ಪ್ರಮುಖ ವರದಿಗಳು

ಐಎಸ್‌ಎಲ್‌ಗೆ ಚಾಲನೆ: ಮುಂಬೆಯನು್ನ ಬಗು್ಗ ಬಡಿದ ಕೋಲ್ಕತಾ; ಇಂಡಿಯನ್ ಸೂಪರ್ ಲೀಗ್: ಚೊಚ್ಚಲ ಗೋಲು ದಾಖಲಿಸಿದ ಫಿಕ್ರು

Pinterest LinkedIn Tumblr

atletico-kolkata_1210isl_63ಕೋಲ್ಕತಾ, ಅ.12: ಭಾರತದ ಫುಟ್ಬಾಲ್ ಚರಿತ್ರೆಯಲ್ಲಿ ಹೊಸ ಅಧ್ಯಾಯವನ್ನು ಬರೆಯುವ ಗುರಿ ಹೊಂದಿರುವ ಇಂಡಿಯನ್ ಸೂಪರ್ ಲೀಗ್‌ನ ಚೊಚ್ಚಲ ಆವೃತ್ತಿಯ ಮೊದಲ ಪಂದ್ಯದಲ್ಲಿ ಇಂದು ಅಟ್ಲೆಟಿಕೊ ಡಿ ಕೋಲ್ಕತಾ ತಂಡ ಮುಂಬೈ ವಿರುದ್ಧ 3-0 ಗೋಲುಗಳ ಭರ್ಜರಿ ಗೆಲುವಿನೊಂದಿಗೆ ಶುಭಾರಂಭ ಮಾಡಿದೆ.

ಇಲ್ಲಿನ ಸಾಲ್ಟ್‌ಲೇಕ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಕೋಲ್ಕತಾ ತಂಡದ ಇಥೋಪಿಯಾದ ಸ್ಟ್ರೈಕರ್ ಫಿಕ್ರು ತೆಪೆರಾ ಲೆಮೆಸ್ಸಾ 28ನೆ ನಿಮಿಷದಲ್ಲಿ ಗೋಲು ದಾಖಲಿಸುವ ಮೂಲಕ ಐಎಎಸ್‌ಎಲ್‌ನ ಇತಿಹಾಸದಲ್ಲಿ ಮೊದಲ ಗೋಲು ದಾಖಲಿಸಿದ ಗೌರವಕ್ಕೆ ಭಾಜನರಾದರು.

ಫಿಕ್ರು ಮಿಂಚಿನ ವೇಗದಲ್ಲಿ ಚೆಂಡನ್ನು ಗುರಿಯತ್ತ ತಳ್ಳಿದಾಗ ಮುಂಬೈ ಎಫ್‌ಸಿಯ ಗೋಲು ಕೀಪರ್ ಸುಬ್ರತಾ ಪಾಲ್‌ಗೆ ಗೋಲು ನಿರಾಕರಿಸಲು ಸಾಧ್ಯವಾಗಲಿಲ್ಲ.

ಫಿಕ್ರು ಗೋಲು ನೆರವಿನಲ್ಲಿ 1-0 ಮುನ್ನಡೆ ಸಾಧಿಸಿದ ಕೋಲ್ಕತಾ ತಂಡ ಬಳಿಕ ಎರಡು ಗೋಲುಗಳನ್ನು ತನ್ನ ಖಾತೆಗೆ ಸೇರಿಸಿಕೊಂಡಿತು. ದ್ವಿತೀಯಾರ್ಧದ 69ನೆ ನಿಮಿಷದಲ್ಲಿ ಸ್ಪೇನ್‌ನ ಬೊರ್ಜಾ ಫೆರ್ನಾಂಡೆಝ್ ಗೋಲು ಜಮೆ ಮಾಡಿದರು. 90+2ನೆ ನಿಮಿಷದಲ್ಲಿ ಸ್ಪೇನ್ ಮೂಲದ ಇನ್ನೊಬ್ಬ ಆಟಗಾರ ಅರ್ನಾಲ್ ಕಾರ್ಬೊ ಅವರು ಕೋಲ್ಕತಾದ ಖಾತೆಗೆ ಗೋಲು ಸೇರಿಸಿ ತಂಡದ ಗೆಲುವಿಗೆ ನೆರವಾದರು.

ಮುಂಬೈ ತಂಡಕ್ಕೆ ಗೋಲು ದಾಖಲಿಸುವಲ್ಲಿ ಎಡವಿತು. ಕೋಲ್ಕತಾ ತಂಡದ ರಕ್ಷಣಾ ಕೋಟೆಯನ್ನು ಭೇದಿಸಲು ಮುಂಬೈಗೆ ಸಾಧ್ಯವಾಗಲಿಲ್ಲ.

Write A Comment