೆತ, 5  ಬೌಂಡರಿ, 3 ಸಿಕ್ಸರ್) ಮತ್ತು ಡೇವಿಡ್‌ ಮಿಲ್ಲರ್‌ (54, 30ಎಸೆತ, 1  ಬೌಂಡರಿ, 5 ಸಿಕ್ಸರ್‌) ಅಬ್ಬರಿಸಿದರು. ಇವರಿಬ್ಬರು ನಾಲ್ಕನೇ ವಿಕೆಟ್‌ಗೆ 58 ರನ್‌ ಕಲೆ ಹಾಕಿ ತಂಡ ಗೆಲುವಿನ ಸನಿಹ ಬರಲು ಕಾರಣರಾದರು.

ರಹಾನೆ ಅಬ್ಬರ: ಆರಂಭಿಕ ಬ್ಯಾಟ್ಸ್‌ಮನ್‌ ಅಜಿಂಕ್ಯ ರಹಾನೆ ಅಬ್ಬರಿಸಿದ್ದರಿಂದ ರಾಯಲ್ಸ್‌ ತಂಡಕ್ಕೆ ಸವಾಲಿನ ಮೊತ್ತ ಕಲೆ ಹಾಕಲು ಸಾಧ್ಯವಾಯಿತು.

ಆರಂಭಿಕ ಜೋಡಿ ರಹಾನೆ (74; 54ಎ, 6ಬೌಂ, 2ಸಿ) ಮತ್ತು ಶೇನ್ ವಾಟ್ಸನ್ (45; 35ಎ, 5ಬೌಂ, 2ಸಿ) ಪಂಜಾಬ್‌ ಬೌಲರ್‌ಗಳ ಚಳಿ ಬಿಡಿಸಿದರು. ಇಬ್ಬರೂ ಮೊದಲ ವಿಕೆಟ್‌ ಜೊತೆಯಾಟದಲ್ಲಿ ಸೇರಿಸಿದ  95 ರನ್ನುಗಳ ಕಲೆ ಹಾಕಿದರು.

ದೀಪಕ್ ಹೂಡಾ 9 ಎಸೆತಗಳಲ್ಲಿ 19 ರನ್ನು ಗಳಿಸಿ, ಅಲ್ಪ ಕಾಣಿಕೆ ನೀಡಿದರು.  ಕರುಣ್ ನಾಯರ್ ಜೊತೆಗೆ ರಹಾನೆ ತಂಡದ ಮೊತ್ತವನ್ನು ಏರಿಸಿದರು. ಮಿಷೆಲ್ ಜಾನ್ಸನ್ ಎಸೆತವನ್ನು ಕಟ್ ಮಾಡುವ ಯತ್ನದಲ್ಲಿ ವಿಕೆಟ್‌ಕೀಪರ್ ವೃದ್ಧಿಮಾನ್ ಸಹಾ ಅವರು ಪಡೆದ ಆಕರ್ಷಕ ಕ್ಯಾಚಿಗೆ ಶರಣಾದರು. ಟೂರ್ನಿಯಲ್ಲಿ ರಹಾನೆ ಆರು ಪಂದ್ಯಗಳಿಂದ 305 ರನ್ನುಗಳನ್ನು ಗಳಿಸುವ ಮೂಲಕ ಅತಿ ಹೆಚ್ಚು ರನ್ ಗಳಿಸಿರುವ ಆಟಗಾರನಾಗಿದ್ದಾರೆ. ಕರ್ನಾಟಕದ ಆಟಗಾರರಾದ ಕರುಣ್ ನಾಯರ್ (25) ಮತ್ತು ಸ್ಟುವರ್ಟ್ ಬಿನ್ನಿ (ಔಟಾಗದೆ 12) ತಮ್ಮ ಕಾಣಿಕೆಯನ್ನು ನೀಡಿದರು.

ಹೀಗಿತ್ತು ಸೂಪರ್ ಓವರ್‌
ಸೂಪರ್‌ ಓವರ್‌ನಲ್ಲಿ ಮೊದಲು ಬ್ಯಾಟ್‌ ಮಾಡಿದ ಪಂಜಾಬ್‌ ತಂಡ 15 ರನ್‌ ಗಳಿಸಿತು. ಕ್ರಿಸ್‌ ಮಾರಿಸ್ ಬೌಲಿಂಗ್‌ನ ಮೊದಲ ಎಸೆತದಲ್ಲಿ ಮಿಲ್ಲರ್‌ ಔಟಾದರು. ಆದರೆ, ಶಾನ್‌ ಮಾರ್ಷ್‌ ಮೂರು ಬೌಂಡರಿ ಸಿಡಿಸಿದರು.

16 ರನ್‌ಗಳ ಗುರಿ ಬೆನ್ನು ಹತ್ತಿದ ರಾಯಲ್ಸ್‌ ತಂಡವೂ ಮೊದಲ ಎಸೆತದಲ್ಲಿ ವಿಕೆಟ್‌ ಕಳೆದುಕೊಂಡಿತು. ಮಿಷೆಲ್‌ ಜಾನ್ಸನ್‌ ಎಸೆತದಲ್ಲಿ ಶೇನ್‌ ವಾಟ್ಸನ್‌ ಔಟಾದರು. ಎರಡನೇ ಎಸೆತದಲ್ಲಿ ಸ್ಮಿತ್‌ ಬೌಂಡರಿ ಬಾರಿಸಿದ್ದರಿಂದ ರಾಯಲ್ಸ್‌ ತಂಡದಲ್ಲಿ ಜಯದ ಆಸೆ ಮೂಡಿಸಿತ್ತು. ಮೂರನೇ ಎಸೆತದಲ್ಲಿ ಫಾಕ್ನರ್‌ ರನ್‌ ಔಟ್‌ ಆದ ಕಾರಣ ಸೋಲು ಅನುಭವಿಸಬೇಕಾಯಿತು.

ಯಾಕಾಗಿ ಸೂಪರ್ ಓವರ್?
ಎರಡೂ ತಂಡಗಳು ಸಮ ಸ್ಕೋರ್‌ ಗಳಿಸಿದಾಗ ಫಲಿತಾಂಶ ನಿರ್ಧರಿಸಲು ಐಪಿಎಲ್‌ನಲ್ಲಿ ‘ಸೂಪರ್‌ ಓವರ್‌’ ಮೊರೆ ಹೋಗಲಾಗುತ್ತದೆ. ಉಭಯ ತಂಡಗಳು ತಲಾ ಒಂದು ಓವರ್‌ ಆಡುತ್ತವೆ. ಎರಡಕ್ಕಿಂತಲೂ ಹೆಚ್ಚು ವಿಕೆಟ್‌ ಕಳೆದುಕೊಂಡರೆ ಆ ತಂಡ ಆಲೌಟ್‌ ಆದಂತೆ. ರಾಯಲ್ಸ್‌ ಎರಡು ವಿಕೆಟ್‌ ಕಳೆದುಕೊಂಡ ಕಾರಣ ಪಂಜಾಬ್‌ ತಂಡಕ್ಕೆ ಗೆಲುವು ಒಲಿಯಿತು. ಇದು ಎಂಟನೇ ಆವೃತ್ತಿಯ ಮೊದಲ ಸೂಪರ್‌ ಓವರ್‌ ಆಗಿತ್ತು.

ಸ್ಕೋರ್ ಕಾರ್ಡ್

ರಾಜಸ್ತಾನ ರಾಯಲ್ಸ್‌ 6ಕ್ಕೆ 191 (20 ಓವರ್‌)
ಅಜಿಂಕ್ಯ ರಹಾನೆ ಸಿ ಸಹಾ ಬಿ ಮಿಷೆಲ್ ಜಾನ್ಸನ್  74
ಶೇನ್ ವಾಟ್ಸನ್ ಸ್ಟಂಪ್ಡ್ ಸಹಾ ಬಿ ಅಕ್ಷರ್ ಪಟೇಲ್  45
ದೀಪಕ್ ಹೂಡಾ ಬಿ ಶಿವಂ ಶರ್ಮಾ  19
ಸ್ಟೀವನ್ ಸ್ಮಿತ್ ಸಿ ಮ್ಯಾಕ್ಸ್‌ವೆಲ್ ಬಿ ಅಕ್ಷರ್ ಪಟೇಲ್  00
ಕರುಣ್ ನಾಯರ್ ಸಿ ಪಟೇಲ್ ಬಿ ಅನುರ್ಜಿತ್ ಸಿಂಗ್  25
ಜೇಮ್ಸ್ ಫಾಕ್ನರ್ ಸಿ ಮ್ಯಾಕ್ಸ್‌ವೆಲ್ ಬಿ ಸಂದೀಪ್ ಶರ್ಮಾ  01
ಸ್ಟುವರ್ಟ್ ಬಿನ್ನಿ ಔಟಾಗದೆ  12
ಸಂಜು ಸ್ಯಾಮ್ಸನ್ ಔಟಾಗದೆ  05
ಇತರೆ: (ಲೆಗ್‌ಬೈ–3, ವೈಡ್ –6, ನೋಬಾಲ್ –1)   10

ವಿಕೆಟ್‌ ಪತನ:  1–95 (ವಾಟ್ಸನ್ ; 11.3), 2–136 (ಹೂಡಾ; 14.6), 3–137 (ಸ್ಮಿತ್; 15.3), 4–162 (ರಹಾನೆ ; 17.4), 5–166 (ಫಾಕ್ನರ್; 18.1), 6–175 (ನಾಯರ್ 19.1)
ಬೌಲಿಂಗ್‌:  ಸಂದೀಪ್ ಶರ್ಮಾ 4–0–25–1 (ವೈಡ್ 2), ಅನುರ್ಜಿತ್ ಸಿಂಗ್ 3–0–41–1, ಮಿಷೆಲ್ ಜಾನ್ಸನ್ 4–0–33–1 (ನೋಬಾಲ್ 1, ವೈಡ್ 1), ಅಕ್ಷರ್ ಪಟೇಲ್ 4–0–30–2 (ವೈಡ್ 1), ಶಿವಂ ಶರ್ಮಾ 3–0–44–1, ಗ್ಲೆನ್ ಮ್ಯಾಕ್ಸ್‌ವೆಲ್ 1–0–15–0

ಕಿಂಗ್ಸ್‌ ಇಲೆವೆನ್‌ ಪಂಜಾಬ್‌ 6ಕ್ಕೆ 191 (20 ಓವರ್‌)

ಮುರಳಿ ವಿಜಯ್‌ ರನ್‌ಔಟ್‌ (ತೆವಾಟಿಯಾ)  21
ವೀರೇಂದ್ರ ಸೆಹ್ವಾಗ್‌ ರನ್‌ಔಟ್‌ (ಸ್ಟೀವ್‌ ಸ್ಮಿತ್‌)  01
ಶಾನ್‌ ಮಾರ್ಷ್‌ ಸಿ ಅಜಿಂಕ್ಯ ರಹಾನೆ ಬಿ ಪ್ರವೀಣ್‌ ತಾಂಬೆ  65
ಗ್ಲೆನ್‌್ ಮ್ಯಾಕ್ಸ್‌ವೆಲ್‌ ಸಿ ಸ್ಮಿತ್‌ ಬಿ ರಾಹುಲ್‌ ತೆವಾಟಿಯಾ  01
ಡೇವಿಡ್‌ ಮಿಲ್ಲರ್‌ ಸಿ ಸ್ಟುವರ್ಟ್‌ ಬಿನ್ನಿ ಬಿ ದೀಪಕ್‌ ಹೂಡಾ  54
ವೃದ್ಧಿಮಾನ್‌ ಸಹಾ ಬಿ ಕ್ರಿಸ್‌ ಮೊರಿಸ್‌  19
ಅಕ್ಷರ್‌ ಪಟೇಲ್‌ ಔಟಾಗದೆ  12
ಮಿಷೆಲ್‌ ಜಾನ್ಸನ್‌ ಔಟಾಗದೆ  13
ಇತರೆ: (ಲೆಗ್‌ ಬೈ–4, ವೈಡ್‌–1)  05

ವಿಕೆಟ್ ಪತನ: 1–3 (ಸೆಹ್ವಾಗ್‌; 1.6), 2–42 (ವಿಜಯ್‌; 6.2), 3–59 (ಮ್ಯಾಕ್ಸ್‌ವೆಲ್‌; 8.4), 4–117 (ಮಾರ್ಷ್‌; 14.3), 5–152 (ಸಹಾ; 16.6), 6–166 (ಮಿಲ್ಲರ್‌; 17.5).
ಬೌಲಿಂಗ್‌: ಕ್ರಿಸ್‌ ಮೊರಿಸ್‌ 4–0–34–1, ಸ್ಟುವರ್ಟ್‌ ಬಿನ್ನಿ  2–0–13–0, ಜೇಮ್ಸ್‌ ಫಾಕ್ನರ್‌ 4–0–41–0, ಪ್ರವೀಣ್‌ ತಾಂಬೆ  3–0–20–1, ರಾಹುಲ್‌ ತೆವಾಟಿಯಾ 3–0–31–1, ದೀಪಕ್‌ ಹೂಡಾ 3–0–35–1, ಶೇನ್‌ ವಾಟ್ಸನ್‌ 1–0–13–0.

ಫಲಿತಾಂಶ: ಪಂದ್ಯ ‘ಟೈ’. ಸೂಪರ್‌ ಓವರ್‌ನಲ್ಲಿ ಕಿಂಗ್ಸ್‌ ಇಲೆವೆನ್‌ ಪಂಜಾಬ್‌ಗೆ  ಗೆಲುವು.

ಪಂದ್ಯಶ್ರೇಷ್ಠ: ಶಾನ್‌ ಮಾರ್ಷ್‌

Write A Comment