ಅನಿವಾಸಿ ಭಾರತೀಯರು

ಎರಡು ನಾಯಿಗಳನ್ನು ಬೆಂಕಿ ಇಟ್ಟು ಹಿಂಸಿಸಿದ ಆರೋಪ; ಅಮೆರಿಕದ ಎನ್​ಆರ್​ಐ ವಿಕ್ರಮ್ ಚತ್ವಾಲ್ ಸೆರೆ

Pinterest LinkedIn Tumblr

hotelier-vikram

ನ್ಯೂಯಾರ್ಕ್: ಭಾರತೀಯ ಮೂಲದ ಹೊಟೇಲ್ ಉದ್ಯಮಿ ವಿಕ್ರಮ್ ಚತ್ವಾಲ್ ವಿರುದ್ಧ ಅಮೆರಿಕದ ವೂಸ್ಟರ್ ಸ್ಟ್ರೀಟ್ ಬಳಿ ಎರಡು ನಾಯಿಗಳನ್ನು ಬೆಂಕಿ ಇಟ್ಟು ಹಿಂಸಿಸಿದ ಆರೋಪ ಹೊರಸಲಾಗಿದ್ದು, ಪೊಲೀಸರು ಅವರನ್ನು ಬಂಧಿಸಿದ್ದಾರೆ.

33 ಲಕ್ಷ ರೂಪಾಯಿ ಜಾಮೀನಿನ ಮೇಲೆ ಸದ್ಯ ಬಿಡುಗಡೆ ಮಾಡಲಾಗಿದ್ದು, ವಿಚಾರಣೆಯನ್ನು ಡಿಸೆಂಬರ್ 8ಕ್ಕೆ ಮುಂದೂಡಲಾಗಿದೆ. 44 ವರ್ಷದ ಚತ್ವಾಲ್ ಮೇಲೆ ಕ್ರಿಮಿನಲ್ ಕಿಡಗೇಡಿತನ, ಪ್ರಾಣಿಗೆ ಚಿತ್ರಹಿಂಸೆ ಮತ್ತು ಗಾಯ ಮಾಡಿದ, ಅಜಾಗರೂಕತೆ ಹಾಗೂ ಅಗ್ನಿ ಸ್ಪರ್ಶದ ಆರೋಪವನ್ನು ದಾಖಲಿಸಲಾಗಿತ್ತು. ಕೋರ್ಟ್ನಲ್ಲಿ ಚತ್ವಾಲ್ ಪರ ವಕೀಲ ತನ್ನ ಕಕ್ಷಿದಾರ ಪ್ರಾಣಿಪ್ರಿಯ ಹಾಗೂ ಅಹಿಂಸಾವಾದಿಯಾಗಿದ್ದು, ಬೈಪೋಲಾರ್ ಖಾಯಿಲೆಯಿಂದ ಬಳಲುತ್ತಿದ್ದಾರೆ ಎಂದು ವಾದಿಸಿದ್ದರು. ಡ್ರೀಮ್ ಹೋಟೆಲ್ ಗುಂಪಿನ ಸ್ಥಾಪಕರಾದ ಚತ್ವಾಲ್ಗೆ ಮ್ಯಾನ್ಹಟನ್ ಕ್ರಿಮಿನಲ್ ಕೋರ್ಟ್ ಜಾಮೀನು ನೀಡಿದೆ. ಚತ್ವಾಲ್ ಹಲವು ಪ್ರಕರಣದಲ್ಲಿ ಭಾಗಿಯಾಗಿದ್ದು, ಈ ಹಿಂದೆ 2013ರಲ್ಲಿ ಏರ್ಪೋರ್ಟ್ ಚೆಕ್ಪಾಯಿಂಟ್ನಲ್ಲಿ ಮಾದಕ ವಸ್ತು ಅಕ್ರಮ ಸಾಗಾಣಿಕೆಯ ಕುರಿತು ಪ್ರಕರಣ ದಾಖಲಾಗಿತ್ತು. ನಂತರ ಫ್ಲೋರಿಡಾ ಜೈಲಿನಲ್ಲಿ ಚತ್ವಾಲ್ ಕೆಲ ಸಮಯ ಇದ್ದರು.

Comments are closed.