ಅಂತರಾಷ್ಟ್ರೀಯ

ಬಾಯ್​ಫ್ರೆಂಡ್ 7 ಲಕ್ಷ ರೂ. ಉಂಗುರ ಕೊಟ್ಟನೆಂದು ಕುಣಿದಾಡಿದಳು; 2 ವರ್ಷದ ಬಳಿಕ ಗೊತ್ತಾಯ್ತು ಅದು ನಕಲಿ!

Pinterest LinkedIn Tumblr


ಆಕೆಯ ಬಾಯ್​ಫ್ರೆಂಡ್​ ಪ್ರಪೋಸ್​ ಮಾಡುವಾಗ ಬರೋಬ್ಬರಿ 7 ಲಕ್ಷ ರೂಪಾಯಿಯ ಪ್ಲಾಟಿನಂ ರಿಂಗ್ ನೀಡಿದ್ದ. ಆ ರಿಂಗ್​ ನ ಸಾಲ ತೀರಿಸಲು ಬರೋಬ್ಬರಿ ಎರಡು ವರ್ಷ ಕಷ್ಟ ಪಟ್ಟಿದ್ದ. ಆ ಉಂಗುರ ನೋಡಿ ಹುಡುಗಿಗೆ ಪ್ರೇಮ ನಿವೇದನೆಯನ್ನು ತಿರಸ್ಕರಿಸಲು ಸಾಧ್ಯವಾಗಲೇ ಇಲ್ಲ. ಆಕೆ ಒಪ್ಪಿಕೊಂಡಳು. ಮದುವೆ ಕೂಡ ಆಯಿತು. ಆದರೆ, ಎರಡು ವರ್ಷಗಳ ನಂತರ ಆಕೆಗೆ ಆತ ಕೊಟ್ಟ ಉಂಗರ ನಕಲಿ ಎಂದು ಗೊತ್ತಾಗಿದೆ.

ಆಕೆಯ ಹೆಸರು ಎಲಿಜಬೆತ್​. ಮೂಲತಃ ಇಂಗ್ಲೆಂಡ್​ನವಳು. ಎರಡು ವರ್ಷಗಳ ಹಿಂದೆ ಈಕೆಗೆ ಪರಿಚಯ ಇರುವ ವ್ಯಕ್ತಿಯೋರ್ವ ಉಂಗುರ ಕೊಟ್ಟು ಪ್ರಪೋಸ್​ ಮಾಡಿದ್ದ. ಪ್ಲಾಟಿನಂ ಹಾಗೂ ವಜ್ರದಿಂದ ಕೂಡಿದ್ದ ಉಂಗುರ ನೋಡಿ ಆಕೆ ಸಂತಸ ಪಟ್ಟಿದ್ದಳು. ಈ ಉಂಗುರಕ್ಕೆ 7 ಲಕ್ಷ ರೂಪಾಯಿ ಎಂದು ಹೇಳಿಕೊಂಡಿದ್ದ. ಇಬ್ಬರ ಮದುವೆ ಕೂಡ ಆಗಿತ್ತು. ಉಂಗುರ ನೀಡಿ ಎರಡು ವರ್ಷ ಕಳೆದರೂ ಅದು ಅಸಲಿ ಉಂಗುರ ಎಂದೇ ಎಲಿಜಬೆತ್​ ಭಾವಿಸಿದ್ದಳು.

ಒಂದು ದಿನ ಹಳೆಯ ಗೆಳತಿಯೊಬ್ಬಳು ಎಲಿಜಬೆತ್​ಗೆ ಸಿಕ್ಕಿದ್ದಳು. ಈ ವೇಳೆ ಮಾತನಾಡುತ್ತಾ ಗಂಡ ಕೊಟ್ಟ ಉಂಗುರ ತೋರಿಸಿದ್ದಳು. ಉಂಗುರವನ್ನು ಸರಿಯಾಗಿ ಪರಿಶೀಲನೆ ಮಾಡಿದಾಗ ಅದು ನಕಲಿ ಎನ್ನುವ ವಿಚಾರ ಬಯಲಿಗೆ ಬಂದಿದೆ. ಈ ಉಂಗರವನ್ನು ಸಿಝಡ್​ ಹಾಗೂ 95 ಇಂದ ಮಾಡಲಾಗಿದೆ ಎಂದು ಗೆಳತಿ ಹೇಳಿದ್ದಳು. ಅದೇನೆಂಬುದನ್ನು ಪರಿಶೀಲಿಸಿದಾಗ ನಿಜ ವಿಚಾರ ಗೊತ್ತಾಗಿದೆ.

ಸಿಝಡ್​ ಹಾಗೂ 95 ಎಂದರೆ ಚಿನ್ನ ಮತ್ತು ಕ್ಯೂಬಿಕ್​ ಜಿರ್ಕೋನಿಯಾದಿಂದ ಮಿಶ್ರಣದಿಂದ ಮಾಡಲ್ಪಟ್ಟ ಲೋಹ. ಇದು ನೋಡಲು ಪ್ಲಾಟಿನಂ ರೀತಿಯಲ್ಲೇ ಇರುತ್ತದೆ ಎಂಬ ವಿಚಾರ ಗೊತ್ತಾಗಿದೆ. ಈ ಉಂಗುರದ ಮೂಲ ಬೆಲೆ ಏಳು ಲಕ್ಷ ರೂಪಾಯಿ ಎಂದು ಆತ ಹೇಳಿಕೊಂಡಿದ್ದ. ಆದರೆ, ಇದರ ಬೆಲೆ ಕೇವಲ 900 ರೂಪಾಯಿ ಎಂಬ ವಿಚಾರ ಬೆಳಕಿಗೆ ಬಂದಿದೆ.

Comments are closed.