ಕರ್ನಾಟಕ

75 ಪೊಲೀಸರಿಗೆ ‘ಸಿ.ಎಂ ಪದಕ’

Pinterest LinkedIn Tumblr

pvec06BRYO CMM.new

ಬೆಂಗಳೂರು: ಶ್ಲಾಘನೀಯ ಸೇವೆ ಸಲ್ಲಿ­ಸಿದ 75  ಪೊಲೀಸರಿಗೆ ಮುಖ್ಯ­ಮಂತ್ರಿ ಸಿದ್ದ­ರಾಮಯ್ಯ ಶುಕ್ರವಾರ ‘ಮುಖ್ಯಮಂತ್ರಿಗಳ ಪದಕ’ ಪ್ರದಾನ ಮಾಡಿದರು.

ನಂತರ ಮಾತನಾಡಿದ ಅವರು, ‘ಪೊಲೀಸ್ ಎಂದರೆ ಸರ್ಕಾರ ಎಂಬ ಭಾವನೆ ಜನರಲ್ಲಿದೆ. ಇಲಾಖೆ­ಯಲ್ಲಿ ಯಾವುದೇ ವೈಫಲ್ಯ ಉಂಟಾ­ದರೂ, ಅದು ಸರ್ಕಾರದ ವೈಫಲ್ಯ­ವಿದ್ದಂತೆ. ಹೀಗಾಗಿ, ಸಿಬ್ಬಂದಿ ಹೆಚ್ಚು ಜವಾ­ಬ್ದಾರಿ­ಯುತ­ವಾಗಿ ಕೆಲಸ ಮಾಡಬೇಕು’ ಎಂದರು.

‘ಪೊಲೀಸರು ಅಪರಾಧ ಕೃತ್ಯಗಳನ್ನು ಪತ್ತೆ ಮಾಡುವುದರ ಜತೆ ಜತೆಗೆ ಕೃತ್ಯ ನಡೆಯದಂತೆ ಮುಂಜಾಗ್ರತಾ ಕ್ರಮ­ಗಳನ್ನೂ ತೆಗೆದುಕೊಳ್ಳಬೇಕು. ತನಿಖೆ ಸಮಯ­ದಲ್ಲೇ ಹೆಚ್ಚು ಶ್ರಮ ವಹಿಸಿ, ಸೂಕ್ತ ಸಾಕ್ಷ್ಯಗಳನ್ನು ಕಲೆ ಹಾಕಬೇಕು. ಆಗ ಮಾತ್ರ ಜನರ ವಿಶ್ವಾಸ ಗಳಿಸಲು ಸಾಧ್ಯವಾಗುತ್ತದೆ’ ಎಂದರು.

ಗೃಹ ಸಚಿವ ಕೆ.ಜೆ.ಜಾರ್ಜ್‌, ಸರ್ಕಾರದ ಮುಖ್ಯ ಕಾರ್ಯದರ್ಶಿ ಕೌಶಿಕ್ ಮುಖರ್ಜಿ, ರಾಜ್ಯ ಪೊಲೀಸ್ ಮಹಾನಿರ್ದೇಶಕ ಲಾಲ್ ರೋಕುಮ ಪಚಾವೊ ಮತ್ತಿತರರು ಹಾಜರಿದ್ದರು.

ಅಪವಾದ ತಪ್ಪೊಲ್ಲ
ಎಷ್ಟೇ ಜಾಗೃತೆಯಿಂದ ಕೆಲಸ ಮಾಡಿ­­ದರೂ ಪೊಲೀಸರ ಮೇಲೆ ಬರುವ ಅಪ­ವಾದ ತಪ್ಪುವುದಿಲ್ಲ. ಎಟಿಎಂ­ಗಳಲ್ಲಿ ಗ್ರಾಹ­ಕರ ಸುರಕ್ಷತೆಗೆ ಕ್ರಮ ಕೈಗೊಳ್ಳುವುದು ಬ್ಯಾಂಕ್‌­­ಗಳ ಕರ್ತವ್ಯ. ಶಾಲೆಗಳಲ್ಲಿ ಮಕ್ಕಳ ರಕ್ಷ­ಣೆಗೆ ಮುಂಜಾಗ್ರತೆ ವಹಿಸು­ವುದು ಶಾಲಾ ಆಡಳಿತ ಮಂಡಳಿಗಳ ಜವಾ­ಬ್ದಾರಿ. ಆದರೆ, ಅಲ್ಲಿ ಅಪ­ರಾಧ ಕೃತ್ಯಗಳು ನಡೆ­ದಾಗ ಜನ ಪೊಲೀಸ­ರನ್ನೇ ದೂರುತ್ತಾರೆ. –ಸಿದ್ದರಾಮಯ್ಯ

Write A Comment