ಅನಿವಾಸಿ ಭಾರತೀಯರು

ಗಲ್ಫ್ ದೇಶದಲ್ಲಿ ಲಾಕ್‌ಡೌನ್ ಸಂಕಷ್ಟಕ್ಕೊಳಗಾದ ಕನ್ನಡಿಗರಿಗೆ ಸ್ಪಂದಿಸಲು ‘ಕನ್ನಡಿಗಾಸ್ ಹೆಲ್ಪ್‌ಲೈನ್’

Pinterest LinkedIn Tumblr

ಬೆಂಗಳೂರು: ಕೋವಿಡ್19 ಕೊರೋನಾ ವೈರಸ್ ಹಿನ್ನೆಲೆಯಲ್ಲಿ ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಒಳಗಾಗಿರುವ ಅನಿವಾಸಿ ಕನ್ನಡಿಗರಿಗೆ ಸಹಾಯಹಸ್ತ ಚಾಚಲು ಸಮಾನ ಮನಸ್ಕ ಅನಿವಾಸಿ ಕನ್ನಡಿಗರ ತಂಡವು ಮುಂದಾಗಿದೆ. ಕಷ್ಟದಲ್ಲಿರುವ ಕನ್ನಡಿಗರಿಗೆ ಸ್ಪಂದಿಸಲು ‘ಕನ್ನಡಿಗಾಸ್ ಹೆಲ್ಪ್‌ಲೈನ್’ ಎಂಬ ವೈಬ್‌ಸೈಟ್ ವ್ಯವಸ್ಥೆ ಕಲ್ಪಿಸಿದೆ.

ವಿದೇಶದಲ್ಲಿರುವ ಕನ್ನಡಿಗರಿಗೆ ಲಾಕ್ಡೌನ್ ಸಮಸ್ಯೆಯಿಂದ ಆಹಾರದ ಕೊರತೆ, ವೈದ್ಯಕೀಯ ಚಿಕಿತ್ಸೆ ಕುರಿತು ಮಾಹಿತಿ, ಕಾನೂನಾತ್ಮಕ ಸಮಸ್ಯೆಗಳಿದ್ದರೆ ವೆಬ್‌ಸೈಟ್‌ನಲ್ಲಿ ಅದರ ವಿವರಗಳೊಂದಿಗೆ ಕಳುಹಿಸಿದಲ್ಲಿ, ದುಬೈ ಅನಿವಾಸಿ ಕನ್ನಡಿಗರ ತಂಡವು ಅಂತವರನ್ನು ಸಂಪರ್ಕಿಸಿ ಅವರಿಗೆ ಅಗತ್ಯ ನೆರವು ನೀಡುವಲ್ಲಿ ಸಕಾರಾತ್ಮಕವಾಗಿ ಸ್ಪಂದಿಸಲಿದೆ. ಇದು ಯಾವುದೇ ಸರ್ಕಾರಿ ವೆಬ್‌ಸೈಟ್ ಅಲ್ಲ, ಅಥವಾ ಸರ್ಕಾರದೊಂದಿಗೆ ಸಹಭಾಗಿತ್ವದ ಸಂಸ್ಥೆಯೂ ಅಲ್ಲ. ಕೇವಲ ಕನ್ನಡಿಗರ ಸಂಕಷ್ಟಕ್ಕೆ ಮಿಡಿಯಲು ಸಮಾನ ಮನಸ್ಕರು ಮಾಡಿದ ವೆಬ್‌ಸೈಟ್ ಎಂದು ದುಬೈ ಅನಿವಾಸಿ ಕನ್ನಡಿಗರ ಪ್ರಕಟನೆ ತಿಳಿಸಿದೆ.

ಇನ್ನು ಸಾವಿರಾರು ಮಂದಿ ಅನಿವಾಸಿ ಕನ್ನಡಿಗರು ಲಾಕ್‌ಡೌನ್ ಸಮಸ್ಯೆಯಿಂದ ಹೈರಾಣಾಗಿದ್ದಾರೆ, ಅಂತವರಿಗೆ ಈಗಾಗಲೇ ಕನ್ನಡಿಗ ಉದ್ಯಮಿಗಳು ಊಟ ವಸತಿ ವ್ಯವಸ್ಥೆ ಕಲ್ಪಿಸಿ ನೆರವು ನೀಡುತ್ತಿದ್ದಾರೆ. ಜನರಿಗೆ ಬೇಕಾಗುವ ಅಗತ್ಯ ಸಾಮಾಗ್ರಿಗಳ ಕಿಟ್ ಪೂರೈಕೆಯ ಕಾರ್ಯವನ್ನು ಮಾಡಲಾಗುತ್ತಿದೆ. ಯಾವುದೇ ಸಮಸ್ಯೆಯಾಗದಂತೆ ಪ್ರಾಮಾಣಿಕ ಕೆಲಸವನ್ನು ಮಾಡುತ್ತಿದ್ದೇವೆ ಎಂದು ಕರ್ನಾಟಕ ಎನ್.ಆರ್.ಐ. ಪೋರಂ ಅಧ್ಯಕ್ಷ ಪ್ರವೀಣ್ ಕುಮಾರ್ ಶೆಟ್ಟಿ ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗೆ: 

https://uaekannadahelpline.club

ಈ-ಮೇಲ್: 

http://KannadigasHelpline@gmail.com

(ವರದಿ- ಯೋಗೀಶ್ ಕುಂಭಾಸಿ)

Comments are closed.