ಅನಿವಾಸಿ ಭಾರತೀಯರು

ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದ ಹೊರನಾಡ ಸಾಧಕ ದುಬೈ ಉದ್ಯಮಿ ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿ

Pinterest LinkedIn Tumblr

(ವರದಿ- ಯೋಗೀಶ್ ಕುಂಭಾಸಿ)

ಉಡುಪಿ: 2021ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ವಿವರ ಪ್ರಕಟವಾಗಿದ್ದು ಹೊರನಾಡ ಸಾಧಕರ ವಿಭಾಗದಲ್ಲಿ ದೇಶ ಸೇರಿದಂತೆ ದುಬೈ ಹಾಗೂ ಇತರೆಡೆ ಉದ್ಯಮ ಸ್ಥಾಪಿಸಿರುವ ಅನಿವಾಸಿ ಕನ್ನಡಿಗ ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ವಕ್ವಾಡಿ ಪ್ರವೀಣ್ ಕುಮಾರ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಪ್ರವೀಣ್ ಶೆಟ್ಟಿ ಅವರು ಫಾರ್ಚುನ್ ಗ್ರೂಪ್ ಆಫ್ ಹೋಟೆಲ್ಸ್ ಚೇರ್ಮನ್ ಆಗಿದ್ದಾರೆ. 1967 ಜುಲೈ 6 ರಲ್ಲಿ ಜನಿಸಿರುವ ಇವರು, ಸರ್ಕಾರಿ ಜೂನಿಯರ್ ಕಾಲೇಜು ಕೋಟೇಶ್ವರ ಮತ್ತು ಕುಂದಾಪುರದ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಶಿಕ್ಷಣ ಪಡೆದು ತರುವಾಯ ಬದುಕು ಕಟ್ಟಿಕೊಳ್ಳುವ ಸಲುವಾಗಿ ದುಬೈಗೆ ತೆರಳಿದವರು. ಅಲ್ಲಿ ಹೋಟೆಲ್ ವೃತ್ತಿಯ ಬಗ್ಗೆ ಆಸಕ್ತಿ ಹೊಂದಿ ತನ್ನದೇ ಆದ ಸಂಸ್ಥೆ ಸ್ಥಾಪಿಸಿದರು. ಪ್ರವೀಣ್ ಕುಮಾರ್ ಶೆಟ್ಟಿಯವರು ಯುಎಇ ಎನ್.ಆರ್.ಐ ಫೋರಂನ ಸ್ಥಾಪಕ ಅಧ್ಯಕ್ಷರಾಗಿದ್ದಾರೆ.

ಫಾರ್ಚುನ್ ಗ್ರೂಪ್ ಆಫ್ ಹೋಟೆಲ್ಸ್ ಮೂಲಕ ದುಬೈನಲ್ಲಿ ಆರು, ಭಾರತದಲ್ಲಿ 2, ಜಾರ್ಜಿಯಾದಲ್ಲಿ ಒಂದು ಹೋಟೆಲನ್ನು ಮುನ್ನಡೆಸುತ್ತಿದ್ದಾರೆ.
ವಿದೇಶಗಳಲ್ಲಿ ಓರ್ವ ಕನ್ನಡಿಗನಾಗಿ ಅಪರೂಪದ ಸಾಧನೆ ತೋರಿದ್ದಾರೆ. ಎರಡು ಸಾವಿರಕ್ಕೂ ಅಧಿಕ ಜನರಿಗೆ ಉದ್ಯೋಗ ನೀಡಿದ್ದು, ಈ ಪೈಕಿ ಶೇಕಡ 60ಕ್ಕೂ ಅಧಿಕ ಮಂದಿ ಕನ್ನಡಿಗರು ಕೆಲಸ ಪಡೆದಿದ್ದಾರೆ ಅನ್ನುವುದು ಹೆಮ್ಮೆಯ ವಿಚಾರ.ತನ್ನ ಕಾರ್ಯಕ್ಷಮತೆಯಿಂದ ಫಾರ್ಚುನ್ ಗ್ರೂಪ್ ನ ಅಧ್ಯಕ್ಷರಾಗಿ 2001 ಕಾರ್ಯನಿರ್ವಹಿಸುತ್ತಿದ್ದಾರೆ.ಈ ಮೂಲಕ ಹಲವಾರು ಸಾಮಾಜಿಕ ಕಳಕಳಿಯ ಕಾರ್ಯಗಳಲ್ಲೂ ತೊಡಗಿಸಿಕೊಂಡಿದ್ದಾರೆ. ಇನ್ನು ಕೋವಿಡ್ ವೇಳೆ ಚಾರ್ಟರ್ಡ್ ವಿಮಾನ ವ್ಯವಸ್ಥೆ ಮೂಲಕ ಕನ್ನಡಿಗರನ್ನು ತಾಯ್ನಾಡಿಗೆ ಕಳಿಸುವ ಮೂಲಕ ಸುದ್ದಿಯಾಗಿದ್ದರು. ಈ ಬಾರಿ ಕೊರೋನಾ ಸಂದರ್ಭ ತನ್ನ ಹುಟ್ಟೂರಾದ ವಕ್ವಾಡಿ ಭಾಗದ ನೂರಾರು ಮನೆಗೆ ಆಹಾರ ಸಾಮಾಗ್ರಿ ಕಿಟ್ ನೀಡಿದ್ದರು.

ಪ್ರವೀಣ್ ಕುಮಾರ್ ಶೆಟ್ಟಿ ಪಡೆದಿರುವ ಪ್ರಶಸ್ತಿಗಳು…
*ಜಾರ್ಜಿಯಾ ಅವಾರ್ಡ್- 2021
*2019 ರಲ್ಲಿ ಬಿಎಸ್ ಯಡಿಯೂರಪ್ಪ ಅವರಿಂದ ಬಂಟರ ಸಂಘದ ಪ್ರಶಸ್ತಿ
*ಬಹರೈನ್ ನಲ್ಲಿ ಸಕ್ಸಸ್ ಫುಲ್ ಎಂಟರ್ಪ್ರಿನರ್ ಆಫ್ ದ ಇಯರ್ ಅವಾರ್ಡ್
*ವರ್ಲ್ಡ್ ಹ್ಯೂಮಾನಿಟೇರಿಯನ್ ಅವರ್ಡ್, ಕ್ರೌನ್ ಅವಾರ್ಡ್, ಕುಂದಾಪುರ ಕನ್ನಡ ಬಿಸಿನೆಸ್ ರತ್ನ ಪ್ರಶಸ್ತಿ ಪಡೆದಿದ್ದಾರೆ.
*ಓವರ್‌ಸಿಸ್ ಅಂಬಾಸಿಡರ್ ಆಫ್ ಇಂಡಿಯಾ ಅವಾರ್ಡ್, ಸೌತ್ ಇಂಡಿಯಾ ಟ್ರಾವೆಲ್ ಅವಾರ್ಡ್, ಹೈದರಾಬಾದ್
*ಇಂಟರ್ನ್ಯಾಷನಲ್ ಪೀಸ್ ಅವರ್ಡ್-2018
*ಕಿರೀಟ ಪ್ರಶಸ್ತಿ-2017
*ಬಹರೈನ್ ಕನ್ನಡ ಸಂಘ ಪ್ರಶಸ್ತಿ-2017
*ಕೇರಳದ ಶ್ರೇಯಸ್ ಅವಾರ್ಡ್-2016
*ಶಾರ್ಜಾದ ಮಯೂರ ಪ್ರಶಸ್ತಿ-2015
*ಆರ್ಯಭಟ ಪ್ರಶಸ್ತಿ-2021
*ಕುವೆಂಪು ವಿಶ್ವಮಾನವ ಪ್ರಶಸ್ತಿ-2009 ಸಹಿತ ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.

ಕಳೆದ 30 ವರ್ಷದಿಂದ ದುಬೈನಲ್ಲಿ ಉದ್ಯಮ ಸ್ಥಾಪಿಸಿ ಹೊರನಾಡು ಕನ್ನಡಿಗನಾಗಿದ್ದು ಕನ್ನಡಿಗರಿಗೆ ಅಗತ್ಯ ಸಹಾಯ ಮಾಡುತ್ತಿರುವೆ. ಕೊರೋನಾ ಕಾಲದಲ್ಲಿ‌ ಕನ್ನಡಿಗರಿಗಾಗಿ ಮಾಡಿದ ಜನ ಸೇವೆಯನ್ನು ರಾಜ್ಯ ಸರಕಾರ ಗುರುತಿಸಿ ಈ ಗೌರವ ನೀಡಿದ್ದು ಸಂತಸ ನೀಡಿದೆ. ಪ್ರಶಸ್ತಿ ಮೂಲಕ ಇನ್ನಷ್ಟು ಜವಬ್ದಾರಿ ಕೂಡ ಹೆಚ್ಚಿದ್ದು ಹಿಂದಿನಂತೆಯೇ ಮುಂದಿನ ದಿನಗಳಲ್ಲಿಯೂ ನನ್ನ ಸಮಾಜಸೇವೆ ಮುಂದುವರೆಯಲಿದೆ.
– ಪ್ರವೀಣ್ ಕುಮಾರ್ ಶೆಟ್ಟಿ ವಕ್ವಾಡಿ, ಅನಿವಾಸಿ ಭಾರತೀಯ

Comments are closed.