ಅನಿವಾಸಿ ಭಾರತೀಯರು

ಉದ್ಯಮಿ, ಅನಿವಾಸಿ ಭಾರತೀಯರಾದ ಹರೀಶ್ ಶೇರಿಗಾರ್-ಶರ್ಮಿಳಾ ಶೇರಿಗಾರ್ ದಂಪತಿಯಿಂದ ಮತದಾನ

Pinterest LinkedIn Tumblr

ಮಂಗಳೂರು: ಅನಿವಾಸಿ ಭಾರತೀಯ, ಉದ್ಯಮಿ, ಚಲನಚಿತ್ರ ನಿರ್ಮಾಪಕರಾದ ಹರೀಶ್ ಶೇರಿಗಾರ್, ಶರ್ಮಿಳಾ ಹರೀಶ್ ಶೇರಿಗಾರ್ ದಂಪತಿ ಮತದಾನ ಮಾಡಿದರು.

ದುಬೈನಿಂದ ಮತದಾನ ಸಲುವಾಗಿ ಹುಟ್ಟೂರು ಮಂಗಳೂರಿಗೆ ಆಗಮಿಸಿದ ಅವರು, ಮಂಗಳೂರಿನ ಕುಲಶೇಖರದ ಸೈಂಟ್ ಜೋಸೆಫ್ ಶಾಲೆಯಲ್ಲಿ ಮತಚಲಾಯಿಸಿದರು.

ಈ ಸಂದರ್ಭ ಮಾತನಾಡಿದ ಹರೀಶ್ ಶೇರಿಗಾರ್ ಅವರು, ಮತದಾನ ನಮ್ಮ ಹಕ್ಕು. ಅದಕ್ಕಾಗಿ ಗಲ್ಫ್ ರಾಷ್ಟ್ರದಿಂತ ತವರು ನಾಡಿಗೆ ಬಂದು ಮತಚಲಾಯಿಸಿದ್ದೇವೆ. ಎಲ್ಲರೂ ಮತದಾನ ಮಾಡುವ ಮೂಲಕ ತಮ್ಮ ಕರ್ತವ್ಯ, ಜವಬ್ದಾರಿಯನ್ನು ಪ್ರತಿಪಾದಿಸಬೇಕು ಎಂದರು.

Comments are closed.