ಪ್ರಮುಖ ವರದಿಗಳು

ಏಕದಿನ ಶೈಲಿಯಲ್ಲಿ ಆಡಿದ ಆಸ್ಟ್ರೇಲಿಯ: ಸೋಲು ತಪ್ಪಿಸಲು ಭಾರತಕ್ಕೆ ಕಠಿಣ ಸವಾಲು

Pinterest LinkedIn Tumblr

raina-rogers

ಸಿಡ್ನಿ, ಜ.9: ಇಲ್ಲಿ ನಡೆಯುತ್ತಿರುವ ನಾಲ್ಕನೆ ಹಾಗೂ ಅಂತಿಮ ಟೆಸ್ಟ್‌ನಲ್ಲಿ ಆಸ್ಟ್ರೇಲಿಯ 348 ರನ್‌ಗಳ ಮುನ್ನಡೆ ಸಾಧಿಸಿದ್ದು,ಸೋಲು ತಪ್ಪಿಸಲು ಭಾರತಕ್ಕೆ ಕಠಿಣ ಸವಾಲು ಎದುರಾಗಿದೆ.

ಟೆಸ್ಟ್‌ನ ನಾಲ್ಕನೆ ದಿನವಾಗಿರುವ ಶುಕ್ರವಾರ ಆಟ ನಿಂತಾಗ ಆಸ್ಟ್ರೇಲಿಯ ಎರಡನೆ ಇನಿಂಗ್ಸ್‌ನಲ್ಲಿ 40 ಓವರ್‌ಗಳಲ್ಲಿ 6 ವಿಕೆಟ್ ನಷ್ಟದಲ್ಲಿ 251 ರನ್ ಗಳಿಸಿದ್ದು, ಭಾರತವನ್ನು ಒತ್ತಡಕ್ಕೆ ಸಿಲುಕಿಸಿದೆ. ಈಗಾಗಲೇ ನಾಲ್ಕು ಟೆಸ್ಟ್‌ಗಳಲ್ಲಿ ಸತತ ಎರಡು ಟೆಸ್ಟ್‌ಗಳಲ್ಲಿ ಸೋತು ಸರಣಿ ಕಳೆದುಕೊಂಡಿರುವ ಭಾರತ ಮೂರನೆ ಟೆಸ್ಟ್‌ನಲ್ಲಿ ಡ್ರಾ ಮಾಡಿಕೊಂಡಿತ್ತು. ಅಂತಿಮ ಟೆಸ್ಟ್‌ನಲ್ಲಿ ಗೆಲ್ಲುವ ಸಂಕಲ್ಪ ಮಾಡಿರುವ ಭಾರತಕ್ಕೆ ಬೆಟ್ಟದಂತಹ ಸವಾಲು ಎದುರಾಗಿದೆ.

ಆಟ ನಿಂತಾಗ ವಿಕೆಟ್ ಕೀಪರ್ ಬ್ರಾಡ್ ಹಡಿನ್ ಔಟಾಗದೆ 31 ರನ್ ಮತ್ತು ಖಾತೆ ತೆರೆಯದ ಆರ್.ಹ್ಯಾರಿಸ್ ಕ್ರೀಸ್‌ನಲ್ಲಿದ್ದರು.

ಮೊದಲ ಇನಿಂಗ್ಸ್‌ನಲ್ಲಿ ಭಾರತದ ವಿರುದ್ಧ 97 ರನ್‌ಗಳ ಮುನ್ನಡೆ ಪಡೆದಿದ್ದ ಆಸ್ಟ್ರೇಲಿಯ ತಂಡ ಎರಡನೆ ಇನಿಂಗ್ಸ್‌ನಲ್ಲಿ 251 ರನ್ ಸಂಪಾದಿಸಿ, 348 ರನ್‌ಗಳ ಮೇಲುಗೈ ಸಾಧಿಸಿದ್ದು, ಅಂತಿಮ ದಿನ ಆಸ್ಟ್ರೇಲಿಯ ಇನಿಂಗ್ಸ್ ಡಿಕ್ಲೇರ್ ಮಾಡುವ ಸಾಧ್ಯತೆ ಇದೆ. ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ 19 ಓವರ್‌ಗಳಲ್ಲಿ 105 ರನ್‌ಗಳಿಗೆ 4 ವಿಕೆಟ್ ಉಡಾಯಿಸಿದರು. ಇದು ವಿದೇಶದಲ್ಲಿ ಅವರ ಅತ್ಯುತ್ತಮ ಪ್ರದರ್ಶನವಾಗಿದೆ. ಆದರೆ ವೇಗಿ ಉಮೇಶ್ ಯಾದವ್ ಮೂರು ಓವರ್‌ಗಳಲ್ಲಿ 45 ರನ್‌ಗಳನ್ನು ಬಿಟ್ಟುಕೊಟ್ಟರೂ ವಿಕೆಟ್ ಪಡೆಯುವಲ್ಲಿ ವಿಫಲರಾದರು. ಭಾರತ 475ಕ್ಕೆ ಆಲೌಟ್: ಮೂರನೆ ದಿನದಾಟದಂತ್ಯಕ್ಕೆ ಮೊದಲ ಇನಿಂಗ್ಸ್‌ನಲ್ಲಿ 5 ವಿಕೆಟ್ ನಷ್ಟದಲ್ಲಿ 342 ರನ್ ಮಾಡಿದ್ದ ಭಾರತ ಶುಕ್ರವಾರ ಈ ಮೊತ್ತಕ್ಕೆ 130 ರನ್ ಸೇರಿಸುವಷ್ಟರಲ್ಲಿ ಸರ್ವಪತನ ಕಂಡಿತು. ವಿಕೆಟ್ ಕೀಪರ್ ವೃದ್ಧಿಮಾನ್ ಸಹಾ ಜೊತೆ ನಾಲ್ಕನೆ ದಿನದ ಆಟ ಮುಂದುವರಿಸಿದ ನಾಯಕ ವಿರಾಟ್ ಕೊಹ್ಲಿ ತನ್ನ ವೈಯಕ್ತಿಕ ಮೊತ್ತಕ್ಕೆ 7 ರನ್ ಸೇರಿಸಿ ಹ್ಯಾರಿಸ್‌ಗೆ ವಿಕೆಟ್ ಒಪ್ಪಿಸಿದರು. ಕೊಹ್ಲಿ 147 ರನ್(315ನಿ, 230ಎ, 20ಬೌ) ಗಳಿಸಿ ಪೆವಿಲಿಯನ್ ಸೇರಿದ ಬಳಿಕ ಭಾರತ ಫಾಲೋ ಆನ್ ಭೀತಿಗೆ ಸಿಲುಕಿತ್ತು. ಆದರೆ ಆರ್.ಅಶ್ವಿನ್(50),ವೃದ್ಧಿಮಾನ್ ಸಹಾ (35) ಮತ್ತು ಕಳೆದ ಮೂರು ಟೆಸ್ಟ್‌ಗಳನ್ನು ಗಾಯದಿಂದಾಗಿ ಆಡುವ ಅವಕಾಶ ಕಳೆದುಕೊಂಡಿದ್ದ ಭುವನೇಶ್ವರ ಕುಮಾರ್(30) ಹೋರಾಟದ ಮೂಲಕ ತಂಡವನ್ನು ಫಾಲೋ-ಆನ್‌ನಿಂದ ಪಾರು ಮಾಡಿದರು. ಕೊಹ್ಲಿ ಮತ್ತು ಸಹಾ 6ನೆ ವಿಕೆಟ್‌ಗೆ 60 ರನ್‌ಗಳ ಜೊತೆಯಾಟ ನೀಡಿದ್ದರು. ಕೊಹ್ಲಿ ನಿರ್ಗಮನದ ಬಳಿಕ ಆರ್.ಅಶ್ವಿನ್ ಕ್ರೀಸ್‌ಗೆ ಆಗಮಿಸಿ ಸಹಾಗೆ ಸಾಥ್ ನೀಡಿದರು. ಇವರ ಜೊತೆಯಾಟದಲ್ಲಿ ತಂಡದ ಖಾತೆಗೆ 31 ರನ್ ಸೇರ್ಪಡೆಗೊಂಡಿತು.ಸಹಾ ಅವರು ಹೇಝ್ಲಿವುಡ್‌ಗೆ ವಿಕೆಟ್ ಒಪ್ಪಿಸಿದರು. ಆಗ ತಂಡದ ಸ್ಕೋರ್ 130.2 ಓವರ್‌ಗಳಲ್ಲಿ 7 ವಿಕೆಟ್ ನಷ್ಟದಲ್ಲಿ 383 ಆಗಿತ್ತು.

ಅಶ್ವಿನ್ ಮತ್ತು ಭುವನೇಶ್ವರ ಕುಮಾರ್ ಎಚ್ಚರಿಕೆಯಿಂದ ಆಡಿದರು. 8ನೆ ವಿಕೆಟ್‌ಗೆ 65 ರನ್‌ಗಳ ಕೊಡುಗೆ ನೀಡಿದರು. ಇದರಿಂದಾಗಿ ಭಾರತ 153 ಓವರ್‌ಗಳಲ್ಲಿ 448ಕ್ಕೆ ತಲುಪಿತು. 154ನೆ ಓವರ್‌ನ ಮೊದಲ ಎಸೆತದಲ್ಲಿ ಭುವನೇಶ್ವರ ಕುಮಾರ್(30) ಅವರು ಲಿನ್ ಎಸೆತದಲ್ಲಿ ವ್ಯಾಟ್ಸನ್‌ಗೆ ಕ್ಯಾಚ್ ನೀಡಿದರು. ಮುಹಮ್ಮದ್ ಶಮಿ (ಔಟಾಗದೆ 16) ಮತ್ತು ಉಮೇಶ್ ಯಾದವ್(4) ತಂಡದ ಸ್ಕೋರನ್ನು 475ಕ್ಕೆ ತಲುಪಿಸಿದರು.

251/6: ಭಾರತವನ್ನು ಫಾಲೋ-ಆನ್‌ಗೆ ಸಿಲುಕಿಸುವಲ್ಲಿ ಎಡವಿದ ಆಸ್ಟ್ರೇಲಿಯ ಎರಡನೆ ಇನಿಂಗ್ಸ್‌ನಲ್ಲಿ ಕಠಿಣ ಸವಾಲನ್ನು ಸೇರಿಸುವ ಉದ್ದೇಶದಿಂದ ಏಕದಿನ ಶೈಲಿಯಲ್ಲಿ ಬ್ಯಾಟಿಂಗ್ ನಡೆಸಿತು. ಆರಂಭಿಕ ದಾಂಡಿಗ ಡೇವಿಡ್ ವಾರ್ನರ್(4) ಮತ್ತು ಶೇನ್ ವ್ಯಾಟ್ಸನ್(16) ಅವರಿಗೆ ಅಶ್ವಿನ್ ಬೇಗನೆ ಪೆವಿಲಿಯನ್‌ಗೆ ಕಳುಹಿಸಿದರು. ಮೂರನೆ ವಿಕೆಟ್‌ಗೆ ಆರಂಭಿಕ ದಾಂಡಿಗ ರೋಜರ್ಸ್‌ ಮತ್ತು ನಾಯಕ ಸ್ಮಿತ್ ತಂಡವನ್ನು ಆಧರಿಸಿದರು. ಇವರ ಜೊತೆಯಾಟದಲ್ಲಿ 3ನೆ ವಿಕೆಟ್‌ಗೆ 80 ರನ್ ಸೇರ್ಪಡೆಗೊಂಡಿತು. ರೋಜರ್ಸ್‌ 56 ರನ್ ಗಳಿಸಿ ನಿರ್ಗಮಿಸಿದರು. ಶಾನ್ ಮಾರ್ಷ್ 1 ರನ್ ಗಳಿಸಿ ಔಟಾದರು. ಸ್ಮಿತ್ ಮತ್ತೊಮ್ಮೆ ಅರ್ಧಶತಕ ದಾಖಲಿಸಿದರು. ಶತಕ ಗಳಿಸುವ ಯೋಜನೆಯಲ್ಲಿದ್ದ ಸ್ಮಿತ್ 71 ರನ್ ಗಳಿಸಿದ್ದಾಗ ಅವರನ್ನು ಮುಹಮ್ಮದ್ ಶಮಿ ಹೊರಗಟ್ಟಿದರು.

ಜೋ ಬರ್ನ್ಸ್ ಮತ್ತು ಬ್ರಾಡ್ ಹಡಿನ್ 5ನೆ ವಿಕೆಟ್‌ಗೆ 86 ರನ್ ಸೇರಿಸಿದರು. ಬರ್ನ್ಸ್ 56 ನಿಮಿಷಗಳ ಬ್ಯಾಟಿಂಗ್‌ನಲ್ಲಿ 39 ಎಸೆತಗಳನ್ನು ಎದುರಿಸಿ 8 ಬೌಂಡರಿ ಮತ್ತು 3 ಸಿಕ್ಸರ್ ಸಹಾಯದಿಂದ 66 ರನ್ ಗಳಿಸಿ ಆಸ್ಟ್ರೇಲಿಯದ ಮೊತ್ತವನ್ನು ಹೆಚ್ಚಿಸಿದರು. ಯಾದವ್ ಅವರ 13ನೆ ಓವರ್‌ನಲ್ಲಿ ನಾಯಕ ಸ್ಮಿತ್ ಸತತ 4 ಬೌಂಡರಿಗಳನ್ನು ಬಾರಿಸಿದ್ದರು. ಆ ಓವರ್‌ನಲ್ಲಿ 1 ನೋ ಬಾಲ್ ಸೇರಿದಂತೆ 17 ರನ್ ಆಸ್ಟ್ರೇಲಿಯದ ಖಾತೆಗೆ ಸೇರ್ಪಡೆಗೊಂಡಿತ್ತು. ಅಪಾಯಕಾರಿ ಬ್ಯಾಟ್ಸ್‌ಮನ್ ಬರ್ನ್ಸ್ ಮತ್ತು ಹಡಿನ್ ಅವರು ಯಾದವ್ ಎಸೆದ 37ನೆ ಓವರ್‌ನಲ್ಲಿ 2 ಬೌಂಡರಿಗಳನ್ನು ಒಳಗೊಂಡ 10 ರನ್ ಕಬಳಿಸಿದರು. ಯಾದವ್ ಮೂರನೆ ಓವರ್ ಎಸೆಯಲು ಹೋಗಿ ಮತ್ತೊಮ್ಮೆ ಪೆಟ್ಟು ತಿಂದರು.

ಯಾದವ್ ಅವರ 39ನೆ ಓವರ್‌ನ ಮೊದಲ ಎಸೆತದಲ್ಲಿ ಹಡಿನ್ 1 ರನ್ ಗಳಿಸಿ ಬರ್ನ್ಸ್‌ಗೆ ಸೊ್ಫೀೀಟಕ ಬ್ಯಾಟಿಂಗ್ ಪ್ರದರ್ಶಿಸಲು ಅವಕಾಶ ನೀಡಿದರು. ಆ ಓವರ್‌ನಲ್ಲಿ ಉಳಿದ 5 ಎಸೆತಗಳಲ್ಲಿ 17 ರನ್(4 ಬೌಂಡರಿ) ಗಳಿಸಿ ಬನ್‌ರ್ ್ಸ ವೇಗವಾಗಿ ಅರ್ಧಶತಕ ಪೂರ್ಣಗೊಳಿಸಿದರು.

40ನೆ ಓವರ್‌ನಲ್ಲಿ ಅಶ್ವಿನ್ ಎಸೆತದಲ್ಲಿ ಬರ್ನ್ಸ್ ಚೆಂಡನ್ನು ಸಿಕ್ಸರ್‌ಗೆ ಅಟ್ಟಿದರು. 4ನೆ ಎಸೆತದಲ್ಲಿ ಯಾದವ್‌ಗೆ ಕ್ಯಾಚ್ ನೀಡುವುದರೊಂದಿಗೆ ತನ್ನ ಆರ್ಭಟ ನಿಲ್ಲಿಸಿದರು. ಎರಡನೆ ಟೆಸ್ಟ್ ಆಡುತ್ತಿರವ ಬರ್ನ್ಸ್ 33 ಎಸೆತಗಳಲ್ಲಿ 6 ಬೌಂಡರಿ ಮತ್ತು 2 ಸಿಕ್ಸರ್ ಸಹಾಯದಿಂದ ತನ್ನ ಎರಡನೆ ಅರ್ಧಶತಕ ದಾಖಲಿಸಿದರು. ಮೊದಲ ಇನಿಂಗ್ಸ್‌ನಲ್ಲೂ ಬರ್ನ್ಸ್ ಅರ್ಧಶತಕ ಗಳಿಸಿದ್ದರು.

ಸ್ಕೋರ್ ವಿವರ
ಆಸ್ಟ್ರೇಲಿಯ ಪ್ರಥಮ ಇನಿಂಗ್ಸ್: 572/7 ಡಿಕ್ಲೇರ್
ಭಾರತ ಪ್ರಥಮ ಇನಿಂಗ್ಸ್: 162 ಓವರ್‌ಗಳಲ್ಲಿ 475 ರನ್‌ಗೆ ಆಲೌಟ್
ಮುರಳಿ ವಿಜಯ್ ಸಿ ಹಡಿನ್ ಬಿ ಸ್ಟಾರ್ಕ್ 0, ಕೆಎಲ್ ರಾಹುಲ್ ಸಿ ಮತ್ತು ಬಿ ಸ್ಟಾರ್ಕ್ 110, ರೋಹಿತ್ ಶರ್ಮ ಬಿ ಲಿನ್ 53, ವಿರಾಟ್ ಕೊಹ್ಲಿ ಸಿ ರೋಜರ್ಸ್‌ ಬಿ ಹ್ಯಾರಿಸ್ 147, ಅಜಿಂಕ್ಯ ರಹಾನೆ ಎಲ್ಬಿಡಬ್ಲೂ ವ್ಯಾಟ್ಸನ್ 13, ಸುರೇಶ್ ರೈನಾ ಸಿ ಹಡಿನ್ ಬಿ ವ್ಯಾಟ್ಸನ್ 0, ವೃದ್ದಿಮಾನ್ ಸಹಾ ಸಿ ಸ್ಮಿತ್ ಬಿ ಹೇಝ್ಲಿವುಡ್ 35, ಆರ್. ಅಶ್ವಿನ್ ಸಿ ಹಡಿನ್ ಬಿ ಸ್ಟಾರ್ಕ್ 50, ಭುವನೇಶ್ವರ ಕುಮಾರ್ ಸಿ ವ್ಯಾಟ್ಸನ್ ಬಿ ಲಿನ್ 30, ಮುಹಮ್ಮದ್ ಶಮಿ ಅಜೇಯ 16, ಉಮೇಶ್ ಯಾದವ್ ಸಿ ಹಡಿನ್ ಬಿ ಹ್ಯಾರಿಸ್ 4, ಇತರ 17

ವಿಕೆಟ್ ಪತನ: 1-0, 2-97, 3-238, 4-292, 5-292, 6-352, 7-383, 8-448, 9-456, 10-475.
ಬೌಲಿಂಗ್: ಸ್ಟಾರ್ಕ್ 32-7-106-3, ಹ್ಯಾರಿಸ್ 31-7-96-2, ಹೇಝ್ಲಾವುಡ್ 29-8-64-1, ಲಿನ್ 46-11-123-2, ವ್ಯಾಟ್ಸನ್ 20-4-58-2, ಸ್ಮಿತ್ 4-0-17-0.

ಆಸ್ಟ್ರೇಲಿಯ ದ್ವಿತೀಯ ಇನಿಂಗ್ಸ್:40 ಓವರ್‌ಗಳಲ್ಲಿ 251/6
ಕ್ರಿಸ್ ರೋಜರ್ಸ್‌ ಸಿ ರೈನಾ ಬಿ ಕುಮಾರ್ 56, ವಾರ್ನರ್ ಸಿ ವಿಜಯ್ ಬಿ ಅಶ್ವಿನ್ 4, ವ್ಯಾಟ್ಸನ್ ಬಿ ಅಶ್ವಿನ್ 16, ಸ್ಮಿತ್ ಎಲ್‌ಬಿಡಬ್ಲೂ ಮುಹಮ್ಮದ್ ಶಮಿ 71, ಶೇನ್ ಮಾರ್ಷ್ ಸಿ ವಿಜಯ್ ಬಿ ಅಶ್ವಿನ್ 1, ಬರ್ನ್ಸ್ ಸಿ ಯಾದವ್ ಬಿ ಅಶ್ವಿನ್ 66, ಹಡಿನ್ ಅಜೇಯ 31, ಹ್ಯಾರಿಸ್ ಅಜೇಯ 0, ಇತರ 6
ವಿಕೆಟ್ ಪತನ: 1-6, 2-46, 3-126, 4-139, 5-165, 6-251.
ಬೌಲಿಂಗ್: ಭುವನೇಶ್ವರ ಕುಮಾರ್ 8-0-46-1, ಆರ್. ಅಶ್ವಿನ್ 19-2-105-4, ಮುಹಮ್ಮದ್ ಶಮಿ 6-0-33-1, ಉಮೇಶ್ ಯಾದವ್ 3-0-45-0, ಸುರೇಶ್ ರೈನಾ 4-0-18-0.

Write A Comment