ಕರ್ನಾಟಕ

‘ಬೆಂಗಳೂರು ಇಂಡಿಯಾ ಬಯೋ–2015’ ಕಾರ್ಯಕ್ರಮ: ಆವಿಷ್ಕಾರದ ಕೊರತೆ: ಪ್ರಕಾಶ್ ಜಾವಡೇಕರ್‌ ಕಳವಳ

Pinterest LinkedIn Tumblr

ja

ಬೆಂಗಳೂರು: ‘ದೇಶ ಆರ್ಥಿಕವಾಗಿ ಸದೃ­ಢ­­ವಾ­ಗಲು ಇನ್ನೂ ಹೆಚ್ಚಿನ ಪ್ರಮಾ­ಣದಲ್ಲಿ ಆವಿಷ್ಕಾರಗಳು ನಡೆಯಬೇಕು’ ಎಂದು ಕೇಂದ್ರ ಪರಿಸರ, ಅರಣ್ಯ ಸಚಿವ ಪ್ರಕಾಶ್ ಜಾವಡೇಕರ್‌ ಹೇಳಿದರು.

ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕರ್ನಾಟಕ ಜೈವಿಕ ತಂತ್ರಜ್ಞಾನ ದಾರ್ಶನಿಕ ಸಮೂಹದ ಆಶ್ರಯದಲ್ಲಿ ನಗರದಲ್ಲಿ ಸೋಮವಾರ ಆಯೋಜಿಸಿದ್ದ ‘ಬೆಂಗಳೂರು ಇಂಡಿಯಾ ಬಯೋ–2015’ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕೇಂದ್ರ ಇಂಧನ ಸಚಿವ ಪಿಯುಷ್‌ ಗೋಯಲ್‌ ಮಾತನಾಡಿ, ‘ಬೀದಿ­ದೀಪಗಳಿಗೆ ಎಲ್‌ಇಡಿ ಬಲ್ಬ್‌ಗಳನ್ನು ಅಳವಡಿಸುವ ಯೋಜನೆ ಆರಂಭವಾಗಿದೆ. ಇದರಿಂದ 10 ಸಾವಿರ ಮೆಗಾವಾಟ್‌ ವಿದ್ಯುತ್‌ ಉಳಿತಾಯ ಆಗಲಿದೆ. ನವದೆಹಲಿಯಲ್ಲಿ ಈ ಯೋಜನೆ ಈಗಾಗಲೇ ಕಾರ್ಯರೂಪಕ್ಕೆ ಬಂದಿದೆ. ಹಂತ ಹಂತವಾಗಿ ಉಳಿದ ರಾಜ್ಯಗಳಲ್ಲೂ ಈ ಯೋಜನೆ ಜಾರಿಗೆ ಬರಲಿದೆ’ ಎಂದರು.

ರಾಜ್ಯ ಸರ್ಕಾರ ಸಹ ಈ ಯೋಜನೆಗೆ ಸಹಕಾರ ನೀಡಬೇಕು. ಇದಕ್ಕೆ ರಾಜ್ಯ ಸರ್ಕಾರ ಬಂಡವಾಳ ಹೂಡಿಕೆ ಮಾಡುವ ಅಗತ್ಯ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ದೇಶದಲ್ಲಿನ ಅಗ್ರ 10 ಜೈವಿಕ ತಂತ್ರಜ್ಞಾನ ಕಂಪೆನಿಗಳಲ್ಲಿ ಐದು ಕಂಪೆನಿಗಳು ಕರ್ನಾಟಕದಲ್ಲಿವೆ. ದೇಶದ ಶೇ 26 ರಫ್ತು ವರಮಾನ ರಾಜ್ಯದಿಂದಲೇ ಬರುತ್ತಿದೆ.

ಬೆಂಗಳೂರು ಜೈವಿಕ ತಂತ್ರಜ್ಞಾನದ ರಾಜಧಾನಿ ಆಗಿದೆ. ಈ ಕ್ಷೇತ್ರಕ್ಕೆ ಇನ್ನಷ್ಟು ಉತ್ತೇಜನ ನೀಡಲಾಗುವುದು ಎಂದು ಭರವಸೆ ನೀಡಿದರು. ಮಾಹಿತಿ ತಂತ್ರಜ್ಞಾನ ಸಚಿವ ಎಸ್‌.ಆರ್‌.ಪಾಟೀಲ್ ಮಾತನಾಡಿ, ‘ಕೃಷಿ ಕುರಿತು ರೈತರಿಗೆ ಸಮಗ್ರ ಮಾಹಿತಿ ಒದಗಿಸಲು ಬಾಗಲಕೋಟೆ ಹಾಗೂ ವಿಜಯಪುರ ಜಿಲ್ಲೆಗಳ ಜಿಲ್ಲೆಗಳ ರೈತರಿಗೆ ಟ್ಯಾಬ್ಲೆಟ್‌ ನೀಡಲಾಗಿದೆ ಎಂದರು.

ಮೂಲಸೌಕರ್ಯ ಅಭಿವೃದ್ಧಿ ಸಚಿವ ರೋಷನ್‌ ಬೇಗ್‌, ಸಂಸದ ಪಿ.ಸಿ.ಮೋಹನ್‌, ವಿಧಾನ ಪರಿಷತ್‌ ಸದಸ್ಯ ಕೆ.ಗೋವಿಂದರಾಜ್‌, ಬಯೋಕಾನ್‌ ಮುಖ್ಯಸ್ಥೆ ಕಿರಣ್‌ ಮಜುಂದಾರ್ ಷಾ, ಕೇಂದ್ರ ಜೈವಿಕ ತಂತ್ರಜ್ಞಾನ ಇಲಾಖೆಯ ಪ್ರೊ.ಕೆ.ವಿಜಯ್‌ರಾಘವನ್‌, ಮಾಹಿತಿ ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿ ಶ್ರೀವತ್ಸ ಕೃಷ್ಣ ಇದ್ದರು.

Write A Comment