ಅನಿವಾಸಿ ಭಾರತೀಯರು

ಹೆಸರಾಂತ ಕಲಾವಿದ, ಕೊಡುಗೈ ದಾನಿ, ಸಮಾಜ ಸೇವಕ ರೋಟರಿಯನ್ ಬಿ. ದಿವಾಕರ್ ಅಮೀನ್ ವಿಧಿವಶ

Pinterest LinkedIn Tumblr

ಮಂಗಳೂರು, ಆಗಸ್ಟ್.26: ಮಂಗಳೂರಿನ ಬೋಳಾರ ನಿವಾಸಿ, ಸುಧೀರ್ಘ ಸಮಯದಿಂದ ಮಸ್ಕತ್ ನಲ್ಲಿ ವಾಸ್ತವ್ಯ ಹೊಂದಿದ್ದ ಮಾಜಿ ಮಾರ್ಕೇಟಿಂಗ್ ಮ್ಯಾನೇಜರ್ ( Al Haytham Trading Co, Al Khuwair Muscat) ದಿವಾಕರ್ ಅಮೀನ್ ಬೋಳಾರ್ (73) ಇವರು ಆಗಸ್ಟ್ 26 ಬುಧವಾರದಂದು ಬೆಳಗ್ಗೆ ಮಂಗಳೂರಿನಲ್ಲಿ ನಿಧನ ಹೊಂದಿದರು.

ದಿವಾಕರ್ ಅಮೀನ್ ಅವರು ಕಳೆದ 35 ವರ್ಷಗಳ ಕಾಲ ಮಸ್ಕತ್ ನಲ್ಲಿ ವಾಸ್ತವ್ಯ ಹೊಂದಿದ್ದರು. ಆರು ಅಡಿಗೂ ಹೆಚ್ಚು ಎತ್ತರದ ಅಜಾನುಬಾಹು ಶರೀರವನ್ನು ಹೊಂದುವ ಮೂಲಕ ಕ್ರೀಡಾ ಕ್ಷೇತ್ರದಲ್ಲಿ ಗಮನ ಸೆಳೆದಿದ್ದರು. ಮಾತ್ರವಲ್ಲದೇ ಇವರು ಉತ್ತಮ ಕ್ರಿಕೆಟ್ ಪಟು ಹಾಗೂ ಕ್ರೀಡಾ ಚಟುವಟಿಗಳನ್ನು ಸಂಯೋಜನೆ ಮಾಡುವ ಮೂಲಕ ಹಾಗೂ ಸಾಮಾಜಿಕ ಚಟುವಟಿಕೆಗಳಿಂದ ಖ್ಯಾತಿ ಹೊಂದಿದ್ದರು.

ಮಸ್ಕತ್ ನಿಂದ ಹಿಂತುರಿಗಿದ ಬಳಿಕ ಅವರು ತಮ್ಮ ಕುಟುಂಬದೊಂದಿಗೆ ನಗರದ ಪಾಂಡೇಶ್ವರ ಬಳಿಯ ಸುಭಾಸ್ ನಗರದಲ್ಲಿ ವಾಸ್ತವ್ಯ ಹೊಂದಿದ್ದರು.

ಬಳಿಕ ಅವರು ರೋಟರಿ ಕ್ಲಬ್ ಗೆ ಸೇರಿದರು. ತಮ್ಮಲ್ಲಿದ್ದ ಅಪಾರ ಪ್ರತಿಭೆಯಿಂದ ಅತೀ ಶೀಘ್ರದಲ್ಲೇ ಅವರು ರೋಟರಿ ಕ್ಲಬ್ ನ ಅಧ್ಯಕ್ಷ ಹುದ್ಧೆಗೆ ಏರಿದರು. ಅಧ್ಯಕ್ಷರಾದ ಬಳಿಕ ಅವರು ಕೈಗೊಂಡ ಹಲವಾರು ಸಾಮಾಜಿಕ ಚಟುವಟಿಕೆ ಹಾಗೂ ಪ್ರಯೋಜನಕಾರಿ ಸಮಾಜಮುಖಿ ಸೇವೆಗಳಿಂದ ಡೆಪ್ಯೂಟಿ ಗವರ್ನರ್ ಮಟ್ಟಕ್ಕೆ ಏರಲು ಸಹಕಾರಿಯಾಯಿತು.

ಕೋವಿಡ್ -19 ಲಾಕ್‌ಡೌನ್ ಸಮಯದಲ್ಲಿ ನಗರದಲ್ಲಿದ್ದ ವಲಸೆ ಕಾರ್ಮಿಕರಿಗೆ ಹಾಗೂ ಬಸ್ ಮತ್ತು ರೈಲ್ವೆ ನಿಲ್ದಾಣಗಳ ಆವರಣಗಳಲ್ಲಿ ಸಿಲುಕಿದ್ದ ನಿರ್ಗತಿಕರಿಗೆ ತಾನೇ ಆಹಾರ ಮತ್ತು ರೇಷನ್ ಕಿಟ್ ಗಳನ್ನು ವಿತರಿಸುವ ಮೂಲಕ ಬಹಳಷ್ಟು ಸಮಾಜಮುಖಿ ಸೇವೆಯಲ್ಲಿ ತೊಡಗಿದ್ದ ಈ ವ್ಯಕ್ತಿ ಇವರಲ್ಲಿ ಯಾರಾದರೂ ಕೊರೋನಾ ಸೋಕಿತರು ಇದ್ದರೆ ತನಗೂ ಸೋಂಕು ತಗಲು ಬಹುದೆಂಬುದನ್ನು ಲೆಕ್ಕಿಸದೆ ಮಾಡಿರುವ ಈ ಸೇವೆ ಪ್ರತಿಯೊಬ್ಬ ವ್ಯಕ್ತಿಯ ಮನದಾಳದಳದಲ್ಲಿ ಉಳಿಯುವುದು ಮಾತ್ರವಲ್ಲದೇ ತಾನೂ ಇಂತಹ ಸೇವೆ ಮಾಡ ಬೇಕೆಂಬ ಮನೋಭಾವವನ್ನು ಮೂಡಿಸುವುದರಲ್ಲಿ ಸಂಶಯವಿಲ್ಲ.

ಆರೋಗ್ಯದಲ್ಲಿ ಉತ್ತಮ ಫಿಟ್ ನೆಸ್ ಹೊಂದಿದ್ದ ಇವರು ಒಬ್ಬ ಉತ್ತಮ ಕಲಾವಿದನಾಗಿದ್ದು ನಾಟಕಗಳಲ್ಲೂ ನಟಿಸುವ ಮೂಲಕ ಗಮನ ಸೆಳೆದಿದ್ದರು. ಆಗಸ್ಟ್ 14ರಂದ ಇವರ ಜನ್ಮಾದಿನವಾಗಿದ್ದು, ಈ ಸಂದರ್ಭದಲ್ಲಿ ಇವರು ಒತ್ತಾಯದ ಮೇರೆಗೆ ಮಂಗಳೂರಿನ ಒಂದು ಶಾಲೆಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಮಾತ್ರವಲ್ಲದೇ ಈ ಬಾರಿಯ ಸ್ವಾತಂತ್ರ್ಯ ಸಂದರ್ಭ ರಾಷ್ಟ್ರೀಯವಾದಿ ಕ್ರೈಸ್ತರ ವೇದಿಕೆ ಮಂಗಳೂರು ಇವರ ನೇತ್ರತ್ವದಲ್ಲಿ ರೋಟರಿ ಕ್ಲಬ್, ಮಂಗಳೂರು ದಕ್ಷಿಣ, ನವಸಹಜ ಸಮುದಾಯ ಸಂಘಟನೆ ಮಂಗಳೂರು, ಲೈಂಗಿಕ/ ಲಿಂಗತ್ವ ಅಲ್ಪಸಂಖ್ಯಾತ ಸಮದಯ ದ.ಕ.ಜಿಲ್ಲೆ ಇವರ ಸಹಭಾಗಿತ್ವದೊಂದಿಗೆ ನಡೆದ 74ನೇ ಸ್ವಾತಂತ್ರೋತ್ಸವ ಸಮಾರಂಭದಲ್ಲಿ ನಡೆದ ಉದಯೋನ್ಮುಖ “ಯುವ ವಿಜ್ಞಾನಿ” ಮಾಸ್ಟರ್ ಸಾರ್ಧಕ್ ಪೂಜಾರಿಯವರ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ಇವರ ಕೊನೆಯ ಕಾರ್ಯಾಕ್ರಮವಾಗಿತ್ತು.

ಅ ಬಳಿಕ ಅನಾರೋಗ್ಯಕ್ಕೆ ತುತ್ತಾದ ಕರುನಾಡಿನ ಕಣ್ಮಣಿ, ಯುಗಪುರುಷ, ಬಡವರ ಪಾಲಿನ ದೇವಾತಾ ಮನುಷ್ಯ ಹನ್ನೊಂದು ದಿವಸಗಳ ಬಳಿಕ ದೇವರ ಪಾದ ಸೇರಿದರು.

ಏನೇ ಇರಲಿ, ಒಬ್ಬ ಒಳ್ಳೆ ( ಅವರ ಮಾನವೀಯ ಮೌಲ್ಯ ಹಾಗೂ ಸಾಮಾಜಿಕ ಸೇವೆ್ಗಳ ಬಗ್ಗೆ ಗುಣಗಾನ ಮಾಡಲು ನಮ್ಮಲ್ಲಿ ಶಬ್ಧಗಳಿಲ್ಲ) ಮನುಷ್ಯನನ್ನು ನಾವು ಕಳೆದುಕೊಂಡಿದ್ದೇವೆ.

ಅವರು ತಮ್ಮ ಪತ್ನಿ ಗೀತಾ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಈ ಪರಿವಾರಕ್ಕೆ ಅವರ ಅಗಲಿಕೆಯನ್ನು ಸಹಿಸಿಕೊಳ್ಳುವ ಶಕ್ತಿಯನ್ನು ಅ ಭಗವಂತನ್ನು ಕರುಣಿಸಲೆಂದು ನಾವು ಕಕನ್ನಡಿಗ ವರ್ಲ್ಡ್ ಡಾಟ್ ಕಾಂ ಮಾಧ್ಯಮದ ಪರವಾಗಿ ಅಶಿಸುತ್ತೇವೆ.

ನಿಮ್ಮ ದಿವ್ಯಾತ್ಮಕ್ಕೆ ಭಗವಂತನು ಚಿರಶಾಂತಿ ಕರುಣಿಸಲೆಂದು ಅಶಿಸುವ,
ಶ್ರೀ ಹರೀಶ್ ಶೇರಿಗಾರ್, ಶ್ರೀಮತಿ ಶರ್ಮಿಳಾ ಶೇರಿಗಾರ್ ಹಾಗೂ ಕನ್ನಡಿಗ ವರ್ಲ್ಡ್ ಡಾಟ್ ಕಾಂ ಬಳಗ.

Comments are closed.