ಅನಿವಾಸಿ ಭಾರತೀಯರು

ಚಿತ್ರಪ್ರೇಮಿಗಳಿಗೆ ಮುದ ನೀಡಲು ನಾಳೆಯಿಂದ ಮತ್ತೊಮ್ಮೆ ತೆರೆಕಾಣುತ್ತಿದೆ “ಇಂಗ್ಲಿಷ್” – ಎಂಕ್ಲೆಗ್ ಬರ್ಪುಜಿ ಬ್ರೋ’ ತುಳುಚಿತ್ರ

Pinterest LinkedIn Tumblr

“ಇಂಗ್ಲಿಷ್” – ಎಂಕ್ಲೆಗ್ ಬರ್ಪುಜಿ ಬ್ರೋ’ ತುಳು ಚಿತ್ರ ನಾಳೆಯಿಂದ ಮತ್ತೆ ಪ್ರದರ್ಶನ

ಮಂಗಳೂರು, ಜುಲೈ. 21 : ಕೋವಿಡ್ ಲಾಕ್‌ಡೌನ್ ಹಿನ್ನೆಲೆಯಲ್ಲಿ ಸಿನಿಮಾ ಮಂದಿರಗಳು ಮುಚ್ಚಲ್ಪಟ್ಟ ಕಾರಣ ಮೂರು ವಾರಗಳ ಅಧ್ಬುತ ಪ್ರದರ್ಶನದ ಬಳಿಕ ಸ್ತಗಿತಗೊಂಡ ತುಳು‌ ಚಿತ್ರರಂಗದ ಬಹುನಿರೀಕ್ಷೆಯ ಗಿಲ್ಬಿಸ್ಟಿಕ್ ಕಾಮಿಡಿ ಚಿತ್ರ “ಇಂಗ್ಲಿಷ್” – ಎಂಕ್ಲೆಗ್ ಬರ್ಪುಜಿ ಬ್ರೋ’ ಲಾಕ್‌ಡೌನ್ ತೆರವಾದ ಹಿನ್ನೆಲೆಯಲ್ಲಿ ಮತ್ತೆ ಬಿಡುಗಡೆಗೊಂಡಿದೆ.

ಅಕ್ಮೆ(ACME ) ಮೂವೀಸ್ ಇಂಟರ್‌ನ್ಯಾಷನಲ್ ಲಾಂಛನದಲ್ಲಿ ನಿರ್ಮಾಣವಾಗಿರುವ ದುಬೈಯ ಖ್ಯಾತ ಉದ್ಯಮಿ, ಕನ್ನಡ ಸಿನಿಮಾ ನಿರ್ಮಾಪಕರಾದ ಹರೀಶ್ ಶೇರಿಗಾರ್ ಮತ್ತು ಶ್ರೀಮತಿ ಶರ್ಮಿಳಾ ಶೇರಿಗಾರ್ ನಿರ್ಮಿಸಿರುವ ಕೆ. ಸೂರಜ್ ಶೆಟ್ಟಿ ನಿರ್ದೇಶನದ“ಇಂಗ್ಲಿಷ್” – ಎಂಕ್ಲೆಗ್ ಬರ್ಪುಜಿ ಬ್ರೋ ‘ ತುಳು‌ ಚಿತ್ರ ಅಪಾರ ಅಭಿಮಾನಿಗಳ ಒತ್ತಾಯದ ಮೇರೆಗೆ ನಾಳೆಯಿಂದ ಮಂಗಳೂರು ಹಾಗೂ ಮಣಿಪಾಲದ ಭಾರತ್ ಸಿನಿಮಾಸ್ ನಲ್ಲಿ ಮತ್ತೆ ತೆರೆಕಾಣಲಿದೆ.

ಈ ಮೊದಲು ಕಳೆದ ಮಾರ್ಚ್ 26ರಂದು ಕರ್ನಾಟಕದಾದ್ಯಂತ 26 ಚಿತ್ರಮಂದಿರಗಳಲ್ಲಿ ಏಕಕಾಲದಲ್ಲಿ ಚಿತ್ರ ಬಿಡುಗಡೆಗೊಂಡಿತು.

ಮಂಗಳೂರು – ಪುತ್ತೂರು- ಸುಳ್ಯ – ಬೆಳ್ತಂಗಡಿ- ಮೂಡಬಿದ್ರೆ – ಉಡುಪಿ- ಕುಂದಾಪುರ- ಮಣಿಪಾಲ- ಕಾರ್ಕಾಳ -ಬೆಂಗಳೂರು-ಮೈಸೂರು-ಸಕಲೇಶಪುರ- ಶುಂಠಿಕೊಪ್ಪ- ಹುಬ್ಬಳಿ- ಶಿವಮೊಗ್ಗ-ಕಾಸರಗೊಡ್ ನ ಪ್ರತೀ ತಾಲೂಕುಗಳಲ್ಲಿರುವ ಚಿತ್ರಮಂದಿರಗಳು ಸೇರಿದಂತೆ ಒಟ್ಟು 26 ಚಿತ್ರಮಂದಿರಗಳಲ್ಲಿ ಏಕಕಾಲದಲ್ಲಿ ಚಿತ್ರ ತೆರೆಕಂಡು ಅಧ್ಬುತ ಪ್ರದರ್ಶನ ಕಂಡಿತ್ತು.

ಆದರೆ ಕೋವಿಡ್ ಲಾಕ್‌ಡೌನ್ ಹಿನ್ನೆಲೆಯಲ್ಲಿ ಮೂರು ವಾರಗಳ ಅಧ್ಬುತ ಪ್ರದರ್ಶನ ಕಂಡ ಬಳಿಕ ಚಿತ್ರ ಪ್ರದರ್ಶನವನ್ನು ನಿಲ್ಲಿಸಲಾಗಿತ್ತು. ಆದರೆ ಏಪ್ರಿಲ್ 15ರಂದು ಓಮನ್ ಹಾಗೂ ಯುಎಇ ( UAE ) ರಾಷ್ಟ್ರಗಳಲ್ಲಿ ಚಿತ್ರ ತೆರೆ ಕಾಣುವ ಮೂಲಕ ತುಳು ಚಿತ್ರರಂಗ ಮತ್ತೊಂದು ಮೈಲಿಗಲ್ಲನ್ನು ಸ್ಥಾಪಿಸಿತು. ಮಾತ್ರವಲ್ಲದೇ ದುಬೈ ಸೇರಿದಂತೆ ಬಿಡುಗಡೆಗೊಂಡ ಎಲ್ಲಾ ರಾಷ್ಟ್ರಗಳಲ್ಲಿ ಅಧ್ಬುತ ಯಶಸ್ಸಿನೊಂದಿಗೆ ಹೌಸ್‌ಫುಲ್ ಪ್ರದರ್ಶನ ಕಂಡಿದೆ. ಮಾತ್ರವಲ್ಲದೇ ಇಸ್ರೇಲ್ ನಲ್ಲೂ ಚಿತ್ರಕ್ಕೆ ಉತ್ತಮ ಸ್ಪಂದನೆ ದೊರಕಿತ್ತು.

ಪ್ರೀತಿಗೆ ಇಂಗ್ಲೀಷ್ ವ್ಯಾಮೋಹ ಅಡ್ಡಿ!

ಉತ್ತಮ ಹಾಸ್ಯ, ಉತ್ತಮ ಸಂದೇಶ, ನವೀರಾದ ಪ್ರೇಮ ಪ್ರಣಯ, ಪ್ರೀತಿಗೆ ಇಂಗ್ಲೀಷ್ ವ್ಯಾಮೋಹ ಅಡ್ಡಿ ಹಾಗೂ ಕೌಟುಂಬಿಕ ಸಮಸೈಗಳ ಹಿನ್ನೆಲೆ ಕೊನೆಗೆ ಪ್ರೇತಗಳಿಗೆ ಮದುವೆ ಮಾಡುವ ಜಂಜಾಟದ ಮೂಲಕ ಇಡೀ ಚಿತ್ರ ಪ್ರೇಕ್ಷಕರನ್ನು ಉಸಿರು ಬಿಗಿ ಹಿಡಿದು ಕುಳಿತುಕೊಳ್ಳುವಂತೆ ಮಾಡುತ್ತದೆ. ಜೊತೆ ಗೆ ಸುಮಧುರವಾರ ಹಾಡುಗಳು ಸಿನಿ ಪ್ರೀಯರಿಗೆ ಮುದ ನೀಡುತ್ತದೆ.

ಹಾಸ್ಯವೇ ಪ್ರಧಾನವಾಗಿರುವ ಈ ಚಿತ್ರದಲ್ಲಿ ಬರುವ ವಿವಿಧ ಸನ್ನಿವೇಶಗಳು, ಚಿತ್ರ ಕಥೆ, ಸಂಭಾಷಣೆ, ಒಂದಕ್ಕಿಂತ ಒಂದು ಹಿಟ್ ಹಾಡುಗಳು ಒಟ್ಟಾರೆ ಸಿನೆಮಾದ ಗೆಲುವಿಗೆ ಸ್ಪೂರ್ತಿಯಾಗಿವೆ.

‘ಇಂಗ್ಲಿಷ್-ಎಂಕ್ಲೆಗ್ ಬರ್ಪುಜಿ ಬ್ರೋ’ ಸಿನೆಮಾದಲ್ಲಿ ಪ್ರತಿಯೊಂದು ಪಂಚಿಗ್ ಡೈಲಾಗ್, ಹಾಸ್ಯಮಯ ದೃಶ್ಯ, ಹಾಸ್ಯ ಕಲಾವಿದರ ನಟನೆ, ಛಾಯಾಗ್ರಹಣ, ಹಾಡು, ಹಿನ್ನೆಲೆ ಸಂಗೀತ, ಸುಂದರ ತಾಣಗಳ ದೃಶ್ಯ ಎಲ್ಲವೂ ಸೂಪರ್. ಒಟ್ಟಾರೆ ಚಿತ್ರವನ್ನು ಎಲ್ಲ ವರ್ಗದವರು ಒಟ್ಟು ಕುಳಿತು ನೋಡುವಂತೆ ನಿರ್ಮಿಸಲಾಗಿದೆ.

“ಇಂಗ್ಲೀಷ್ ಕಲಿಕೆ” ಹಾಗೂ “ಕುಲೆ ಕಲ್ಯಾಣ” ಹೈಲೆಟ್ :

ಇಂಗ್ಲೀಷ್ ಕಲಿಕೆ ಹಾಗೂ ಕುಲೆಗಳ (ಪ್ರೇತ) ಮದುವೆ ಬಗ್ಗೆಯೇ ಪ್ರಾಧಾನ್ಯ ಹೊಂದಿರುವ ಈ ಚಿತ್ರದಲ್ಲಿ ಇಂಗ್ಲೀಷ್ ತಿಳಿಯದೆ ಪರದಾಡುವ ಸನ್ನಿವೇಶಗಳು ಚಿತ್ರದಲ್ಲಿ ಬಹಳಷ್ಟು ಸ್ವಾರಸ್ಯಕರವಾಗಿ ಮೂಡಿ ಬಂದಿದೆ. ವಿಶೇಷವಾಗಿ ಕರಾವಳಿ ಭಾಗದಲ್ಲಿ ಚಾಲ್ತಿಯಲ್ಲಿರುವ ಪ್ರೇತಗಳಿಗೆ ಮದುವೆ ಮಾಡಿಸುವ ಸಾಂಪ್ರದಾಯಿಕ ಕತೆಯನ್ನು ಹಾಸ್ಯದ ಮೂಲಕ ಪ್ರೇಕ್ಷಕರಿಗೆ ಉಣಬಡಿಸುವುದೇ ಈ ಚಿತ್ರದ ತಿರುಳಾಗಿದೆ.

ತುಳು ಚಿತ್ರರಂಗಕ್ಕೆ ಮೇರು ನಟನ ಎಂಟ್ರಿ :

ತುಳುವಿನಲ್ಲಿ ಇದೇ ಮೊದಲ ಬಾರಿಗೆ ಕನ್ನಡದ ಮೇರು ನಟ ಅನಂತ್ ನಾಗ್ ವಿಶೇಷ ಪಾತ್ರದಲ್ಲಿ ನಟಿಸಿದ್ದು, “ಇಂಗ್ಲಿಷ್” – ಎಂಕ್ಲೆಗ್ ಬರ್ಪುಜಿ Bro’ ಸಿನೆಮಾ ಮೂಲಕ ತುಳು ಚಿತ್ರರಂಗಕ್ಕೆ ಅವರ ಮೊದಲ ಎಂಟ್ರಿ ಆಗಿದೆ.

ಈ ಎಲ್ಲಾ ವಿಭಿನ್ನ, ವಿಶೇಷ, ವಿಚಿತ್ರಗಳ ಮೂಲಕ, ಅದ್ಭುತ ಯಶಸ್ಸಿನೊಂದಿಗೆ “ಇಂಗ್ಲಿಷ್” – ಎಂಕ್ಲೆಗ್ ಬರ್ಪುಜಿ ಬ್ರೋ’ ತುಳು ಚಿತ್ರ ಜುಲೈ 22ರಿಂದ ಮತ್ತೆ ತೆರೆಕಾಣುತ್ತಿದೆ.

ಹಾಸ್ಯ ನಟರ ದಂಡು :

ಚಿತ್ರದಲ್ಲಿ ತುಳು ರಂಗಭೂಮಿಯ ಖ್ಯಾತ ಹಾಸ್ಯ ನಟರಾದ ಅರವಿಂದ್ ಬೋಳಾರ್, ನವೀನ ಡಿ’ಪಡೀಲ್, ಭೋಜರಾಜ್ ವಾಮಂಜೂರ್, ವಿಸ್ಮಯ್ ವಿನಾಯಕ್, ದೀಪಕ್ ರೈ, ನಾಯಕ- ನಟನಾಗಿ “ದಿಯಾ” ಖ್ಯಾತಿಯ ಪೃಥ್ವಿ ಅಂಬರ್ ನಾಯಕಿ ನಟಿ ನವ್ಯ ಪೂಜಾರಿ ನಟಿಸಿದ್ದು, ಇವರ ನಟನೆ ಎಲ್ಲರಿಗೂ ಖುಷಿಕೊಡುತ್ತೆ. ಪ್ರಥಮ ಬಾರಿಗೆ ತುಳು ಚಿತ್ರರಂಗ ಪ್ರವೇಶಿಸಿ, ವಿಶೇಷ ಪಾತ್ರದಲ್ಲಿ ನಟಿಸಿರುವ ಕನ್ನಡದ ಹಿರಿಯ ನಟ ಅನಂತ್ ನಾಗ್ ನಟನೆ ಎಲ್ಲರ ಮನದಲ್ಲಿ ಉಳಿಯುವಂತೆ ಮಾಡುತ್ತದೆ.

ಸಿನಿಮಾಕ್ಕೆ ಕತೆ, ಚಿತ್ರಕತೆ, ಸಂಭಾಷಣೆ , ನಿರ್ದೇಶನ ಕೆ. ಸೂರಜ್ ಶೆಟ್ಟಿ
ಮ್ಯೂಸಿಕ್ : ಕದ್ರಿ ಮಣಿಕಾಂತ್
ಸಿನಿಮಾಟೋಗ್ರಫಿ: ಕೃಷ್ಣ ಸಾರಥಿ – ಅಭಿಲಾಷ್ ಕಲಾತಿ
ಸಂಕಲನ: ಮನು ಶೆಡ್ಗರ್
ಆರ್ಟ್ ಡೈರೆಕ್ಟರ್ : ಮಹೇಶ್ ಎನ್ಮೂರಿ
ಲಿರಿಸಿಸ್ಟ್ಸ್ : ಅರ್ಜುನ್ ಲೆವಿಸ್ | ಲೋಕು ಕುಡ್ಲ
ಕೊರಿಯೋಗ್ರಾಫರ್ : ‘ಭಜರಂಗಿ’ ಮೋಹನ್

ವರದಿ : ಸತೀಶ್ ಕಾಪಿಕಾಡ್

Comments are closed.